‘ಡಿಕೆಶಿ ಅವರಿಗೋಸ್ಕರ ಕಾನೂನು ಬದಲಿಸಲು ಸಾಧ್ಯವಿಲ್ಲ’ : ಆರ್.ಅಶೋಕ್

ಸನ್ಮಾನ್ಯ ಡಿಕೆಶಿ ಅವರಿಗೋಸ್ಕರ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಅವರಿಗೋಸ್ಕರ ಈ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ. ಈ ಹಿಂದೆ ಯಡಿಯೂರಪ್ಪ ಹಾಗೂ ಜನಾರ್ಧನ ರೆಡ್ಡಿ ಅವರ ಬಂಧನವಾಗಿತ್ತು. ಈ ವೇಳೆ, ಕಾನೂನು ಬದಲಾಯಿಸುವಂತೆ ನಾವು ಕೇಳಿರಲಿಲ್ಲ.

ಬೆಂಗಳೂರು : ಸನ್ಮಾನ್ಯ ಡಿಕೆಶಿ ಅವರಿಗೋಸ್ಕರ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಅವರಿಗೋಸ್ಕರ ಈ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ. ಈ ಹಿಂದೆ ಯಡಿಯೂರಪ್ಪ ಹಾಗೂ ಜನಾರ್ಧನ ರೆಡ್ಡಿ ಅವರ ಬಂಧನವಾಗಿತ್ತು. ಈ ವೇಳೆ, ಕಾನೂನು ಬದಲಾಯಿಸುವಂತೆ ನಾವು ಕೇಳಿರಲಿಲ್ಲ. ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಸ್ನೇಹಿತರು. ಹೀಗಾಗಿ ಡಿಕೆಶಿ ಅವರಿಗೆ ಗೊತ್ತಿರಬೇಕು ಸುಮ್ಮನೇ ಬಂಧಿಸಿಲ್ಲ ಎಂದು ಅಂತ ಹೇಳಿದರು.

ಇನ್ನು ಜಾತಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿರುವುದು ತಪ್ಪು ಎಂದು ಅಶೋಕ್, ಯಾರೇ ಇರಲಿ, ಎಷ್ಟೇ ದೊಡ್ಡವರಿರಲಿ, ಈ ನೆಲದ ಕಾನೂನಿನಗೆ ಗೌರವ ಕೊಡಬೇಕು. ತಪ್ಪಿತಸ್ಥರಲ್ಲ ಎಂಬುದು ನ್ಯಾಯಾಲಯದಲ್ಲಿ ತೀರ್ಮಾನ ಆಗುತ್ತದೆ ಎಂದು ತಿಳಿಸಿದರು…

Share Post

Leave a Reply

Your email address will not be published. Required fields are marked *

error: Content is protected !!