Monday, August 10, 2020
Home ಜಿಲ್ಲೆ ಕಲಬುರ್ಗಿ ಕಲಬುರ್ಗಿಯಲ್ಲಿ ಕೊರೊನಾಗೆ ಮಹಿಳೆ ಸೇರಿ ಮೂವರ ಸಾವು,25ಕ್ಕೇರಿದ ಮೃತಪಟ್ಟವರ ಸಂಖ್ಯೆ

LATEST TRENDING

ಹೆಚ್ಚಾದ ನೀರಿನ ಮಟ್ಟ, ಮುಳುಗಡೆಯಾದ ಸೇತುವೆ

ರಾಯಚೂರು: ಒಂದೆಡೆ ಕರೊನಾ ಎಂಬ ಹೆಮ್ಮಾರಿ ಇಡಿಜಗತ್ತನ್ನೆ ಬೆನ್ ಬಿಡದೆ ಕಾಡುತ್ತಿದೆ ಆದರೆ ಇದರ ನಡುವೆ ಕರ್ನಾಟಕದಲ್ಲಿ ಪ್ರವಾಹ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಸುರಿದಿರುವ ಮಹಾಮಳೆಗೆ ಜಲಶಯದಿಂದ ಅಪರ ಪ್ರಮಾಣದ ನೀರನ್ನು...

ಕಾರ್ಮಿಕ ಸಂಘಟನೆಗಳಿಂದ ‘ಭಾರತ ರಕ್ಷಿಸಿ’ ಹೋರಾಟ

ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾನೂನು ರದ್ದು ಮಾಡಿರುವ ಕೇಂದ್ರ ಸರ್ಕಾರ ಕೃಷಿ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೋವಿಡ್-19...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ ಎಂದು ವರದಿಯಾಗಿದೆ. ತನಗೆ ಕೋವಿಡ್ ದೃಢವಾದ ಬಗ್ಗೆ ಸ್ವತಃ ಪ್ರಣಬ್ ಮುಖರ್ಜಿ ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಅಥಣಿ ಪಟ್ಟಣದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಮ್...

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೃಷಿ ಇಲಾಖೆಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಡಿಸಿ ಎಮ್ ಲಕ್ಷ್ಮಣ ಸವದಿಎಪಿ ಎಮ್ ಸಿ ಕಾಯ್ದೆಯ ತಿದ್ದುಪಡಿ ಯಾರಿಗೂ ಮಾರಕವಲ್ಲ...

ಮಾಜಿ ಸಚಿವ ಜಿ.ರಾಮಕೃಷ್ಣ ನಿಧನ ಹಿನ್ನಲೆ ಶ್ರದ್ಧಾಂಜಲಿ

ಕಲಬುರಗಿ: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಜಿ.ರಾಮಕೃಷ್ಣ ನಿಧನ ಹಿನ್ನೆಲೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಲಬುರ್ಗಿಯಲ್ಲಿ ಕೊರೊನಾಗೆ ಮಹಿಳೆ ಸೇರಿ ಮೂವರ ಸಾವು,25ಕ್ಕೇರಿದ ಮೃತಪಟ್ಟವರ ಸಂಖ್ಯೆ

ಕಲಬುರ್ಗಿ: ಜಿಲ್ಲೆಯಲ್ಲಿ ಶನಿವಾರ ಒಬ್ಬ ಮಹಿಳೆ ಹಾಗೂ ಇಬ್ಬರು ವೃದ್ಧರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದೊಂದಿಗೆ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಶುಕ್ರವಾರ ಕೂಡ ಮೂವರು ವಯಸ್ಕರೇ ಮೃತಪಟ್ಟಿದ್ದರು. ಮರುದಿನ ಮತ್ತೆ ಮೂವರ ಸಾವಿನ ಮೂಲಕ ಎರಡೇ ದಿನದಲ್ಲಿ ಆರು ಮಂದಿ ಮೃತಪಟ್ಟಂತಾಗಿದೆ.

ತೀವ್ರ ಜ್ವರ, ಉಸಿರಾಟ ತೊಂದರೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ನಗರದ ಇಸ್ಲಾಮಾಬಾದ್‌ ಕಾಲೊನಿಯ 45 ವರ್ಷದ ಮಹಿಳೆ ಜುಲೈ 3ರಂದು ಮೃತಪಟ್ಟಿದ್ದಾರೆ. ಅವರು ಜುಲೈ 1ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಪ್ರದೇಶದ 75 ವರ್ಷದ ವೃದ್ಧ ಕೂಡ ತೀವ್ರ ಉಸಿರಾಟದ ತೊಂದರೆಯಿಂದ ಜಲೈ 2ರಂದು ಕೊನೆಯುಸಿರೆಳೆದರು. ಅವರು ಜುಲೈ 1ರಂದು ಜಿಮ್ಸ್‌ನ ಕೋವಿಡ್‌ ಐಸೋಲೇಷನ್‌ ವಾರ್ಡ್‌ಗೆ ದಾಖಲಾಗಿದ್ದರು.

