ಭೂಸೇನಾ ನಿಗಮದ ನಿವೃತ್ತ ಇಂಜಿನಿಯರ್ ಜೆ.ಎಂ.ಕೊರಬು ರಿಗೆ ನಾಗರಿಕ ಸನ್ಮಾನ

ಕಲಬುರ್ಗಿ : ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ದಲಿತ ಓಣಿಯಲ್ಲಿ ಭೂಸೇನಾ ನಿಗಮದ ಕಾರ್ಯಪಾಲಕ ಅಭಿಯಂತರರಾದ ಜೆ.ಎಂ ಕೊರಬು ಅವರು ವಯೋನಿವೃತ್ತಿಯಾದ ಪ್ರಯುಕ್ತ ಅವರನ್ನು ಪೇಠ ಸುತ್ತಿ ಅದ್ದೂರಿಯಾಗಿ ಸತ್ಕರಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಅಧಿಕಾರಿ ಜೆ.ಎಂ ಕೊರಬು ನಾನು ಸರಕಾರಿ ನೌಕರಿಯಿಂದ ಮಾತ್ರ ನಿವೃತ್ತಿಯಾಗಿದ್ದೇನೆ. ಆದರೆ ನಿಮ್ಮ ಹೃದಯ ಶ್ರೀಮಂತಿಕೆಯಿಂದ ನಿವೃತ್ತಿಯಾಗಿಲ್ಲ. ನಮ್ಮ ನಿಮ್ಮ ಋಣಾನುಭಂಧವೇ ಅಂತಹದ್ದು,ನೀವು ನನ್ನ ಮೇಲೆ ಇಟ್ಟ ಪ್ರೀತಿ, ವಿಶ್ವಾಸ, ಅಭಿಮಾನ ನಿಮ್ಮ ಸಹಕಾರ, ಸನ್ಮಾನ ನಾನೆಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ನಾನು ನನ್ನ ಅಧಿಕಾರಾವಧಿಯಲ್ಲಿ ನನ್ನ ಇಲಾಖೆಗೆ ಚ್ಯುತಿ ಬರದ ಹಾಗೆ ನೋಡಿಕೊಂಡು ಬಂದಿದ್ದೇನೆ. ನನಗೆ ಸಿಟ್ಟು ಬಂದಾಗ ಪ್ರೀತಿಯಿಂದ ಕಪಾಳಕ್ಕೆ ಹೊಡೆದು ಬುದ್ದಿ ಮಾತು ಹೇಳಿದ್ದೇನೆ ಹೊರತು ಇನ್ನೊಬ್ಬರಿಗೆ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿಲ್ಲ. ಮನುಷ್ಯ ಹುಟ್ಟಿದ ಮೇಲೆ ಸ್ವಲ್ಪ ಮಟ್ಟಿಗಾದರೂ ಪರೋಪಕಾರಿ ಕೆಲಸ ಮಾಡಿದಾಗ ಮಾತ್ರ ದೇವರು ನಮ್ಮನ್ನು ಮೆಚ್ಚುತ್ತಾನೆ. ಹೀಗಾಗಿ ನಮ್ಮಲ್ಲಿದ್ದಷ್ಟೇ ಇನ್ನೊಬ್ಬರಿಗೆ ಸಹಕಾರಿಯಾಗಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಿ, ಅತಿಯಾಗಿ ಮೋಬೈಲ್ ಬಳಕೆ ಮಾಡುತ್ತ ಅದರಲ್ಲಿಯೇ ಕಾಲ ಹರಣ ಮಾಡುತ್ತಿದ್ದಾರೆ. ಇದು ಸರಿ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮಗೆ ಎಷ್ಟೇ ಬಡತನವಿರಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಕಿವಿ ಮಾತು ಹೇಳಿದರು.

ದಲಿತ ಮುಖಂಡ ಸುರೇಶ್ ಸಿಂಗೆ ಮಾತನಾಡಿ ಜೆ.ಎಂ ಕೊರಬು ಅವರು ಅಹಿಂದ ವರ್ಗದಲ್ಲಿ ಹುಟ್ಟಿ ಶೈಕ್ಷಣಿಕ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ರಾಜ್ಯ ಮಟ್ಟದ ದೊಡ್ಡ ಅಧಿಕಾರಿಯಾಗಿ ಕಳಕಿಂತವಿಲ್ಲದೆ ಸೇವೆ ಸಲ್ಲಿಸಿದ್ದಾರೆ. ಎಷ್ಟೇ ದೊಡ್ಡ ಅಧಿಕಾರವಿದ್ದರೂ ನಮ್ಮನ್ನು ಯಾವತ್ತೂ ಮರೆತಿಲ್ಲ. ಬೇಸಿಗೆ ಕಾಲದ್ದಲ್ಲಿ ನಮ್ಮ ಗ್ರಾಮದಲ್ಲಿ ನೀರಿನ ಹಾಹಾಕಾರ ಉಂಟಾದಾಗ ಉಚಿತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸಿದ್ದು ಅಷ್ಟೇ ಅಲ್ಲ ಅನೇಕ ದೇವಸ್ಥಾನಗಳ ಅಭಿವೃದ್ಧಿ ಕೆಲಸ ಮಾಡಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಮುಂಬರುವ ದಿನಗಳಲ್ಲಿ ದೊಡ್ಡ ರಾಜಕೀಯ ಹುದ್ದೆಯನ್ನೇರಿ ಜನರ ಸೇವೆ ಮಾಡುವ ಅವಕಾಶ ಭಗಂವತ ಅವರಿಗೆ ದಯಪಾಲಿಸಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ದಲಿತ ಸಮುದಾಯದ ವತಿಯಿಂದ ಜೆ.ಎಂ.ಕೊರಬು ಅವರಿಗೆ ಸಾಮೂಹಿಕವಾಗಿ ವಿಶೇಷ ಸತ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಾಮ ಹಾವಳಗಿ, ಶಿವುಪುತ್ರ ಜಿಡ್ಡಗಿ, ಪಂಡಿತ ನಾವಿ, ಪಂಚಪ್ಪ ಮುಗಳಿ, ತಾಲ್ಲೂಕ್ ಪಂಚಾಯ್ತಿ ಸದಸ್ಯ ರಾಜು ಬಬಲಾದ, ಭೂತಾಳಿ ವಹನಪೂಜಾರಿ, ರೇವಣಪ್ಪ ಝಳಕಿ, ದತ್ತು ವಗ್ಗಿ, ಮರೆಪ್ಪ ಮುಗಳಿ, ಖಾಜಪ್ಪ ಸಿಂಗೆ, ಅಣ್ಣಾರಾಯ ಸಿಂಗೆ, ಕಾಶಿನಾಥ್ ಭಂಗಿ ಸೇರಿದಂತೆ ಅನೇಕರು ಇದ್ದರು.

ಅಶೋಕ.ಎಚ್.ಕಲ್ಲೂರ, ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!