Thursday, August 13, 2020
Home ಸುದ್ದಿ ಜಾಲ ರಾಷ್ಟ್ರ ಪಕ್ಷಿ ನವಿಲುಗಳ ಮಾರಣಹೋಮ - ಪಕ್ಷಿ ಪ್ರಿಯರ ಅಕ್ರೋಶ

ಇದೀಗ ಬಂದ ಸುದ್ದಿ

ಪ್ರವಾಹ ಸಂತ್ರಸ್ಥರನ್ನು ಕುಡುಕರು ಎಂದ ಶ್ರೀಮಂತ ಪಾಟೀಲ...

ಪ್ರತಿ ಸಲವು ಮಳೆಗಾಲದ ಸಮಯದಲ್ಲಿ ಪ್ರವಾಹ  ಉಂಟಾಗುತ್ತಿದ್ದು ಕೃಷ್ಣಾ ನದಿ ತೀರದ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಥಣಿ ಪಟ್ಟಣದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ...

ರಾಷ್ಟ್ರ ಧ್ವಜದ ತಯಾರಿಕಾ ಘಟಕಕ್ಕೆ ಬಿಸಿ ಮುಟ್ಟಿದ...

ಆಗಸ್ಟ್ 15 ಅಂದ್ರೆ ಇಡೀ ಭಾರತ ದೇಶವೇ ಸಂಭ್ರಮದ ದಿನ ,ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಮೇಲೆ ರಾರಾಜಿಸುವ ನಮ್ಮ ರಾಷ್ಟ್ರ ಧ್ವಜ ಈ ಸಾರಿ ಅಷ್ಟು ಪ್ರಮಾಣದಲ್ಲಿ...

ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ಶೇ.೮೩.೧೧...

ಲಿಂಗಸೂಗೂರು: ತಾಲೂಕಿನ ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ೨೦೧೯-೨೦ನೇ ಸಾಲಿನ ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ.೮೩.೧೧ ರಷ್ಟು ಸಾಧನೆ ಮಾಡಿದೆ. ಕನ್ನಡ ಮಾಧ್ಯಮ ಪ್ರೌ ಢಶಾಲೆಯ ೮೩.೧೧ ರಷ್ಟು ಫಲಿತಾಂಶ...

ಸೈಕಲ್ ನಲ್ಲಿ ಕೊರೊನಾ ಸೋಂಕಿತನ ಶವ ಸಾಗಾಟ

ಕೋವಿಡ್ ಸಂದರ್ಭದಲ್ಲಿ ತುರ್ತು ನೆರವು ನೀಡಲು ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು 1,180 ಹೊಸ ಅತ್ಯಾಧುನಿಕ ಆಯಂಬುಲೆನ್ಸ್‍ಗಳನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಶವನ್ನು ಸೈಕಲ್ ರಿಕ್ಷಾದಲ್ಲಿ...

ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ...

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಡ್ತಿದೆ. ಇದು ಗೊತ್ತಾಗ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ಸಂಜಯ್ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ರಾಷ್ಟ್ರ ಪಕ್ಷಿ ನವಿಲುಗಳ ಮಾರಣಹೋಮ – ಪಕ್ಷಿ ಪ್ರಿಯರ ಅಕ್ರೋಶ

ಚಿತ್ರದುರ್ಗ,ಜು08 : ನವಿಲುಗಳು ಸ್ವಚ್ಚಂದಹಾಗೂ ಸ್ವತಂತ್ರವಾಗಿ ಕಾಡಿನಲ್ಲಿ ಓಡಾಡಿಕೊಂಡು ಸಂತೋಷವನ್ನು ಅನುಭವಿಸುತ್ತಿದ್ದ ರಾಷ್ಟ್ರಪಕ್ಷಿಗಳು ಆದರೆ ಅವುಗಳ ಸ್ವಾತಂತ್ರ ಹರಣ ಮಾಡಿದ ದುಷ್ಕರ್ಮಿಗಳು ಅವುಗಳಿಗೆ ವಿಷವುಣಿಸಿ ಅಟ್ಟಹಾಸ ಮೆರೆದಿದ್ದಾರೆ.

