ಕಲಬುರಗಿ ಜಿಲ್ಲೆಯಾದ್ಯಂತ ಸಂಭ್ರಮದ ಸ್ವಾತ್ರಂತ್ರ್ಯೋತ್ಸವ

ಕಲಬುರಗಿ : ಜಿಲ್ಲೆಯಾದ್ಯಂತ ಸಂಭ್ರಮದಿಂದ ಸ್ವಾತ್ರಂತ್ರ್ಯೋತ್ಸವ ದಿನಾಚರಣೆ ಮಾಡಲಾಯಿತು. ಡಿ.ಎ.ಆರ್. ಮೈದಾನದಲ್ಲಿ ನಡೆದ 73 ನೇ ಸ್ವಾತ್ರಂತ್ರ್ಯೋತ್ಸವ ಸಮಾರಂಭದಲ್ಲಿ ಡಿಸಿ ವೆಂಕಟೇಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ನಂತರ ಗೌರವ ವಂದನೆ ಸ್ವೀಕರಿಸಿದ ಬಳಿಕ
ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಚಿವ ಸಂಪುಟ ವಿಸ್ತರಣೆಯಾಗದೇ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದಲೇ ಧ್ವಜಾರೋಹಣ ನೆರವೇರಿತು.

ಕಾರ್ಯ ಕ್ರಮದಲ್ಲಿ ಸಂಸದರಾದ ಉಮೇಶ್ ಜಾಧವ್, ಜಿಲ್ಲಾಪಂಚಾಯತ ಅದ್ಯಕ್ಷರು ಹಾಗೂ ಅಧಿಕಾರಿಗಳು ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!