ಕರಡಿ ಧಾಳಿ : ಓರ್ವ ಸಾವು, ನಾಲ್ವರಿಗೆ ಗಾಯ

ಹೊಸದುರ್ಗ : ತಾಲ್ಲೂಕಿನ ದಳವಾಯಿಕಟ್ಟೆ ಗ್ರಾಮದಲ್ಲಿ ಕರಡಿ ದಾಳಿಯಿಂದ ನಾಲ್ವರು ಗಾಯಗೊಂಡು ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

ಮಧ್ಯಾಹ್ನ ಸುಮಾರು ಒಂದು ಗಂಟೆಯ ಸಮಯದಲ್ಲಿ ದಳವಾಯಿಕಟ್ಟೆ ಗ್ರಾಮಕ್ಕೆ ಕರಡಿ ನುಗ್ಗಿದ್ದು ಸಿಕ್ಕಸಿಕ್ಕವರ ಮೇಲೆ ಏಕಾಏಕಿ ಧಾಳಿ ಮಾಡಿದೆ.

ಕರಡಿ ಧಾಳಿಯಲ್ಲಿ ರಮೇಶ್, ಉಮೇಶ್, ತಿಪ್ಪೇಸ್ವಾಮಿ ಮತ್ತು ಶಶಿ ಎಂಬುವವರು ಸಿಕ್ಕಿಕೊಂಡಿದ್ದಾರೆ. ಇವರುಗಳ ಮೇಲೆ ಎರಗಿದ ಕರಡಿ ಗಂಭೀರವಾಗಿ ಗಾಯಗಳಿಸಿದೆ. ಗಾಯಾಳುಗಳು ಶ್ರೀರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾಳಿಗೊಳಗಾದವರ ಪೈಕಿ ತೀವ್ರ ಗಾಯಗೊಂಡಿದ್ದ ರಾಜಪ್ಪ(50) ಎಂಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ರಾಜಪ್ಪ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿ ಕರಡಿ ಹಿಡಿದು ಕಾಡಿಗಟ್ಟುವ ಕಾರ್ಯ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!