ಅದ್ದೂರಿ ಬರ್ತ್ ಡೇ ಬೇಡ ಎಂದ ಅಪ್ಪು – ಅಭಿಮಾನಿಗಳಲ್ಲಿ ನಿರಾಶೆ

ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮ ದಿನ. ಈ ದಿನವನ್ನ ಅದ್ದೂರಿಯಿಂದ ಆಚರಿಸಲು ಅಪ್ಪು ಅಭಿಮಾನಿಗಳು ನಿರ್ಧರಿಸಿದ್ರು. ಆದ್ರೆ ಅಭಿಮಾನಿಗಳಲ್ಲಿ ಪುನೀತ್ ನಿರಾಶೆ ಮೂಡಿಸಿದ್ದಾರೆ. ಅಭಿಮಾನಿಗಳಿಗೆ ಸೆಲ್ಫಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿರುವ ಪುನೀತ್ ಮಾರ್ಚ್ 17ರಂದು ಯಾರೂ ಮನೆ ಕಡೆ ಬರಬೇಡಿ. ನಾನು ಮನೆಯಲ್ಲಿ ಇರೋಲ್ಲ. ಕೇಕ್ ಹೂವಿನಹಾರವನ್ನ ಯಾರು ತರಬೇಡಿ. ಅದರ ಬದಲು ಆ ಹಣವನ್ನ ಉತ್ತಮ ಕಾರ್ಯಕ್ಕೆ ವ್ಯಯಿಸಿ ಅಂತ ಮನವಿ ಮಾಡಿದ್ದಾರೆ. ಹೃದಯದಲ್ಲಿ ಪ್ರೀತಿ ತುಂಬಿಕೊಂಡು ಬರೀಗೈಯಲ್ಲಿ ಬಂದು ವಿಶ್ ಮಾಡಿ ಅಂತ ಹೇಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಈಗ ಅದ್ದೂರಿ ಬರ್ತ್ ಡೇಗೆ ಎಲ್ಲರೂ ಗುಡ್ ಬೈ ಹೇಳುತ್ತಿದ್ದಾರೆ. ಕಿಚ್ಚ ಸುದೀಪ್, ದರ್ಶನ್, ಯಶ್ ಬಳಿಕ ನಟ ಸಾರ್ವಭೌಮ ಕೂಡ ಈಗ ಅದೇ ಹಾದಿ ತುಳಿದಿದ್ದಾರೆ. ಇದು ಚಂದನವವನದಲ್ಲಿ ನಡೆಯುತ್ತಿರೋ ಒಳ್ಳೆಯ ಬೆಳವಣಿಗೆಯಾಗಿದೆ.
Share Post

Leave a Reply

Your email address will not be published. Required fields are marked *

error: Content is protected !!