ಕೋಲಾರ : ನೆರೆ ಸಂತ್ರಸ್ತರಿಗೆ 8 ಲಕ್ಷ ಮೌಲ್ಯ ಅಗತ್ಯ ಸಾಮಗ್ರಿ ಪೂರೈಕೆ

ಕೋಲಾರ : ಉತ್ತರ ಕರ್ನಾಟಕ ಮತ್ತು ರಾಜ್ಯದ ಹಲವೆಡೆ ಅತಿವೃಷ್ಟಿಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿದು ಬರ್ತಿದೆ.

ಚಿನ್ನದನಾಡು ಕೋಲಾರದ ಮುಳಬಾಗಿಲು ತಾಲೂಕಿನ ಎನ್ ವಡ್ಡಹಳ್ಳಿ ಟೊಮೆಟೊ ಮಾರ್ಕೆಟ್ ವರ್ತಕರು ಹಾಗು ಕಪ್ಪಲಮಡುಗು ಗ್ರಾಮಸ್ತರಿಂದ ಸುಮಾರು 8 ಲಕ್ಷ ಬೆಲೆ ಬಾಳುವ ದಿನನಿತ್ಯ ಬಳಸುವ ಸಾಮಗ್ರಿಗಳನ್ನ ಬೆಳಗಾವಿ ಮತ್ತು ಹಲವೆಡೆ ನೆರೆಯಿಂದ ತತ್ತರಿಸಿರುವ ಜನರಿಗೆ ತಲುಪಿಸಲಾಯಿತು.

ವಡ್ಡಹಳ್ಳಿ ಮಾರ್ಕೆಟ್ ಯಾರ್ಡ್‌ನಲ್ಲಿ ಎರಡು ಈಚರ್ ಗಾಡಿಗಳಿಗೆ ಅಕ್ಕಿ, ಬಟ್ಟೆ, ನೀರು, ತಂಪು ಪಾನೀಯ, ಬೇಳೆ, ಉಪ್ಪು. ಟೊಮೆಟೊ, ಮಕ್ಕಳಿಗಾಗಿ ವಿಶೇಷವಾಗಿ ಸಿಹಿ ಕಾರ ತಿಂಡಿ, ಹಾಗೂ ಬಿಸ್ಕೆಟ್, ಮಕ್ಕಳ ಉಡುವು ಹೊದಿಕೆ ಸೇರಿದಂತೆ ಹಲವು ಸಿದ್ದ ತಿಂಡಿ ತಿನಿಸುಗಳನ್ನ ರವಾನಿಸಲಾಯಿತು.

ಕಪ್ಪಲಮಡುಗು ಪಂಚಾಯ್ತಿ ವ್ಯಾಪ್ತಿಯ ರೈತರು ಸ್ವಯಂ ಪ್ರೇರಿತರಾಗಿ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದು ಉಡುಪು ಹಾಗೂ ಹಲವು ಸಾಮಗ್ರಿಗಳನ್ನ ಕೊಳ್ಳಲು ಲಕ್ಷಾಂತರ ರೂಪಾಯಿಗಳನ್ನ ದಾನವಾಗಿ ನೀಡಿದ್ದಾರೆ.

ಸಾಮಗ್ರಿಗಳನ್ನ ಈಚರ್ ವಾಹನಕ್ಕೆ ತುಂಬಿದ ಮಾರ್ಕೆಟ್ ಸಿಬ್ಬಂದಿಗಳಿಗೆ ನಿರ್ದೇಶಕ ಸತೀಶ್ ಸೇರಿದಂತೆ ಮಾರುಕಟ್ಟೆ ಮಂಡಳಿ ಸದಸ್ಯರುಗಳು ಸಾಥ್ ನೀಡಿದರು. ಮಾರುಕಟ್ಟೆ ನಿರ್ದೇಶಕ ಸತೀಶ್ ಹಾಗು ಕಪ್ಪಲಮಡುಗು ಗ್ರಾಮಸ್ತರ ಸಹಕಾರದಿಂದ ಲಕ್ಷಾಂತರ ಬೆಲೆಬಾಳುವು ವಸ್ತುಗಳು ಶೇಖರಣೆಯಾಗಿದ್ದು ವಾಹನಗಳಿಗೆ ಪೂಜೆ ಸಲ್ಲಿಸಿ ಬೆಳಗಾವಿ ಮತ್ತು ಚಿಕ್ಕಮಂಗಳೂರು ಜಿಲ್ಲಾಡಳಿತಕ್ಕೆ ಸಾಮಗ್ರಿಗಳನ್ನ ಹಸ್ತಾಂತರ ಮಾಡುವುದಾಗಿ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಮಾರುಕಟ್ಟೆ ನಿರ್ದೇಶಕ ಸತೀಶ್ ಜಿಲ್ಲೆಯಾದ್ಯಂತ ಜನರು ಮುಂದೆ ನಿಂತು ಸಹಾಯ ನೀಡಿ ನಮ್ಮವರನ್ನ ಕಾಪಾಡಲು ಸಹಾಯ ಹಸ್ತ ಚಾಚಬೇಕು ಎಂದು ತಿಳಿಸಿದರು.

Share Post

Leave a Reply

Your email address will not be published. Required fields are marked *

error: Content is protected !!