ಗೋದಾವರಿ ದೋಣಿ ದುರಂತದಲ್ಲಿ 11 ಸಾವು, ಹಲವರು ನಾಪತ್ತೆ

ಆಂಧ್ರಪ್ರದೇಶ : ದೋಣಿಯೊಂದು ನೀರಿನಲ್ಲಿ ಮುಗುಚಿ ದೋಣಿಯಲ್ಲಿದ್ದ ಅರವತ್ತಕ್ಕೂ ಹೆಚ್ಚಿ‌ನ ಜನರಲ್ಲಿ 11 ಮಂದಿ ಸಾವನ್ನಪ್ಪಿದ್ದು ಹಲವರು ನಾಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ನದಿಯಲ್ಲಿ ನಡೆದಿದೆ.

ದೋಣಿಯಲ್ಲಿದ್ದ ಒಟ್ಟು 63 ಮಂದಿ ಪ್ರಯಾಣಿಕರಲ್ಲಿ 11 ಜನ‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಇದುವರೆಗೆ 23 ಮಂದಿಯನ್ನು ರಕ್ಷಿಸಲಾಗಿದೆ. ಉಳಿದ 29 ಮಂದಿ ನಾಪತ್ತೆಯಾಗಿದ್ದು ಪತ್ತೆ ಕಾರ್ಯ ನಡೆಯುತ್ತಿದೆ.

ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿಗಳು ಆಗಮಿಸಿದ್ದು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಘಟನೆ ಸಂಬಂಧ ತನಿಖೆ ಕೈಗೊಳ್ಳುವಂತೆ ಆಂದ್ರ ಮುಖ್ಯಮಂತ್ರಿ ಜಗನ್ ಆದೇಶ ನೀಡಿದ್ದಾರೆ. ಅಲ್ಲದೇ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!