ಬೆಂಗಳೂರಿಗೆ ಸತತ ಒಂದು ವಾರ ಮಳೆ ಸಾಧ್ಯತೆ

ಬೆಂಗಳೂರು : ಮಹಾಮಳೆಗೆ ಉತ್ತರ ಕರ್ನಾಟಕ ನಲುಗಿ ಹೋಗಿದ್ದು ಯಥಾಸ್ಥಿತಿಗೆ ಮರಳುವ ಮುನ್ನವೇ ಬೆಂಗಳೂರಿನಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಸತತ ಒಂದು ವಾರ ಮಳೆಯಾಗುವ ಸಾಧ್ಯತೆ ಇದ್ದು ಬೆಂಗಳೂರಿಗರಿಗೆ ವರುಣ ಕಾಡಲಿದ್ದಾನೆ ಎಂದು ಹೇಳಲಾಗಿದೆ. ಕಳೆದ ಕಡಲವು ದಿನಗಳಿಂದ ಜಡಿ ಮಳೆ ಆಗುತ್ತಲೇ ಇದೆ. ದಿನಪೂರ್ತಿ ಮೋಡ ಕವಿದ ವಾತಾವರಣವಿದೆ. ಜೊತೆಗೆ ಜೋರಾಗಿ ಗಾಳಿ ಬೀಸತೊಡಗಿದೆ. ಇದರೊಂದಿಗೆ ಒಂದು ವಾರದ ಕಾಲ ರುಣ ಕೂಡ ಸೇರಿಕೊಳ್ಳುತ್ತಿದ್ದು ಸಾಧಾರಣ ಮಳೆಯಾಗುತ್ತೆಂದು ಹವಾಮಾನ ಇಲಾಖೆ ತಿಳಿಸಿದೆ.

ಹೌದು, ಬೆಂಗಳೂರಿನಲ್ಲೂ ಪ್ರವಾಹ ಆಗುತ್ತಾ ಎನ್ನುವ ಭಯ ಇದೀಗ ಕಾಡುತ್ತಿರಬಹುದು. ಆದರೆ ಇದರಿಂದ ಬೆಂಗಳೂರು ಸೇಫ್ ಇದೆ‌ ಎನ್ನಲಾಗ್ತಿದೆ. ಬೆಂಗಳೂರಿನಲ್ಲಿ ಮಳೆ ಬಂದ್ರೆ ಮಳೆ ನೀರಿನ ಹರಿವು ಹೆಚ್ಚಾಗಿರುತ್ತೆ. ಇದು ನೋಡುಗರಿಗೆ ಭಾರೀ ಮಳೆ ಆಗಿರೋ ರೀತಿ ಕಾಣುತ್ತೆ. ಆದ್ರೆ ಉತ್ತರ ಕರ್ನಾಟಕದ ರೀತಿ ಇಲ್ಲಿ ಮಳೆಯಾಗೋದಿಲ್ಲ.

ಇವತ್ತಿನಿಂದ ನಾಲ್ಕೈದು ದಿನ ಬೆಂಗಳೂರಿನಲ್ಲಿ 2 ರಿಂದ 7‌ ಸೆಂಟಿಮೀಟರ್‌ನಷ್ಟು ಮಳೆಯಾಗುವ ಸಂಭವವಿದೆ. ಹಾಗೇ ಮಳೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಹೇಳಲು ಸಾಧದಯವಿಲ್ಲ.

ಮಾನ್ಸೂನ್ ಇರುವುದರಿಂದ ದಿನದ ಯಾವ ಸಮಯದಲ್ಲಾದರೂ ಮಳೆಯಾಗಬಹುದೆಂದು ಹವಾಮಾನ ಇಲಾಖೆ ನಿರ್ದೇಶಕ ಸಿ‌.ಎಸ್ ಪಾಟೀಲ್ ತಿಳಿಸಿದ್ದಾರೆ.

ಇನ್ನೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಬಹುತೇಕ ‌ಕಡೆಗಳಲ್ಲಿ ಮಳೆಯಾಗುವ ಸೂಚನೆ ಇದೆ. ತಮಿಳುನಾಡಿನಲ್ಲಿ 7.6 ಕಿಲೋಮೀಟರ್ ಎತ್ತರದಲ್ಲಿ ಸರ್ಕ್ಯೋಲೇಷನ್ ಇರುವುದೇ ಮಳೆಗೆ ಪ್ರಮುಖ ಕಾರಣವಾಗಿದೆ.

ಒಟ್ಟಾರೆ ಮಳೆ ಯಾವಾಗ ಶುರುವಾಗುತ್ತೆ ಅನ್ನೋದು ಗೊತ್ತಿಲ್ಲ‌. ಕಳೆದ ಬಾರಿ ಬಿದ್ದ ಭಾರೀ ಮಳೆಯಿಂದ ಸಾಕಷ್ಟು ‌ಅವಾಂತರಗಳು ಆಗಿದ್ದು . ಈ ಬಾರಿ ಸಿಲಿಕಾನ್ ಸಿಟಿ ಮಂದಿ ಸ್ವಲ್ಪ ಅಲರ್ಟ್ ಆಗಿದ್ದರೆ ಉತ್ತಮ.

Share Post

Leave a Reply

Your email address will not be published. Required fields are marked *

error: Content is protected !!