ಸ್ಮರಣ ಶಕ್ತಿ ವೃದ್ಧಿಗೆ ಬ್ರಾಹ್ಮಿ ರಾಮಬಾಣ

ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಇದು ಕಂಗೊಳಿಸುತ್ತದೆ. ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಿದ್ರು ಒಳಿತು. ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ. ಇದು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.  ಡೀಮೆನ್ಷಿಯ, ಪಾರ್ಕಿನ್ಸನ್ಸ್, ಅಲ್ಜೈಮರ್ ಇತ್ಯಾದಿ ಕಾಯಿಲೆಗಳಿಗೆ ಬ್ರಾಹ್ಮಿಯನ್ನು ಉಪಯೋಗಿಸಲಾಗುತ್ತೆ. ಬ್ರಾಹ್ಮಿ ಚೂರ್ಣ, ಬ್ರಾಹ್ಮಿ ವಟಿ, ಬ್ರಾಹ್ಮಿ ಘೃತ ಇತ್ಯಾದಿ ರೂಪದಲ್ಲಿ ಬ್ರಾಹ್ಮಿಯನ್ನ ಬಳಸುತ್ತಾರೆ. ಹೃದ್ರೋಗದಿಂದ ಬಳಲುವವರು ಬ್ರಾಹ್ಮಿಯನ್ನ ಬಳಸಬಹುದು. ತಲೆನೋವು ಇದ್ದರೆ ಎಳ್ಳೆಣ್ಣೆಯ ಜೊತೆಗೆ ಬ್ರಾಹ್ಮಿಯ ತೈಲವನ್ನ ಬೆರೆಸಿ ಹಚ್ಚಿಕೊಂಡ್ರೆ ತಲೆನೋವು ವಾಸಿಯಾಗುತ್ತೆ.  
Share Post

Leave a Reply

Your email address will not be published. Required fields are marked *

error: Content is protected !!