ಕೋಟೆ ನಾಡಿನ ಜೋಗಿ‌ಮಟ್ಟಿ ಅರಣ್ಯ ಧಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಕಂದಾಯ ಜಮೀನು ಹಾಗೂ ರೈತರಿಗೆ ಸಂಬಂಧಿಸಿದ ಜಮೀನುಗಳಿಗೆ ಇದು ಅರಣ್ಯಕ್ಕೆ ಹೊಂದಿಕೊಂಡಿದೆ. ಇಲ್ಲಿ ದಿನವೂ ಸಾವಿರಾರು ನವಿಲುಗಳು ಓಡಾಡಿಕೊಂಡು ಆಹಾರವನ್ನು ಅರಸಿಕೊಂಡು ಬರುತ್ತವೆ. ಇವುಗಳನ್ನು‌ನೋಡಲು ಚಂದ.

ಆದರೆ ಇದರ ಅಂದ ಚಂದವನ್ನು‌ಅನುಭವಿಸದೆ ಇರುವ ಕೆಲ ಕ್ರೂರ ಮನಸ್ಸಿನ ದುಷ್ಕರ್ಮಿಗಳು ಅವುಗಳಿಗೆ ವಿಷವುಣಿಸಿದ್ದಾರೆ. ಅವುಗಳ ಮಾರಣ ಹೋಮ‌ ನಡೆಸಿದ್ದಾರೆ. ಆಹಾರಕ್ಕೆಂದು‌ ಅರಸಿ‌ ಬಂದ ನವಿಲುಗಳಿಂದು ಮನುಷ್ಯನ ಕ್ರೂರತ್ವಕ್ಕೆ‌ಬಲಿಯಾಗಿವೆ. ನವಿಲುಗಳ ಸತ್ತು ಬಿದ್ದಿರುವ ಜಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಇದು ಕುಡುಕರ ಅಡ್ಡೆಯಾಗಿದೆ. ಇದಕ್ಕೆ ಕಡಿವಾಣ ಹಾಕುವುದರ ಜೊತೆಗೆ ಇಂತಹ ಕ್ರೂರ ಮನಸ್ಸುಗಳನ್ನು ಹುಡುಕಿ‌ ತಕ್ಕ ಶಿಕ್ಷೆಯನ್ನು‌ ನೀಡಬೇಕು ಎಂದು ಪ್ರಾಣಿ ಪಕ್ಷಿಗಳ ಪ್ರಿಯ ಸಿದ್ದೇಶ್ ಆಗ್ರಹಿಸಿದ್ದಾರೆ.

ಇ‌ನ್ನು ಘಟನೆ ನಡೆದಿರುವ ವಿಚಾರವನ್ನು ತಿಳಿದ ವಲಯಾರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಬಂದು ಸ್ಥಳವನ್ನು ಪರಿಶೀಲಿಸಿ, ನವಿಲುಗಳ ಮೃತದೇಹಗಳನ್ನು ಚೀಲದಲ್ಲಿ ತೆಗೆದುಕೊಂಡು‌ ಹೋಗಿದ್ದಾರೆ. ನಂತರ ಪಶು ವೈದ್ಯರುಗಳ ಬಳಿ ಮರಣೊತ್ತರ ಪರೀಕ್ಷೆ ನಡೆಸಲಾಗುತ್ತದೆ. ನಂತರ ಅದರ ಪರಿಕರಗಳನ್ನು ದಾವಣಗೆರೆಯ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗುತ್ತದೆ. ಅರಣ್ಯದ ಸುತ್ತ ಪರೀಶೀಲನೆ ನಡೆಸಲಾಗುತ್ತಿದ್ದು, ವಿಷವುಣಿಸಿರುವುದು ಖಚಿತವಾದರೆ ತಪ್ಪಿತಸ್ಥರನ್ನು ಹುಡುಕಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಸಿಎಫ್ ರಾಘವೇಂದ್ರ ಹೇಳಿದ್ದಾರೆ.

ಅರಣ್ಯದಲ್ಲಿ ಯಾರ ಕೈಗೂ ಸಿಗದೆ ಸ್ವತಂತ್ರವಾಗಿ ಸ್ವಚಂದವಾಗಿ ಹಾರಾಡಿಕೊಂಡು ಒಡಾಡಿ ಕೊಂಡು‌ ಇದ್ದ ನವಿಲುಗಳ ಮಾರಣ ಹೋಮ‌ ನಡೆಸಿರುವುದು ಪ್ರಾಣಿ‌ಪ್ರಿಯರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

TRENDING