Thursday, August 13, 2020
Home ಜಿಲ್ಲೆ ಶಿವಮೊಗ್ಗ ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿ ಒಂದೇ ದಿನ 37 ಜನರಿಗೆ ಕೊರೊನಾ ಪತ್ತೆ, 372ಕ್ಕೇರಿದ ಸೋಂಕಿತರ...

ಇದೀಗ ಬಂದ ಸುದ್ದಿ

ಪ್ರವಾಹ ಸಂತ್ರಸ್ಥರನ್ನು ಕುಡುಕರು ಎಂದ ಶ್ರೀಮಂತ ಪಾಟೀಲ...

ಪ್ರತಿ ಸಲವು ಮಳೆಗಾಲದ ಸಮಯದಲ್ಲಿ ಪ್ರವಾಹ  ಉಂಟಾಗುತ್ತಿದ್ದು ಕೃಷ್ಣಾ ನದಿ ತೀರದ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಥಣಿ ಪಟ್ಟಣದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ...

ರಾಷ್ಟ್ರ ಧ್ವಜದ ತಯಾರಿಕಾ ಘಟಕಕ್ಕೆ ಬಿಸಿ ಮುಟ್ಟಿದ...

ಆಗಸ್ಟ್ 15 ಅಂದ್ರೆ ಇಡೀ ಭಾರತ ದೇಶವೇ ಸಂಭ್ರಮದ ದಿನ ,ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಮೇಲೆ ರಾರಾಜಿಸುವ ನಮ್ಮ ರಾಷ್ಟ್ರ ಧ್ವಜ ಈ ಸಾರಿ ಅಷ್ಟು ಪ್ರಮಾಣದಲ್ಲಿ...

ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ಶೇ.೮೩.೧೧...

ಲಿಂಗಸೂಗೂರು: ತಾಲೂಕಿನ ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ೨೦೧೯-೨೦ನೇ ಸಾಲಿನ ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ.೮೩.೧೧ ರಷ್ಟು ಸಾಧನೆ ಮಾಡಿದೆ. ಕನ್ನಡ ಮಾಧ್ಯಮ ಪ್ರೌ ಢಶಾಲೆಯ ೮೩.೧೧ ರಷ್ಟು ಫಲಿತಾಂಶ...

ಸೈಕಲ್ ನಲ್ಲಿ ಕೊರೊನಾ ಸೋಂಕಿತನ ಶವ ಸಾಗಾಟ

ಕೋವಿಡ್ ಸಂದರ್ಭದಲ್ಲಿ ತುರ್ತು ನೆರವು ನೀಡಲು ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು 1,180 ಹೊಸ ಅತ್ಯಾಧುನಿಕ ಆಯಂಬುಲೆನ್ಸ್‍ಗಳನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಶವನ್ನು ಸೈಕಲ್ ರಿಕ್ಷಾದಲ್ಲಿ...

ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ...

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಡ್ತಿದೆ. ಇದು ಗೊತ್ತಾಗ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ಸಂಜಯ್ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿ ಒಂದೇ ದಿನ 37 ಜನರಿಗೆ ಕೊರೊನಾ ಪತ್ತೆ, 372ಕ್ಕೇರಿದ ಸೋಂಕಿತರ ಸಂಖ್ಯೆ

ಶಿವಮೊಗ್ಗಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಒಂದೇ ದಿನ ಅತಿ ಹೆಚ್ಚು ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಗುರುವಾರ ಪಿ-29105ರಿಂದ ಪಿ-29141ರವರೆಗಿನ 37 ಜನರು ಸೋಂಕಿಗೆ ಒಳಗಾಗಿರುವುದು ಆತಂಕ ಹೆಚ್ಚಿಸಿದೆ.

ಒಟ್ಟು ಸೋಂಕಿತರ ಸಂಖ್ಯೆ 372ಕ್ಕೇರಿದೆ. ಇದುವರೆಗೂ 141 ಜನರು ಗುಣಮುಖರಾಗಿದ್ದಾರೆ. 227 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ನಗರ 17 ಜನರಿಗೆ ಸೋಂಕು ಹರಡಿದೆ.

12 ಜನರಿಗೆ ಪಥಮ ಸಂಪರ್ಕದ ಸೋಂಕು:

ಒಂದು ಹಾಗೂ ಎರಡು ವರ್ಷದ ಬಾಲಕರು ಸೇರಿ ಒಟ್ಟು 12 ಜನರಿಗೆ ಕೋವಿಡ್‌ ರೋಗಿಗಳ ಪ್ರಥಮ ಸಂಪರ್ಕದಿಂದ ವೈರಸ್‌ ತಗುಲಿದೆ.

ಪಿ-14381 ರೋಗಿಯ ಸಂಪರ್ಕದಿಂದ 43 ವರ್ಷದ ಮಹಿಳೆ, 18 ವರ್ಷದ ಯುವತಿ, ಪಿ-10396 ರೋಗಿಯ ಸಂಪರ್ಕದಿಂದ 41 ವರ್ಷದ ಮಹಿಳೆ, ಪಿ-336 ರೋಗಿಯ ಸಂಪರ್ಕ 26 ವರ್ಷದ ಮಹಿಳೆ, ಪಿ- 23614 ರೋಗಿಯ ಸಂಪರ್ಕದಿಂದ 39 ವರ್ಷದ ಪುರುಷ, ಪಿ-18070 ರೋಗಿಯ ಸಂಪರ್ಕದಿಂದ 2 ವರ್ಷದ ಬಾಲಕ, 30 ವರ್ಷದ ಮಹಿಳೆ, ಪಿ-21631 ರೋಗಿಯ ಸಂಪರ್ಕದಿಂದ 22 ವರ್ಷದ ಯುವತಿ, ಪಿ-18073 ರೋಗಿಯ ಸಂಪರ್ಕದಿಂದ 1 ವರ್ಷದ ಬಾಲಕ, ಪಿ-25578 ರೋಗಿಯ ಸಂಪರ್ಕದಿಂದ 30 ವರ್ಷ ಹಾಗೂ 29 ವರ್ಷದ ಪುರುಷರು, ಪಿ-25578 ರೋಗಿಯ ಸಂಪರ್ಕದಿಂದ 24 ವರ್ಷದ ಯುವಕನಿಗೆ ಸೋಂಕು ತಗುಲಿದೆ.

