Monday, August 10, 2020
Home ಅಂತರ್ ರಾಷ್ಟ್ರೀಯ 150 ವರ್ಷಗಳ ನಂತರ ವಸಾಹತುಶಾಹಿ ವಿರೋಧಿ ಹೋರಾಟಗಾರರ ತಲೆಬುರುಡೆಗಳನ್ನು ಸಮಾಧಿ ಮಾಡಿದ ಅಲ್ಜೀರಿಯಾ

LATEST TRENDING

ಕಾರ್ಪೋರೇಶನ್ ಕಂಪನಿಗಳು ಬೇಸಾಯ ಬಿಟ್ಟು ...

ಕಲಬುರಗಿ: ಕಾರ್ಪೋರೇಶನ್ ಕಂಪನಿಗಳು ಬೇಸಾಯ ಬಿಟ್ಟು ತೊಲಗಲು ಆಗ್ರಹಿಸಿ ಪ್ರಾಂತ ರೈತ ಸಂಘ, ಸಿಐಟಿಯು , ಜೆಸಿಟಿಯು, ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಮತ್ತಿತರರ ಸಂಘಟನೆಗಳ ನೇತೃತ್ವದಲ್ಲಿ ಇಂದು...

ಡಿಸಿಎಮ್ ಸವದಿಯಿಂದ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ...

ಅಥಣಿ ಪಟ್ಟಣದ ಹೊರವಲಯದಲ್ಲಿ ಇರುವ ಸರ್ಕಾರಿ ಪದವಿಪೂರ್ವ ಕಾಲೆಜು ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಡಿಸಿಎಮ್ ಲಕ್ಷ್ಮಣ ಸವದಿ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು ಕೊವಿಡ್ ಇರುವದರಿಂದ ಸಾಂಕೇತಿಕವಾಗಿ ಉದ್ಘಾಟನೆ...

ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ...

ಉಡುಪಿ ನಗರದ ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತನನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ಸ್ ಮಾಲೀಕ ರಾಬರ್ಟ್ ಫುರ್ಟಾಡೊ(53) ಎಂದು ಗುರುತಿಸಿರುವುದಾಗಿ ಪೊಲೀಸರು...

4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ನಟ...

ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್, ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಈ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ...

ರಾಜ್ಯದ ಪ್ರವಾಹ ಮಾಹಿತಿ ಪಡೆದ ಪ್ರಧಾನಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದಿಂದ ಉಂಟಾದ ನಷ್ಟಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಹಿತಿ ಪಡೆದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಸಚಿವ ಗೃಹ ಸಚಿವ...

150 ವರ್ಷಗಳ ನಂತರ ವಸಾಹತುಶಾಹಿ ವಿರೋಧಿ ಹೋರಾಟಗಾರರ ತಲೆಬುರುಡೆಗಳನ್ನು ಸಮಾಧಿ ಮಾಡಿದ ಅಲ್ಜೀರಿಯಾ

ದೆಹಲಿ, ಜುಲೈ 6: ಸುಮಾರು 150 ವರ್ಷಗಳ ಹಿಂದೆ ಫ್ರೆಂಚ್ ವಸಾಹತು ಶಾಹಿಗಳ ವಿರುದ್ಧ ಹೋರಾಡಿ ಮಡಿದ ಅಲ್ಜೀರಿಯಾ ಹೋರಾಟಗಾರರ ಅವಶೇಷನಗಳನ್ನು ಅಂತಿಮವಾಗಿ ಭಾನುವಾರ ಸಮಾಧಿ ಮಾಡಲಾಗಿದೆ.

