ಮಂಗಳನ ಮೇಲೆ ಮೊದಲು ಕಾಲಿಡೋದು ಯಾರು ಗೊತ್ತಾ ?

ಈಗ ಜಗತ್ತನ್ನೇ ಕಾಡುತ್ತಿರೋ ಮಿಲಿಯನ್ ಡಾಲರ್ ಪ್ರಶ್ನೆ –ಮಂಗಳನ ಅಂಗಳದಲ್ಲಿ ಕಾಲಿಡೋ ಮೊದಲ ಮಾನವ ಯಾರು ?  ಈ ಸ್ಟೋರಿ ನೋಡಿದ್ಮೇಲೆ ಆ ಲಿಸ್ಟ್ ನಲ್ಲಿ ನಿಮ್ಮ ಹೆಸರೂ ಇದ್ಯಾ ನೋಡಿ?

ಹೌದು ಚಂದ್ರನಲ್ಲಿಗೆ ಮಾನವ ಹೋಗಿ ಬಂದಿದ್ದಾಯ್ತು. ಭಾರತೀಯರೂ ಮುಂದಿನ ವರ್ಷ ಚಂದ್ರನ ಹತ್ತಿರ ಹಾರಲಿದ್ದಾರೆ. ಈ ಮಧ್ಯೆ, ಮಂಗಳನ ಅಂಗಳದಲ್ಲಿ ಮನೆ ಕಟ್ಟಿಕೊಳ್ಳುವ ಕನಸೊಂದು ವಿಶ್ವದ ಬಹುತೇಕ ದೇಶಗಳಲ್ಲಿ ಹುಟ್ಟಿಕೊಂಡಿದೆ. ಅಮೆರಿಕಾದ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾರ್ಸ್ ಅಭಿಯಾನಕ್ಕೆ ಆಗಲೇ ಕಂಪ್ಲೀಟ್ ಸಿದ್ಧತೆ ಮಾಡಿಕೊಂಡಿದೆ. ಎಲ್ಲಾ  ಸರಿಹೋದರೆ, ಮುಂದಿನ ವರ್ಷ ಮಾನವಸಹಿತ ಮಂಗಳಯಾನ ಆರಂಭಗೊಳ್ಳಲಿದೆ. ಮೊದಲ ಫ್ಲೈಟ್ ನಲ್ಲಿ ಯಾರು ಹೋಗಬೇಕು ಅಂತ ಪಟ್ಟಿ ಮಾಡಲು ನಾಸಾ ರೆಡಿಯಾಗಿದೆ.

ಈ ಪಟ್ಟಿಯಲ್ಲಿ ಯಾರ್ಯಾರ ಹೆಸರು ಇದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಮಂಗಳನಲ್ಲಿ ಮೊದಲು ಕಾಲಿಡುವ ವ್ಯಕ್ತಿ ನಿಶ್ಚಿತವಾಗಿ ಮಹಿಳೆಯೇ ಆಗಿರಲಿದ್ದಾಳೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ನಾಸಾ ಆಡಳಿತಾಧಿಕಾರಿ ಜಿಮ್ ಬ್ರಿಡೆನ್ಸ್ಟೀನ್ ಈ ವಿಷಯ ತಿಳಿಸಿದ್ದಾರೆ. ಆದರೆ, ಆ ಮಹಿಳೆ ಯಾರು ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ.

Share Post

Leave a Reply

Your email address will not be published. Required fields are marked *

error: Content is protected !!