Monday, August 10, 2020
Home ಸುದ್ದಿ ಜಾಲ ಅಂತ್ಯಕ್ರಿಯೆಗೂ ಬಾರದ ಕುಟುಂಬಸ್ಥರು!

LATEST TRENDING

ನೆರೆ ಸಂತ್ರಸ್ತರಿಗೆ ಊಟದ ಜೊತೆಗೆ ಮೊಟ್ಟೆ ವಿತರಣೆ:...

ನೆರೆ ಸಂತ್ರಸ್ತರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಈಗಾಗಲೇ ನೀಡಲಾಗುತ್ತಿರುವ ಮೂರು ಹೊತ್ತಿನ ಊಟದ ಜೊತೆಗೆ ಮೊಟ್ಟೆಯನ್ನು ಕೂಡ ನೀಡಲಾಗುತ್ತದೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ...

ಸದ್ಯ ಚಿನ್ನದ ದರ ಪ್ರತಿ 10 ಗ್ರಾಮ್​ಗೆ 57 ಸಾವಿರ ರೂ. ದಾಟಿದೆ. ಈ ಮೊದಲಿನ ಅಂದಾಜಿನ ಪ್ರಕಾರ ಮುಂದಿನ ವರ್ಷದ ಮಾರ್ಚ್​ ವೇಳೆಗೆ ಚಿನ್ನದ ಬೆಲೆ 65,000 ರೂ....

ಹಾಕಿ ಆಟಗಾರ ಮನ್‌ದೀಪ್ ಸಿಂಗ್ ಅವರಿಗೆ ಕೋವಿಡ್-19...

ಹಾಕಿ ಆಟಗಾರ ಮನ್‌ದೀಪ್ ಸಿಂಗ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಿಳಿಸಿದೆ. ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ....

ನೀರಿನ ರಬಸಕ್ಕೆ ವಿಜಯನಗರ ಕಾಲುವೆ ಒಡೆದು ಬೆಳೆ...

ವಿಜಯನಗರ ಕಾಲುವೆ ಒಡೆದು ಅಪಾರ ಪ್ರಮಾಣದ ಭತ್ತದ ಬೆಳೆ ನೀರಿಗಾಹುತಿಯಾಗಿದೆ. ಗಂಗಾವತಿ ತಾಲ್ಲೂಕಿನ ಕಡೇಬಾಗಿಲು ಗ್ರಾಮದ ಬಳಿ ವಿಜಯನಗರ ಕಾಲುವೆ ಒಡೆದಿದೆ.

ಹೆಚ್ಚಾದ ನೀರಿನ ಮಟ್ಟ, ಮುಳುಗಡೆಯಾದ ಸೇತುವೆ

ರಾಯಚೂರು: ಒಂದೆಡೆ ಕರೊನಾ ಎಂಬ ಹೆಮ್ಮಾರಿ ಇಡಿಜಗತ್ತನ್ನೆ ಬೆನ್ ಬಿಡದೆ ಕಾಡುತ್ತಿದೆ ಆದರೆ ಇದರ ನಡುವೆ ಕರ್ನಾಟಕದಲ್ಲಿ ಪ್ರವಾಹ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಸುರಿದಿರುವ ಮಹಾಮಳೆಗೆ ಜಲಶಯದಿಂದ ಅಪರ ಪ್ರಮಾಣದ ನೀರನ್ನು...

ಅಂತ್ಯಕ್ರಿಯೆಗೂ ಬಾರದ ಕುಟುಂಬಸ್ಥರು!

ಶನಿವಾರಸಂತೆ : ಸಮೀಪದ ಗೋಪಾಲಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಅವರ ಅಂತ್ಯಸಂಸ್ಕಾರಕ್ಕೆ ಪತ್ನಿ, ಮಕ್ಕಳು ಹಾಗೂ ಸಂಬಂಧಿಕರು ಬಾರದಿದ್ದಾಗ ಗ್ರಾಮಸ್ಥರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರೇ ಸೇರಿಕೊಂಡು ಅಂತ್ಯಕ್ರಿಯೆ ನೆರವೇರಿಸಿದ ಘಟನೆಯು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ. ಮೃತ ವ್ಯಕ್ತಿ ಯೂಸೂಫ್ (68). ಅವರ ಮೂಲ ಹೆಸರು ವರ್ಗೀಸ್. ಕ್ರೈಸ್ತ ಧರ್ಮದಲ್ಲಿ ಜನಿಸಿದ್ದ ಅವರು ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇಸ್ಲಾಂ ಧರ್ಮದ ಪತ್ನಿ ಮತ್ತು ಮೂವರು ಮಕ್ಕಳು ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಯೂಸೂಫ್ ಅವರು ಗೋಪಾಲಪುರದ ಮನೆಯಲ್ಲಿ ಒಂಟಿಯಾಗಿ ಬದುಕು ನಡೆಸುತ್ತಿದ್ದರು. ಆರೋಗ್ಯ ಸಮಸ್ಯೆಯಿಂದ ಈಚೆಗೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ (ಜುಲೈ 4) ಮೃತಪಟ್ಟಿದ್ದರು. ಅನಾಥ ಶವವೆಂದು ಭಾವಿಸಿ ಮೃತದೇಹವನ್ನು ಮಡಿಕೇರಿಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಈ ವಿಚಾರವು ಗೋಪಾಲಪುರ ಗ್ರಾಮಸ್ಥರು ಹಾಗೂ ಕರವೇ ತಾಲ್ಲೂಕು ಘಟಕದ ಕಾರ್ಯಕರ್ತರಿಗೆ ತಿಳಿದು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಆದರೆ, ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರು ಎನ್ನಲಾಗಿದೆ. ಬಳಿಕ ಭಾನುವಾರ ಸಂಜೆ ಗ್ರಾಮಸ್ಥರು, ಕ.ರ.ವೇ ತಾಲ್ಲೂಕು ಘಟಕದ ಕಾರ್ಯಕರ್ತರೇ ಯೂಸೂಫ್ ಅವರ ಅಂತ್ಯಕ್ರಿಯೆಯನ್ನು ಹಿಂದೂ ಧರ್ಮದ ವಿಧಿವಿಧಾನದಂತೆ ನೆರವೇರಿಸಿದ್ದಾರೆ.

TRENDING