Friday, August 14, 2020
Home ಸುದ್ದಿ ಜಾಲ ಯೆಸ್ ಬ್ಯಾಂಕ್ ಸಂಸ್ಥಾಪಕ ‘ರಾಣಾ ಕಪೂರ್’ರ 1,200 ಕೋಟಿ ರೂ. ಆಸ್ತಿ ವಶ

ಇದೀಗ ಬಂದ ಸುದ್ದಿ

ಪ್ರವಾಹ ಸಂತ್ರಸ್ಥರನ್ನು ಕುಡುಕರು ಎಂದ ಶ್ರೀಮಂತ ಪಾಟೀಲ...

ಪ್ರತಿ ಸಲವು ಮಳೆಗಾಲದ ಸಮಯದಲ್ಲಿ ಪ್ರವಾಹ  ಉಂಟಾಗುತ್ತಿದ್ದು ಕೃಷ್ಣಾ ನದಿ ತೀರದ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಥಣಿ ಪಟ್ಟಣದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ...

ರಾಷ್ಟ್ರ ಧ್ವಜದ ತಯಾರಿಕಾ ಘಟಕಕ್ಕೆ ಬಿಸಿ ಮುಟ್ಟಿದ...

ಆಗಸ್ಟ್ 15 ಅಂದ್ರೆ ಇಡೀ ಭಾರತ ದೇಶವೇ ಸಂಭ್ರಮದ ದಿನ ,ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಮೇಲೆ ರಾರಾಜಿಸುವ ನಮ್ಮ ರಾಷ್ಟ್ರ ಧ್ವಜ ಈ ಸಾರಿ ಅಷ್ಟು ಪ್ರಮಾಣದಲ್ಲಿ...

ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ಶೇ.೮೩.೧೧...

ಲಿಂಗಸೂಗೂರು: ತಾಲೂಕಿನ ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ೨೦೧೯-೨೦ನೇ ಸಾಲಿನ ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ.೮೩.೧೧ ರಷ್ಟು ಸಾಧನೆ ಮಾಡಿದೆ. ಕನ್ನಡ ಮಾಧ್ಯಮ ಪ್ರೌ ಢಶಾಲೆಯ ೮೩.೧೧ ರಷ್ಟು ಫಲಿತಾಂಶ...

ಸೈಕಲ್ ನಲ್ಲಿ ಕೊರೊನಾ ಸೋಂಕಿತನ ಶವ ಸಾಗಾಟ

ಕೋವಿಡ್ ಸಂದರ್ಭದಲ್ಲಿ ತುರ್ತು ನೆರವು ನೀಡಲು ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು 1,180 ಹೊಸ ಅತ್ಯಾಧುನಿಕ ಆಯಂಬುಲೆನ್ಸ್‍ಗಳನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಶವನ್ನು ಸೈಕಲ್ ರಿಕ್ಷಾದಲ್ಲಿ...

ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ...

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಡ್ತಿದೆ. ಇದು ಗೊತ್ತಾಗ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ಸಂಜಯ್ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಯೆಸ್ ಬ್ಯಾಂಕ್ ಸಂಸ್ಥಾಪಕ ‘ರಾಣಾ ಕಪೂರ್’ರ 1,200 ಕೋಟಿ ರೂ. ಆಸ್ತಿ ವಶ

