ಹೆಚ್‌.ವಿಶ್ವನಾಥ್‌ರಿಂದ ನಟಿಯೊಂದಿಗೆ ‘ಸೆಕ್ಸ್‌ಟಾಕ್‌’ ಹೊಸ ಬಾಂಬ್‌ ಸಿಡಿಸಿದ ಸಾ.ರಾ ಮಹೇಶ್‌!

ಮೈಸೂರು: ಜೆಡಿಎಸ್‌ ಶಾಸಕ ಸಾ.ಮಹೇಶ್‌ ಹಾಗೂ ಅನರ್ಹ ಶಾಸಕ ಹೆಚ್‌.ವಿಶ್ವನಾಥ್‌ರ ನಡುವಿನ ಟಾಕ್‌ ವಾರ್‌ ಈಗ ಇನ್ನೊಂದು ಹಂತ ತಲುಪಿದ್ದು, ಈ ನಡುವೆ ಕಳೆದ ಎರಡು ತಿಂಗಳುಗಳ ಹಿಂದೆ ನಟಿಯೊಬ್ಬರ ಜೊತೆಗೆ ನಡೆಸಿದ್ದಾರೆ ಎನ್ನಲಾಗಿದ್ದ ಸೆಕ್ಸ್‌ ಟಾಕ್‌ ಟಾಪಿಕ್‌ ಅನ್ನು ಮತ್ತೊಮ್ಮೆ ಕೆದಕಿದ್ದು, ಇದಕ್ಕೆ ಸಂಬಂಧಪಟ್ಠಂತೆ ಸಿಡಿಯನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿದ್ದಾರೆ.

ಅವರು ಇಂದು ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತ ಕಳೆದ ಎರಡು ತಿಂಗಳಿನಿಂದ ವೈರಲ್‌ ಆಗಿರುವ ಆಡಿಯೋಕ್ಕೆ ಸಂಬಂಧಪಟ್ಟಂತಎ ನೀವು ಮಾತನಾಡಿಲ್ಲ, ನೀವು ನನ್ನ ಯೋಗ್ಯತೆ ಬಗ್ಗೆ ಮಾತನಾಡುವುದು ಬೇಡ, ನಿಮ್ಮಂತೆ ನಾವು ಬದುಕಿದ್ದರೆ ನಾವು ಕೆರೆಯೋ, ಬಾವಿಯನ್ನು ನೋಡಿಕೊಳ್ಳಬೇಕಾಗಿತ್ತು ಅಂತ ಅವರು ಹೇಳಿದರು. ಇನ್ನು ಇದೇ ವೇಳೆ ಅವರು ಮಾತನಾಡುತ್ತ ನಾನು ನನ್ನ ರಾಜಕೀಯ ಇತಿಹಾಸದಲ್ಲಿ ಯಾರ ವಿರುದ್ದ ಕೂಡ ವೈಯುಕ್ತಿಕವಾಗಿ ಟೀಕೆ ಮಾಡಿಲ್ಲ ಅಂತ ಹೇಳಿದ ಅವರು, ಕಾಂಗ್ರೆಸ್‌ನಿಂದ ಅವರು ಹೊರ ಬಿದ್ದ ಮೇಲೆ ಅವರನ್ನು ಕರೆದುಕೊಂಡು ಬಂದು ಗೆಲ್ಲಿಸಿದ್ದೇವು ಅಂತ ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!