ಕಾಡಿನಲ್ಲಿ ಸಿಡಿಮದ್ದು ಕೊಂಡೊಯ್ಯುತ್ತಿದ್ದ ಇಬ್ಬರ ಬಂಧನ

ಕೊಳ್ಳೇಗಾಲ : ಚೀಲವೊಂದರಲ್ಲಿ ಸಿಡಿಮದ್ದುಗಳನ್ನು ತುಂಬಿಕೊಂಡು ಒಂದೆಡೆಯಿಂಸ ಮತ್ತೊಂದೆಡೆಗೆ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಅರಣ್ಯ ಸಂಚಾರಿದಳದ ಪೊಲೀಸರು ಸಿಡಿಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರ ವ್ಯಾಪ್ತಿಯ ಮೋಳೆ ಗ್ರಾಮದ ಮಹಾದೇವ(45) ಹಾಗೂ ಕುಣಗಳ್ಳಿ ಗ್ರಾಮದ ಚಿಕ್ಕಣ್ಣ(48) ಎಂಬಾತರೇ ಸಿಡಿಮದ್ದು ಸಾಗಿಸುವ ವೇಳೆ ಸಿಕ್ಕಿಬಿದ್ದವರು.

ಕಾಡು ಪ್ರಾಣಿಗಳಿಗೆ ಹಾಕುವ ಸಲುವಾಗಿ ಸಿಡಿಮದ್ದು ಕೊಂಡೊಯ್ಯುತ್ತಿದ್ದ ಆರೋಪಿಗಳು ತಾಲ್ಲೂಕಿನ ಜಾಗೇರಿ ಗ್ರಾಮದ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಸಂಚಾರಿ ದಳದ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ‌. ಈ ವೇಳೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ನಲವತ್ತಕ್ಕೂ ಹೆಚ್ಚು ಸಿಡಿಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ಒಪ್ಪಿಸಲಾಗಿದ್ದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಆರೋಪಿಗಳನ್ನು ಬಂಧಿಸಲು ನಡೆಸಿದ ಧಾಳಿಯಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಲೋಕೇಶ್, ಗುರುಸ್ವಾಮಿ, ಕುಮಾರ್, ಸ್ವಾಮಿ ಪಾಲ್ಗೊಂಡಿದ್ದರು.

Share Post

Leave a Reply

Your email address will not be published. Required fields are marked *

error: Content is protected !!