ನವದೆಹಲಿ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮತ್ತವರ ಕುಟುಂಬಕ್ಕೆ ಸೇರಿದ ಸುಮಾರು 1,200 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ವಶಪಡಿಸಿಕೊಂಡಿದೆ. ಲಂಡನ್, ನ್ಯೂಯಾರ್ಕ್ ಮತ್ತು ಮುಂಬೈನಲ್ಲಿನ ರಾಣಾ ಕಪೂರ್ ಆಸ್ತಿಗಳೂ ಇದರಲ್ಲಿ ಸೇರಿವೆ. ಜತೆಗೆ ಡಿಎಚ್​ಎಫ್​ಎಲ್ ಸಹೋದರರಾದ ಕಪಿಲ್ ಮತ್ತು ಧೀರಜ್ ವಾಧವನ್​ಗೆ ಸೇರಿದ ಸುಮಾರು 1,400 ಕೋಟಿ ರೂ. ಮೌಲ್ಯದ ಆಸ್ತಿಗಳನ್ನೂ ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ರಾಣಾ ಕಪೂರ್ ಮತ್ತು ಅವರ ಕುಟುಂಬದ ಆಸ್ತಿಗಳಲ್ಲಿ ದೆಹಲಿ, ಮುಂಬೈ ಮತ್ತು ಗೋವಾದ ಕೃಷಿಭೂಮಿ ಮತ್ತು ರೆಸಾರ್ಟ್​ಗಳು ಮತ್ತು ಸೆಂಟ್ರಲ್ ಲಂಡನ್ ಮತ್ತು ನ್ಯೂಯಾರ್ಕ್​ನಲ್ಲಿನ ಆಸ್ತಿಗಳಿವೆ. ಜತೆಗೆ ಸ್ಥಿರ ಠೇವಣಿಯಲ್ಲಿ 50 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಎಚ್​ಎಫ್​ಎಲ್ ಪ್ರವರ್ತಕ ಸಹೋದರರಿಂದ ವಶಪಡಿಸಿಕೊಳ್ಳಲಾಗಿರುವ ಆಸ್ತಿಗಳಲ್ಲಿ 12 ಅಪಾರ್ಟ್​ವೆುಂಟ್​ಗಳು, ಪುಣೆಯಲ್ಲಿನ ಭೂಮಿ, ಲಂಡನ್, ಆಸ್ಟ್ರೇಲಿಯಾ ಮತ್ತು ನ್ಯೂಯಾರ್ಕ್​ನಲ್ಲಿನ ಸ್ವತ್ತುಗಳು ಸೇರಿವೆ ಎಂದು ತಿಳಿದುಬಂದಿದೆ.

ರಾಣಾ ಕಪೂರ್ ಮತ್ತವರ ಕುಟುಂಬಸ್ಥರು ಸೇರಿ ಅನೇಕರು ತಮ್ಮ ಕಿಕ್​ಬ್ಯಾಕ್​ಗೆ ಬದಲಾಗಿ ಯೆಸ್ ಬ್ಯಾಂಕ್​ನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲಗಳನ್ನು ನೀಡಿದ್ದರು. ಇದರಿಂದಾಗಿ ಬ್ಯಾಂಕ್ ನಷ್ಟಕ್ಕೆ ಸಿಲುಕಿತು ಎಂದು ಇಡಿ ಆರೋಪಿಸಿದೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಈಗಾಗಲೇ ರಾಣಾ ಕಪೂರ್ ಮತ್ತು ಅವರ ಕುಟುಂಬದ ವಿರುದ್ಧ ಕ್ರಮವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಚಾರ್ಜ್​ಶೀಟ್​ಗಳನ್ನು ಸಲ್ಲಿಸಿವೆ. ಡಿಎಚ್​ಎಫ್​ಎಲ್ ಪ್ರವರ್ತಕ ಕಪಿಲ್ ವಾಧವನ್ ಅವರಿಂದ 600 ಕೋಟಿ ರೂ. ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ ತಿಂಗಳು ರಾಣಾ ಕಪೂರ್ ಮತ್ತವರ ಪತ್ನಿ ಬಿಂದು ಮತ್ತು ಮಗಳು ರೋಶಿನಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿತ್ತು. ಯೆಸ್ ಬ್ಯಾಂಕ್ ಹಗರಣ ಸಂಬಂಧ ತನಿಖಾ ಸಂಸ್ಥೆಗಳು 13 ಜನರನ್ನು ಆರೋಪಿಗಳಾಗಿ ಪಟ್ಟಿಮಾಡಿದ್ದು, ಈವರಗೆ ಅವರ ಸ್ವತ್ತುಗಳಿಗಾಗಿ ಹಲವು ಕಡೆಗಳಲ್ಲಿ ದಾಳಿ ನಡೆಸಿವೆ. ರಾಣಾ ಕಪೂರ್​ರನ್ನು ಕಳೆದ ಮಾರ್ಚ್​ನಲ್ಲಿ ಬಂಧಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

TRENDING