ಪ್ರಿಯಾಂಕ್ ಖರ್ಗೆ ಅವರದ್ದು ಕೆದಕಿ ಟೀಕೆ ಮಾಡುವ ಸ್ವಭಾವ : ಸಂಸದ ಉಮೇಶ್ ಜಾಧವ್

ಕಲಬುರಗಿ : ಪ್ರಿಯಾಂಕ್ ಖರ್ಗೆ ಅವರದ್ದು ಮೊಸರಲ್ಲಿ ಕಲ್ಲು ಹುಡುಕೋ ಪ್ರವೃತ್ತಿ.
ಇರಲಾರದ ವಿಷಯವನ್ನು ಕೆದಕಿ ಟೀಕೆ ಮಾಡುವ ಸ್ವಭಾವ ಅವರದ್ದಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ದ ಸಂಸದ ಉಮೇಶ್ ಜಾಧವ್ ಹರಿಹಾಯ್ದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಭಾಗಕ್ಕೆ ಸಚಿವ ಸ್ಥಾನ ನೀಡಿಲ್ಲ. ಅಭಿವೃದ್ಧಿ ನಡೆದಿಲ್ಲ ಅಂತ ಆರೋಪ ಮಾಡ್ತಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಿಲೂ ಹಿಂದುಳಿದ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಸಚಿವ ಸ್ಥಾನವನ್ನೂ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು ಸಹಿಸದೆ ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಮಾಡ್ತಿದಾರೆ ಎಂದು‌ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಂಸದ ಜಾಧವ್ ಕಿಡಿಕಾರಿದರು.

ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಸಿಗಲಿಲ್ಲವೆಂದು ಜಾಧವ್ ಕಾಂಗ್ರೆಸ್ ತೊರೆದಿದ್ದರು. ಆದ್ರೆ ಈಗ ಈ ಭಾಗಕ್ಕೆ ಒಂದೂ ಸಚಿವ ಸ್ಥಾನ ನೀಡಿದಿದ್ದರೂ ಸುಮ್ಮನೆ ಕುಳಿತಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಅವರ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ‌ ನೀಡಿ
ಕಲಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಅವರು ಹರಿಹಾಯ್ದರು.

Share Post

Leave a Reply

Your email address will not be published. Required fields are marked *

error: Content is protected !!