ಬೆಳಗಾವಿ : ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ

ಗೋಕಾಕ್ : ಪ್ರವಾಹದಿಂದ ತತ್ತರಿಸಿದ್ದ ಗೋಕಾಕ್ ಈಗ ಸಹಜ ಸ್ಥಿತಿಗೆ ಮರಳಿದೆ. ಪ್ರವಾಹದಿಂದ ಕೆಲವು ಮನೆಗಳು ಬಿದ್ದುಹೋಗಿದ್ದರೆ ಇನ್ನು ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೇ ಕೊಳೆ, ಕಸದಿಂದ ಮನೆಗಳು ಸ್ವಚ್ಛತೆ ಕಳೆದುಕೊಂಡಿದ್ದು ನಿರಾಶ್ರಿತರು ತಮ್ಮ ಮನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಮನೆಯೊಳಗೆ, ಊರೊಳಗೆ ತುಂಬಿದ ಕೊಳಚೆ, ಕಸದಿಂದ ಬರುತ್ತಿರುವ ವಾಸನೆಯಿಂದ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ.

ಊರಿನ್ನು ಸ್ವಚ್ಛಗೊಳಿಸಲು ಕೇವಲ ನಗರಸಭೆಯ ಪೌರಕಾರ್ಮಿಕರು ಸಾಲದ ಹಿನ್ನಲೆಯಲ್ಲಿ ಶಾಸಕ ಸತೀಶ ಜಾರಕಿಹೋಳಿ ಮತ್ತು ಪುತ್ರ ಸ್ವಯಂ ಪ್ರೇರಿತವಾಗಿ ತಮ್ಮ ಸತೀಶ ಶುಗರ್ಸ್ ಕಾರ್ಖಾನೆಯ ನೂರಾರು ಕಾರ್ಮಿಕರನ್ನು ಕರೆಯಿಸಿ ಸ್ವಚ್ಛ ಕಾರ್ಯ ಕೈಗೊಂಡಿದ್ದಾರೆ. ಜೊತೆಯಲ್ಲಿ ಆರು ಜೆಸಿಬಿ, ಇಪ್ಪತ್ತು ಟ್ರ್ಯಾಕ್ಟರಗಳನ್ನು ನಿಯೋಜಿಸಿ ಸ್ವಚ್ಛತೆ ಮುಂದಾಗಿದ್ದಾರೆ.

ಮನೆ ಮನೆಗಳಿಗೆ ಕಾರ್ಮಿಕರನ್ನು ಕಳುಹಿಸಿ ಸ್ವಚ್ಛತೆ ಮಾಡಲಾಗುತ್ತಿದ್ದು ಇಷ್ಟೇ ಅಲ್ಲದೇ ಪ್ರವಾಹ ಪೀಡಿತರಿಗೆ ಆರೋಗ್ಯ ತಪಾಸಣೆ ಮಾಡಿಸಲಾಯಿತು.

Share Post

Leave a Reply

Your email address will not be published. Required fields are marked *

error: Content is protected !!