ಅಲ್ಜೀರಿಯಾದ 58ನೇ ಸ್ವಾತಂತ್ರ್ಯ ದಿನಾಚರಣೆಯ ಫ್ರೆಂಚ್ ಪ್ರಯುಕ್ತ ವಸಾಹತು ಶಾಹಿಗಳ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದ 24 ಜನ ಅಲ್ಜೀರಿಯಾ ಯೋಧರ ತಲೆಬುರುಡೆಗಳನ್ನು ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಭಾನುವಾರ ಎಲ್ ಅಲಿಯಾ ಸ್ಮಶಾನದಲ್ಲಿ ನಡೆದ ಸಮಾರಂಭದಲ್ಲಿ 24 ಹೋರಾಟಗಾರರ ಅವಶೇಷನಗಳಿಗೆ ರಾಷ್ಟ್ರೀಯ ಧ್ವಜ ಹೊದಿಸಿ ದೇಶದ ಅತ್ಯುನ್ನತ ಗೌರವ ಸಮರ್ಪಿಸಲಾಯಿತು. ಈ ವೇಳೆ ರಿಪಬ್ಲಿಕನ್ ಗಾರ್ಡ್‌ನ ಗಣ್ಯ ಘಟಕವೂ ಶಸ್ತ್ರಾಸ್ತ್ರಗಳೊಂದಿಗೆ ಗೌರವ ಸಲ್ಲಿಸಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುಮಾರು 150 ವರ್ಷದ ಹಿಂದೆ ಫ್ರೆಂಚ್‌ ವಸಾಹತು ಶಾಹಿಗಳ ವಿರುದ್ಧ ಹೋರಾಡಿದ ಅಲ್ಜೀರಿಯಾದ 24 ಹೋರಾಟಗಾರರನ ತೆಲೆಗಳನ್ನು ತುಂಡರಿಸಿ ಯುದ್ಧ ಟ್ರೋಫಿಗಳಾಗಿ ವಶಕ್ಕೆ ಪಡೆದುಕೊಂಡು ಮ್ಯೂಸಿಯಂನಲ್ಲಿ ಇಟ್ಟಿದ್ದರು. ಅಲ್ಜೀರಿಯಾ ಹೋರಾಟಗಾರರ ತಲೆಬುರುಡೆಗಳನ್ನು ಸ್ವದೇಶಕ್ಕೆ ವಾಪಸ್ ತರಬೇಕು ಎಂದು ಹಲವು ಇತಿಹಾಸಕಾರರ ಬಹಳ ವರ್ಷಗಳಿಂದ ಪ್ರಯತ್ನ ಪಟ್ಟಿದ್ದರು.

ಅಂತಿಮವಾಗಿ ಅಲ್ಜೀರಿಯಾ ದೇಶಕ್ಕೆ ಆ ಅವಶೇಷಗಳನ್ನು ಹಸ್ತಾಂತರಿಸಲಾಗಿದೆ. ಭಾನುವಾರದ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಅಲ್ಜೀರಿಯಾ ಅಧ್ಯಕ್ಷ ಅಬ್ದೆಲ್ಮದ್ಜಿದ್ ಟೆಬ್ಬೌನ್ ‘ಪ್ಯಾರಿಸ್ ತನ್ನ ವಸಾಹತುಶಾಹಿ ಭೂತಕಾಲಕ್ಕೆ ಕ್ಷಮೆಯಾಚಿಸಬೇಕು’ ಎಂದು ಹೇಳಿದರು.

ಅಂದ್ಹಾಗೆ, 1830 ರಲ್ಲಿ ಫ್ರೆಂಚ್ ವಸಾಹತುಶಾಹಿ ಪಡೆಗಳು ಅಲ್ಜೀರಿಯಾವನ್ನು ಆಕ್ರಮಿಸಿಕೊಂಡಿತ್ತು. ನಂತರ 1849ರ ದಂಗೆಯಲ್ಲಿ ಪಾಲ್ಗೊಂಡಿದ್ದ 24 ಜನ ಹೋರಾಟಗಾರರನ್ನು ಕೊಂದು ಅವರ ತಲೆಬುರುಡೆಗಳನ್ನು ಉಳಿಸಿಕೊಂಡಿದ್ದರು. ಈ ಕ್ರೂರ ಯುದ್ಧದ ನಂತರ ಜುಲೈ 5, 1962 ರಂದು ಅಲ್ಜೀರಿಯಾ ಔಪಚಾರಿಕವಾಗಿ ಸ್ವಾತಂತ್ರ್ಯ ಘೋಷಿಸಿತು.

TRENDING