Monday, August 10, 2020
Home ಸುದ್ದಿ ಜಾಲ ಪಡಿತರ ಚೀಟಿದಾರರಿಗೆ ಅಗ್ನಿ ಸುರಕ್ಷಾ ಯೋಜನೆಯಡಿ 5 ಲಕ್ಷ ರೂ.ವರೆಗೆ ಸಹಾಯ ಧನಕ್ಕೆ ಅರ್ಜಿ

LATEST TRENDING

ಕಾರ್ಪೋರೇಶನ್ ಕಂಪನಿಗಳು ಬೇಸಾಯ ಬಿಟ್ಟು ...

ಕಲಬುರಗಿ: ಕಾರ್ಪೋರೇಶನ್ ಕಂಪನಿಗಳು ಬೇಸಾಯ ಬಿಟ್ಟು ತೊಲಗಲು ಆಗ್ರಹಿಸಿ ಪ್ರಾಂತ ರೈತ ಸಂಘ, ಸಿಐಟಿಯು , ಜೆಸಿಟಿಯು, ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಮತ್ತಿತರರ ಸಂಘಟನೆಗಳ ನೇತೃತ್ವದಲ್ಲಿ ಇಂದು...

ಡಿಸಿಎಮ್ ಸವದಿಯಿಂದ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ...

ಅಥಣಿ ಪಟ್ಟಣದ ಹೊರವಲಯದಲ್ಲಿ ಇರುವ ಸರ್ಕಾರಿ ಪದವಿಪೂರ್ವ ಕಾಲೆಜು ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಡಿಸಿಎಮ್ ಲಕ್ಷ್ಮಣ ಸವದಿ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು ಕೊವಿಡ್ ಇರುವದರಿಂದ ಸಾಂಕೇತಿಕವಾಗಿ ಉದ್ಘಾಟನೆ...

ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ...

ಉಡುಪಿ ನಗರದ ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತನನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ಸ್ ಮಾಲೀಕ ರಾಬರ್ಟ್ ಫುರ್ಟಾಡೊ(53) ಎಂದು ಗುರುತಿಸಿರುವುದಾಗಿ ಪೊಲೀಸರು...

4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ನಟ...

ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್, ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಈ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ...

ರಾಜ್ಯದ ಪ್ರವಾಹ ಮಾಹಿತಿ ಪಡೆದ ಪ್ರಧಾನಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದಿಂದ ಉಂಟಾದ ನಷ್ಟಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಹಿತಿ ಪಡೆದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಸಚಿವ ಗೃಹ ಸಚಿವ...

ಪಡಿತರ ಚೀಟಿದಾರರಿಗೆ ಅಗ್ನಿ ಸುರಕ್ಷಾ ಯೋಜನೆಯಡಿ 5 ಲಕ್ಷ ರೂ.ವರೆಗೆ ಸಹಾಯ ಧನಕ್ಕೆ ಅರ್ಜಿ

ದಾವಣಗೆರೆ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಮೂಲಕ ಅಗ್ನಿ ಅವಘಡಗಳು ಸಂಭವಿಸಿ ಮಹಿಳೆಯರು ಹಾಗೂ ಮಕ್ಕಳಿಗೆ ಜೀವ ಹಾನಿ ಹಾಗೂ ಇತರೆ ತೊಂದರೆಯಾದಲ್ಲಿ ಪಡಿತರ ಚೀಟಿದಾರರಿಗೆ 5 ಲಕ್ಷ ರೂ. ತನಕ ಸಹಾಯಧನವನ್ನು ನೀಡುವುದರ ಜೊತೆಗೆ ಹಲವು ಸೇವೆಗಳನ್ನು ನೀಡಲಾಗುವ ಅಗ್ನಿ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈ ಯೋಜನೆ ಅನಿಲ ಸಂಪರ್ಕ ಹೊಂದಿರುವ ಪಡಿತರ ಚೀಟಿದಾರರಿಗೆ ತಲುಪಲು ಈಗಾಗಲೇ ಎಲ್ಲಾ ಜಿಲ್ಲೆಯ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಇವರಿಂದ ಅಗತ್ಯ ಕ್ರಮ ತೆಗೆದುಕೊಂಡಿದ್ದು, ನ್ಯಾಯ ಬೆಲೆ ಅಂಗಡಿದಾರರು ಅರ್ಜಿಗಳನ್ನು ಪಡೆಯಲು ಕಾರ್ಯ ಪ್ರವೃತ್ತರಾಗುತ್ತಿದ್ದಾರೆ.

ಅರ್ಜಿ ಸಲ್ಲಿಸಿದ ಪಡಿತರ ಚೀಟಿದಾರರಿಗೆ ಅಗ್ನಿ ಸುರಕ್ಷ ಯೋಜನೆಯ ಗುರುತಿನ ಪತ್ರ ನೀಡಲಾಗುವುದರಿಂದ ಎಲ್ಲಾ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿದಾರರ ಹತ್ತಿರ ನಿಯಮಾನುಸಾರ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.

