ರಸ್ತೆಗಳ ಅಭಿವೃದ್ಧಿಯಿಂದ ಅಪಘಾತಗಳು ಹೆಚ್ಚು : ಡಿಸಿಎಂ

ಚಿತ್ರದುರ್ಗ : ರಸ್ತೆಗಳು ಅಭಿವೃದ್ದಿಯಾದರೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಡಿಸಿಎಂ ಗೋವಿಂದ ಎಂ.ಕಾರಜೋಳ ಹೇಳಿಕೆ ನೀಡಿದ್ದಾರೆ.

ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿಯಲ್ಲಿ ಬುಧವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಪರಿಶೀಲನೆಗೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಸ್ತೆಗಳು ಅಭಿವೃದ್ದಿ ಹೊಂದಿದ ಹಿನ್ನಲೆಯಲ್ಲಿ ಪ್ರತಿನಿತ್ಯ ಅಪಘಾತಗಳು ಹೆಚ್ಚುತ್ತಿವೆ ಎಂದು ಅವರು ಹೇಳಿದರು.

ಪ್ರತಿದಿನ 10 ಸಾವಿರ ರಸ್ತೆ ಅಪಘಾತಗಳು ನಡೆಯುತ್ತಿವೆ. ಇದಕ್ಕೆ ಚನ್ನಾಗಿರೋ ರಸ್ತೆಗಳೇ ಕಾರಣ. ರಸ್ತೆಗಳು ಅಭಿವೃದ್ಧಿಯಾಗಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಅವರು ಹೇಳಿದರು.

ದೇಶದಲ್ಲಿ ಸುರಕ್ಷತೆ ದೃಷ್ಟಿಯಿಂದ ವಾಹನ ಕಾಯ್ದೆ ತಿದ್ದುಪಡಿ ತರಲಾಗಿದೆ. ದುಬಾರಿ ದಂಡ ವಿರೋಧಿಸುತ್ತೇನೆ, ಆದ್ರೆ ರಸ್ತೆ ಸುರಕ್ಷತೆ ಇಲ್ಲ ಅನ್ನೋದನ್ನು ಒಪ್ಪೋದಿಲ್ಲ ಎಂದು ಹೇಳಿದರು.

ಬಿಜೆಪಿ-ಇಡಿ ನಡುವೆ ಸಂಬಂಧ ಕಲ್ಪಿಸುವುದು ಬೇಡ

ಕಾನೂನು ತನ್ನ ಕೆಲಸ ತಾನು ಮಾಡಿಕೊಂಡು ಬರುತ್ತಿದೆಯಷ್ಟೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಇಡಿಗೆ ಸಂಬಂಧ ಕಲ್ಪಿಸುವುದು ತಪ್ಪು ಎಂದು ಡಿಸಿಎಂ ಗೋವಿಂದ ಕಾರುಜೋಳ ಹೇಳಿದರು.

ಇಡಿ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ವಿಚಾರದ ಬಗ್ಗೆ ಮಾತಾಡಬೇಡಿ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ ಎಂದರು.
ಕಾನೂನು ತನ್ನ ಕೆಲಸ ತಾನು ಮಾಡಿಕೊಂಡು ಬರುತ್ತಿದೆ. ಬಿಜೆಪಿಗೂ ಮತ್ತು ಇಡಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

Share Post

Leave a Reply

Your email address will not be published. Required fields are marked *

error: Content is protected !!