ಪಿ.ಚಿದಂಬರಂ ಅರ್ಜಿ ವಜಾ, ಮತ್ತೆ ಸೆ.19 ತನಕ ಜೈಲು..!

ನವದೆಹಲಿ: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಅರ್ಜಿಯನ್ನ ಸಿಬಿಐ ಕೋರ್ಟ್​ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರವರೆಗೂ ತಿಹಾರ್ ಜೈಲೇ ಗತಿಯಾಗಿದೆ.

ಈಗಾಗಲೇ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿದಂಬರಂ, ಇಡಿ ಮುಂದೆ ಶರಣಾಗುವುದಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!