ಪುದಿನ ಸೊಪ್ಪಿನ ಔಷಧೀಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಆಯುರ್ವೇದ ಔಷಧ  ತಯಾರಿಕೆಯಲ್ಲಿ  ಪುದಿನ ಎಲೆಗೆ ಅಗ್ರಸ್ಥಾನ. ಪುದಿನಾ ಒಂದು ಗಿಡಮೂಲಿಕೆಯಾಗಿದ್ದು ಔಷಧೀಯ ಗುಣಗಳನ್ನ ಹೊಂದಿದೆ. ಚ್ಯೂಯಿಂಗ್ ಗಮ್ ನಿಂದ ಹಿಡಿದು ಟೂಥ್ ಪೇಸ್ಟ್, ಆಯಿಲ್ ನಲ್ಲಿಯೂ ಪುದಿನ ಇರುತ್ತೆ.  ಸ್ಮರಣಶಕ್ತಿಗಾಗಿ, ಕ್ಯಾನ್ಸರ್ ರೋಗ ತಡೆಗಟ್ಟಲು, ಮೊಡವೆಗಳ ನಿವಾರಣೆಗಾಗಿ, ಅಲರ್ಜಿ ತಡೆಗಟ್ಟಲು ಪುದಿನ ಉಪಯೋಗಿಸಲಾಗುತ್ತೆ. ಖಿನ್ನತೆಯನ್ನ ಹೋಗಲಾಡಿಸುವಲ್ಲಿಯೂ ಪುದಿನ ಪಾತ್ರ ಮಹತ್ವದ್ದಾಗಿದೆ.  ಪುದಿನ ಸೊಪ್ಪನ್ನು ಬಾಯಲ್ಲಿ ಹಾಕಿ ಜಗಿಯುತ್ತಿದ್ದರೆ ಬಾಯಿಯ ವಾಸನೆ ದೂರವಾಗುತ್ತದೆ. ಪುದಿನ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಹೊಟ್ಟೆ ಉಬ್ಬರಿಸಿಕೊಂಡಿದ್ದರೆ ಪುದಿನ ಸೊಪ್ಪಿನ ಕಷಾಯ ಮಾಡಿ ಕುಡಿದರೆ ಅಜೀರ್ಣ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.  ರಕ್ತ ಶುದ್ದೀಕರಿಸುವಲ್ಲಿಯೂ ಪುದೀನ ಎಲೆ  ಸಹಕಾರಿಯಾಗುತ್ತದೆ. ಪುದಿನ ಎಲೆಯಲ್ಲಿ ಕ್ಯಾಲ್ಸಿಯಂ, ಪ್ರಾಸ್ಪರಸ್ ಮತ್ತು ವಿಟಮಿನ್ ಸಿ, ಡಿ, ಇ ಹಾಗೂ ವಿಟಮಿನ್ ಬಿ ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. 
Share Post

Leave a Reply

Your email address will not be published. Required fields are marked *

error: Content is protected !!