ಪ್ರವಾಹ ಪೀಡಿತರಿಗೆ ನೆರವು ನೀಡಿದ ಯುವಕರ ತಂಡ

ದಾವಣಗೆರೆ : ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ತತ್ತರಿಸಿದ್ದು, ಇಲ್ಲಿನ ಪ್ರವಾಹ ಪೀಡಿತರಿಗೆ ನಗರದ ಹಳೇ ಕುಂದುವಾಡದ ಯುವಕರ ತಂಡ ನೆರವು ನೀಡಿದೆ.

ಗೋಕಾಕ್ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ 100 ಚೀಲ ಅಕ್ಕಿ ಸೇರಿದಂತೆ ಇತರ ದಿನನಿತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ನೀಡಿದ್ದಾರೆ.

ಹಳೇ ಕುಂದುವಾಡದ ಪ್ರತಿಮನೆಗೆ ತೆರಳಿದ ಯುವಕರ ತಂಡ ಅಗತ್ಯ ದಿನನಿತ್ಯದ ವಸ್ತುಗಳನ್ನು ವಿತರಿಸಿದ್ದಾರೆ. 100ಕ್ಕೂ ಹೆಚ್ಚು ಚೀಲ ಅಕ್ಕಿ, 200 ಬೆಡ್ ಶಿಟ್, 400ಕ್ಕೂ ಹೆಚ್ಚು ತೆಂಗಿನಕಾಯಿ,150ಕ್ಕೂ ಹೆಚ್ಚು ಸೀರೆಗಳು, ಪಂಚೆ, ಟವಲ್, ಸಕ್ಕರೆ, ಬಿಸ್ಕೆಟ್, ಸೋಪ್‌ಗಳು, ಅಡುಗೆ ಎಣ್ಣಿ, ಉಪ್ಪು, ಟೀ ಪುಡಿ ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳನ್ನು ವಿತರಿಸಿದರು.

25 ಮಂದಿ ಯುವಕರ ತಂಡ ಗೋಕಾಕ್ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಸಂತ್ರಸ್ತರಿಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದು ಪ್ರವಾಹ ಸಂತ್ರಸ್ತರು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!