ರೈಲಿಗೆ ಸಿಲುಕಿ ಜಿಂಕೆ ಜಾತಿಯ ಚಿಗುರೆ ಸಾವು

ಕೋಲಾರ : ಜಿಂಕೆ ಜಾತಿಯ ಚಿಗುರೆಯೊಂದು ರೈಲಿಗೆ ಸಿಕ್ಕಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದಳಸನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಸುಮಾತು ಎರಡುವರೆ ವರ್ಷದ ಚಿಗುರೆ ರೈಲ್ವೆ ಹಳಿ ದಾಟುವಾಗ ರೈಲಿಗೆ ಡಿಕ್ಕಿಯಾಗಿ ಅದುನೀಗಿದೆ. ಕೋಲಾರ ದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ಗೆ ಹೋಗುವ ಪ್ಯಾಸೆಂಜರ್ ರೈಲು ಗೆ ಸಿಕ್ಕಿ ಚಿಗುರೆ ಮೃತಪಟ್ಟಿದೆ.

ಈ ಬಗ್ಗೆ ದಳಸನೂರು ಗ್ರಾಮಸ್ಥರಾದ ಮುರಳಿ ಹಾಗೂ ನಾರಾಯಣಸ್ವಾಮಿ ಎಂಬುವರು ಚಿಗುರೆ ಸತ್ತು ಬಿದ್ದಿದ್ದನ್ನು ಕಂಡು ಅರಣ್ಯ ಸಿಬ್ಬಂದಿ ಗೆ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ವಾಚರ್ ಭದ್ರಪ್ಪ ಹಾಗೂ ನಾರಣಪ್ಪ ಸ್ಥಳಕ್ಕೆ ದಾವಿಸಿ ಮೃತ ಚಿಗುರೆ ಯನ್ನು ಕೋಲಾರ ತಾಲ್ಲೂಕು ಪಶು ವೈದ್ಯಕೀಯ ಇಲಾಖೆಗೆ ಸಾಗಿಸಿದರು. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಬೆಳಿಗ್ಗೆಯಿಂದ ಜಡಿ‌ ಮಳೆಗೆ ಭಯ ಪಟ್ಟು ಕಾಡಿನಿಂದ ಹೊರ ಬಾರದೆ ಮಧ್ಯಾಹ್ನದ ವೇಳೆ ಮಳೆ‌ ನಿಂತ ಸಂದರ್ಭದಲ್ಲಿ ಆಹಾರಕ್ಕಾಗಿ ಬಂದ ಚಿಗುರೆ ರೈಲಿಗೆ ಸಿಕ್ಕಿ ಮೃತಪಟ್ಟಿದೆ.

Share Post

Leave a Reply

Your email address will not be published. Required fields are marked *

error: Content is protected !!