ಅಗ್ನಿ ಸುರಕ್ಷ ಯೋಜನೆಯ ಸೇವೆಗಳು:

ಅಗ್ನಿ ಸುರಕ್ಷ ಯೋಜನೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಅಡುಗೆ ಅನಿಲ ಸಿಲಿಂಡರ್ ಮೂಲಕ ಅಗ್ನಿ ಅವಘಡಗಳು ಸಂಭವಿಸಿ ಸಾವು ನೋವಾದರೆ ಕಾನೂನು ರೀತಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ರೂ. 5 ಲಕ್ಷ ತನಕ ಸಹಾಯಧನವನ್ನು ನೀಡಲಾಗುತ್ತದೆ.

ಮನೆಯಲ್ಲಿ ಉಪಯೋಗಿಸುವ ಅಡುಗೆ ಅನಿಲ ಸಿಲಿಂಡರ್, ಒಲೆ ಮತ್ತು ರೆಗ್ಯೂಲೇಟರ್‍ಗಳನ್ನು ಪರೀಕ್ಷಿಸಿ ಬದಲಾಯಿಸಬೇಕಾದ ವಸ್ತುಗಳ ಬಗ್ಗೆ ಗ್ಯಾಸ್ ವಿತರಕರಿಗೆ ಮಾಹಿತಿ ನೀಡಲಾಗುತ್ತದೆ.

ಅಗ್ನಿ ಸುರಕ್ಷ ಯೋಜನೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯ ಮಟ್ಟದಲ್ಲಿ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಅಗ್ನಿ ಅವಘಡಗಳಿಂದ ಆರೋಗ್ಯ, ಆರ್ಥಿಕ ಹಾಗೂ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿ ಅವುಗಳನ್ನು ತಪ್ಪಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಮಾಹಿತಿ:

ನ್ಯಾಯಬೆಲೆ ಅಂಗಡಿದಾರರು ತಮ್ಮ ವ್ಯಾಪ್ತಿಯ ಕುಟುಂಬಗಳಿಂದ ಅರ್ಜಿಗಳನ್ನು ಪಡೆದ ನಂತರ ಅವರಿಗೆ ಅಗ್ನಿ ಸುರಕ್ಷ ಯೋಜನೆ ಗುರುತಿನ ಪತ್ರವನ್ನು ನೀಡಿ ಯೋಜನೆಯು ಕಾರ್ಯ ನಿರ್ವಹಿಸುತ್ತದೆ. ಗುರುತಿನ ಪತ್ರ ಸುರಕ್ಷಿತವಾಗಿದ್ದು, ಯಾವುದೇ ಸಮಯದಲ್ಲಿ ಬಾರ್ ಕೋಡ್ ಮತ್ತು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಯೋಜನೆಯ ಮೂಲದ ಬಗ್ಗೆ ಪರೀಕ್ಷಿಸಿಕೊಳ್ಳಬಹುದು. ಜೊತೆಗೆ www.agnisurakshayojane.com ಅಗ್ನಿ ಸುರಕ್ಷ ಯೋಜನೆಯ ವೆಬ್‍ಸೈಟ್ ವಿಳಾಸ ಸಂಪರ್ಕಿಸಿ ಅಗ್ನಿ ಸುರಕ್ಷ ಯೋಜನೆಯ ಸೇವೆಗಳನ್ನು ಸುಲಭವಾಗಿ ಪಡೆಯಬಹುದು.

ಅಗ್ನಿ ಸುರಕ್ಷ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿದಾರರು ತಮ್ಮ ವ್ಯಾಪ್ತಿಯ ಅಡುಗೆ ಅನಿಲ ಬಳಕೆದಾರರ ಕುಟುಂಬಕ್ಕೆ ಮಾಹಿತಿ ನೀಡಿ ಅರ್ಜಿಯನ್ನು ಭರ್ತಿ ಮಾಡಬೇಕು. ಸುರಕ್ಷ ಯೋಜನೆಯ ಗುರುತಿನ ಪತ್ರವನ್ನು ಪಡೆಯಲು ನಿಗದಿತ ಶುಲ್ಕವನ್ನು ಪ್ರತಿ ಕುಟುಂಬದವರು ತಮ್ಮ ನ್ಯಾಯ ಬೆಲೆ ಅಂಗಡಿದಾರರ ಅರ್ಜಿಯ ಜೊತೆ ಸಲ್ಲಿಸಬೇಕು. ಮತ್ತು ಸಂದಾಯ ಮಾಡಿದ ಶುಲ್ಕಕ್ಕೆ ರಶೀದಿಯನ್ನು ಪಡೆಯಬೇಕು ಎಂದು ಹೇಳಲಾಗಿದೆ.

TRENDING