ಆನೆ ತುಳಿದು ರೈತ ಸಾವು

ಹೊಸಕೋಟೆ : ತೋಟದಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಆನೆ ಧಾಳಿ ಮಾಡಿದ್ದು ರೈತ ಸ್ಥಳದಲ್ಲೇ ಸಾವಿಗೀಡಾದ ಘಟನೆ ಅನುಗೊಂಡಹಳ್ಳಿ ಹೋಬಳಿಯ ತಿರುವರಂಗ ಗ್ರಾಮದಲ್ಲಿ ನಡೆದಿದೆ.

ತಿರುವರಂಗ ಗ್ರಾಮದ ಅಣ್ಣಯ್ಯ(55) ಆನೆ ತುಳಿತಕ್ಕೊಳಗಾದ ವ್ಯಕ್ತಿ. ಈತ ಎಂದಿನಂತೆ ಗದ್ದೆಯಲ್ಲಿ ಕೆಲಸ ಮಾಡಲು ತೆರಳಿದ್ದ. ವಾಪಾಸ್ ಗ್ರಾಮಕ್ಕೆ ತೆರಳುವಾಗ ಹಿಂಬದಿಯ ನಿಲಗಿರಿ ತೋಪಿನಿಂದ ಬಂದ ಆನೆಯಿಂದ ಧಾಳಿ ನಡೆಸಿ ಕೊಂದು ಹಾಕಿದೆ.

ಸ್ಥಳಕ್ಕೆ ಅನುಗೊಂಡಹಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದರು. ಹೊಸಕೋಟೆ ವಲಯ ಅರಣ್ಯಾದಿಕಾರಿ ವರುಣ್ ಕುಮಾರ್ ಮತ್ತು ಸಿಬ್ಬಂದಿಯೂ ಸಹ ಭೇಟಿ ನೀಡಿ ಕಾಡಾನೆಯ ಚಲನ ವಲನದ ಬಗ್ಗೆ ಮಾಹಿತಿ ಕಲೆ ಹಾಕಿದರು.

Share Post

Leave a Reply

Your email address will not be published. Required fields are marked *

error: Content is protected !!