9 ಜನರಿಗೆ ತೀವ್ರ ಉಸಿರಾಟದ ತೊಂದರೆತೀವರ ಉಸಿರಾಟದ ತೊಂದರೆಗೆ ಒಳಗಾಗಿದ್ದ ಜಿಲ್ಲೆಯ 9 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

51 ವರ್ಷ, 33, 46, 39, 28, 57, ಹಾಗೂ 62 ವರ್ಷದ ಪುರುಷರು, 58 ವರ್ಷದ ಮಹಿಳೆ, 75 ವರ್ಷದ ವೃದ್ಧೆ ಉಸುರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಬೆಂಗಳೂರಿನಿಂದ ಹಿಂದಿರುಗಿದ 8 ಜನರಿಗೆ ವೈರಸ್‌: ಬೆಂಗಳೂರಿನಿಂದ ಜಿಲ್ಲೆಗೆ ಬಂದಿದ್ದ 8 ಜನರಿಗೆ ಸೋಂಕು ದೃಢಪಟ್ಟಿದೆ. 30, 36, 40 ವರ್ಷದ ಪುರುಷರು, 15, 16 ವರ್ಷದ ಬಾಲಕರು, 36, 37 ವರ್ಷದ ಮಹಿಳೆಯರು, 22 ವರ್ಷ ಯುವತಿಗೆ ಸೋಂಕು ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶದಿಂದ ಬಂದಿದ್ದ 38 ವರ್ಷದ ಪುರುಷನಲ್ಲೂ ಕೊರೊನಾ ಖಚಿತಪಪಟ್ಟಿದೆ. 7 ಜನರಿಗೆ ತಗುಲಿದ ವೈರಸ್‌ ಮೂಲವೇ ಪತ್ತೆಯಾಗಿಲ್ಲ.

ಸೀಲ್‌ಡೌನ್‌: ನಿರ್ಮಲಾ ಆಸ್ಪತ್ರೆ, ನಗರದ ಕೋಟೆ ರಸ್ತೆ, ಗಾಂಧಿ ಬಜಾರ್ ತುಳುಜಾ ಭವಾನಿ ರಸ್ತೆ, ಹಳೇ ಅಂಚೆಕಚೇರಿ ರಸ್ತೆ ಸೀಲ್‌ ಡೌನ್‌ ಮಾಡಲಾಗಿದೆ.

ತಾಲ್ಲೂಕಿನ ಹಿಲ್ಕುಂಜಿಯ ದಂಪತಿಗೆ ಕೊರೊನಾ ದೃಡಪಟ್ಟಿದೆ. ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.
ಗರತಿಕೆರೆಯಲ್ಲಿ ಒಬ್ಬ ವ್ಯಕ್ತಿ ಕೊರಾನ ದೃಡಪಟ್ಟಿದೆ. ಗವಟೂರಿನ ವ್ಯಕ್ತಿ ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ ನಾಯ್ಕ ತಿಳಿಸಿದರು.

ಸೊರಬ: ಮತ್ತೆ ನಾಕ್ವರಿಗೆ ಸೋಂಕು

ಪಟ್ಟಣದ ಕಾನಕೇರಿ ಬಡಾವಣೆಯ ಒಂದೇ ಮನೆಯಲ್ಲಿ ಇಬ್ಬರಿಗೆ, ಚಂದ್ರಗುತ್ತಿ ಮೆಸ್ಕಾಂ ವಿಭಾಗೀಯ ನೌಕರನಿಗೆ ಹಾಗೂ ಜ್ವರದಿಂದ ಬಳಲುತ್ತಿರುವ ತಾಲ್ಲೂಕಿನ ಚಿಕ್ಕಕಬ್ಬೂರು ಗ್ರಾಮದ ಪುರುಷನಿಗೆ ಕೊರಾನಾ ಇರುವುದು ಖಚಿತವಾಗಿದೆ. ಆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಕುಂಸಿ: ವೃದ್ಧೆಗೆ ಕೊರೊನಾ ದೃಢ:

ಇಲ್ಲಿನ ಬೊಮ್ಮನಕಟ್ಟೆ ಕೇರಿಯ 75 ವರ್ಷದ ವೃದ್ಧೆಗೆ ಕೊರೊನಾ ಇರುವುದು ದೃಢಪಟ್ಟಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧೆ 15 ದಿನದ ಹಿಂದೆ ಬೆಂಗಳೂರಿನಿಂದ ಗಾಜನೂರಿಗೆ ಬಂದಿದ್ದರು. ವೃದ್ಧೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ ನಂತರ ಕುಂಸಿಯ ನಿವಾಸಕ್ಕೆ ಕರೆದುಕೊಂಡು ಬಂದಿದ್ದರು. ವರದಿ ಬಂದ ನಂತರ ಮತ್ತೆ ಮೆಗ್ಗಾನ್ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಆ ಬೀದಿಯವರು ಸ್ವಯಂ ಪ್ರೇರಿತವಾಗಿ ಸೀಲ್‌ಡೌನ್ ಮಾಡಿಕೊಂಡಿದ್ದಾರೆ.

TRENDING