ಉಸಿರಾಟದ ತೊಂದರೆ, ಎದೆ ನೋವಿನ‌ ಸಮಸ್ಯೆಯಿಂದ ಬಳಲುತ್ತಿದ್ದ ದರ್ಗಾ ಪ್ರದೇಶದ 73 ವರ್ಷದ ವೃದ್ಧ ಜುಲೈ 1ರಂದು ಜಿಮ್ಸ್‌ನಲ್ಲಿ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಜುಲೈ 2ರಂದು ನಿಧನ ಹೊಂದಿದರು ಎಂದು ಜಿಲ್ಲಾಧಿಕಾರಿ ಬಿ.ಶರತ್‌ ತಿಳಿಸಿದ್ದಾರೆ.

37 ಪಾಸಿಟಿವ್‌, 46 ಗುಣಮುಖ: ಜಿಲ್ಲೆಯಲ್ಲಿ ಹೊಸದಾಗಿ 37 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಶನಿವಾರ ದೃಢಪಟ್ಟಿದೆ. ಇದರಲ್ಲಿ ಸೌದಿ ಅರೇಬಿಯಾದಿಂದ ಮರಳಿದ ಒಬ್ಬ ವ್ಯಕ್ತಿಯೂ ಇರುವುದು ಗಮನಾರ್ಹ.

ಇವರಲ್ಲಿ 9 ಮಹಿಳೆ, ಇಬ್ಬರು ಮಕ್ಕಳಿದ್ದಾರೆ. ವಿಷಮಶೀತ ಜ್ವರದಿಂದ ಬಳಲುತ್ತಿರುವ 12 ಮಂದಿ, ತೀವ್ರ ಉಸಿರಾಟದ ತೊಂದರೆ ಇರುವ 4 ಮಂದಿ, ಸೋಂಕಿತರ ಸಂಪರ್ಕಕ್ಕೆ ಬಂದ 6 ಜನ ಇದ್ದಾರೆ. 12 ಸೋಂಕಿತರಿಗೆ ಯಾರ ಸಂಪರ್ಕದಿಂದ ಬಂದಿದೆ ಎಂಬುದು ಪತ್ತೆಯಾಗಿಲ್ಲ.‌

ಬಾಕ್ಸ್‌-1

ಜಿಮ್ಸ್‌ ಸಿಬ್ಬಂದಿ, ಕಾನ್‌ಸ್ಟೆಬಲ್‌, ಆಶಾ ಕಾರ್ಯಕರ್ತೆಯರಿಗೂ ಸೋಂಕು

ಕಲಬುರ್ಗಿ: ನಗರದ ಮತ್ತೆ ಮೂವರು ಪೊಲೀಸ್‌ ಕಾನ್‌ಸ್ಟೆಬಲ್‌, ಒಬ್ಬ ಆಶಾ ಕಾರ್ಯಕರ್ತೆಹಾಗೂ ಒಬ್ಬ ಜಿಮ್ಸ್‌ ನೌಕರರಿಗೂ ಕೋವಿಡ್‌ ಪತ್ತೆಯಾಗಿದೆ.

ತಾಜ್‌ ಸುಲ್ತಾನಪುರದ ಕೆಎಸ್‍ಆರ್‌ಪಿ ಕ್ಯಾಂಪ್‍ನಲ್ಲಿರುವ 25 ವರ್ಷ ಮತ್ತು 30 ವರ್ಷದ ಕಾನ್‌ಸ್ಟೆಬಲ್‌ಗಳು ಈಗ ಐಸೋಲೇಷನ್‌ ವಾರ್ಡ್‌ ಸೇರಿದ್ದಾರೆ. ನಾಗನಹಳ್ಳಿಯ ಪೊಲೀಸ್‌ ತರಬೇತಿ ಕೇಂದ್ರದಲ್ಲಿ (ಪಿಟಿಸಿ) 29 ವರ್ಷ ಮಹಿಳೆಗೂ ಪಾಸಿಟಿವ್ ಬಂದಿದೆ. ಈ ಮೂವರೂ ವಿಮಾನ ನಿಲ್ದಾಣದಲ್ಲಿ ಬಂದೋಬಸ್ತ್ ಕರ್ತವ್ಯ ಮಾಡುತ್ತಿದ್ದರು.

ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ಆಶಾ ಕಾರ್ಯಕರ್ತೆ, ಜಿಮ್ಸ್‌ನ ಕೋವಿಡ್ ಆಸ್ಪತ್ರೆಯ 55 ವರ್ಷದ ಮಹಿಳೆ, ಕೆಬಿಎನ್ ಆಸ್ಪತ್ರೆಯ 24 ವರ್ಷದ ಯುವಕ, ನಾಗನಹಳ್ಳಿ ಪೊಲೀಸ್ ತರಬೇತಿ ಸಂಸ್ಥೆಯ 45 ವರ್ಷದ ವ್ಯಕ್ತಿ, ಐವಾನ್ ಇ ಶಾಹಿ ಪ್ರದೇಶದ ಪಿಡಬ್ಲ್ಯುಡಿ ಕ್ವಾಟರ್ಸ್‌ನಲ್ಲಿರುವ ನೌಕರರ ಕುಟುಂಬದ ಇಬ್ಬರು ಸದಸ್ಯರಿಗೆ ವೈರಸ್ ಅಂಟಿಕೊಂಡಿದೆ.

TRENDING