Monday, August 10, 2020
Home ಜಿಲ್ಲೆ ಕೇಂದ್ರ ಕಾರ್ಮಿಕ ಸಂಘಟನೆಯ ನಾನ ಬೇಡಿಕೆಗಳ ಈಡೇರಿಕೆಗಳಿಗೆ ಆಗ್ರಹ..!

LATEST TRENDING

ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ...

ಉಡುಪಿ ನಗರದ ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತನನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ಸ್ ಮಾಲೀಕ ರಾಬರ್ಟ್ ಫುರ್ಟಾಡೊ(53) ಎಂದು ಗುರುತಿಸಿರುವುದಾಗಿ ಪೊಲೀಸರು...

4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ನಟ...

ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್, ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಈ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ...

ರಾಜ್ಯದ ಪ್ರವಾಹ ಮಾಹಿತಿ ಪಡೆದ ಪ್ರಧಾನಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದಿಂದ ಉಂಟಾದ ನಷ್ಟಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಹಿತಿ ಪಡೆದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಸಚಿವ ಗೃಹ ಸಚಿವ...

ಆಸ್ಪತ್ರೆಯಿಂದ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಡಿಸ್ ಚಾರ್ಜ್

ಕಳೆದ 10 ದಿನಗಳಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ,ಎಸ್‌.ಯಡಿಯೂರಪ್ಪನವರು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ. ನಿನ್ನೆ ಯಡಿಯೂರಪ್ಪನವರಿಗೆ...

ರಾಜ್ಯದ ಅತಿವೃಷ್ಠಿ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ...

ರಾಜ್ಯದ ಅತಿವೃಷ್ಠಿ ಹಾನಿಯ ಬಗ್ಗೆ ರಾಜ್ಯದ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಧೈರ್ಯವಾಗಿ ವಿವರಿಸಿ ಹೆಚ್ಚಿನ ಪರಿಹಾರ ಪಡೆದುಕೊಳ್ಳಲು ಮತ್ತು ಕಳೆದ ವರ್ಷದ ಹಾನಿಯ ಪರಿಹಾರದ ಬಾಕಿಯನ್ನು...

ಕೇಂದ್ರ ಕಾರ್ಮಿಕ ಸಂಘಟನೆಯ ನಾನ ಬೇಡಿಕೆಗಳ ಈಡೇರಿಕೆಗಳಿಗೆ ಆಗ್ರಹ..!

ಲಿಂಗಸೂಗೂರು: ಕೋವಿಡ್ -೧೯ ಸಾಂಕ್ರಾಮಿಕ ರೋಗವು ದೇಶದ ಜನತೆಯನ್ನು ಬಾಧಿಸುತ್ತಿದೆ, ದೇಶದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ, ದೇಶದಲ್ಲಿ ಆರ್ಥಿಕತೆ ಕುಸಿತದತ್ತ ಸಾಗುತ್ತಲೇ ಇದೆ, ಇದರಿಂದ ದುಡಿಯುವ ಜನರ ಬದುಕು ಸಂಕಷ್ಟಕ್ಕೀಡಾಗಿದೆ.

ಕೋವಿಡ್ -೧೯ ನಿಯಂತ್ರಿಸಿ ಜನರನ್ನು ಸಂರಕ್ಷಿಸಬೇಕಾದ ಕೇಂದ್ರ ಸರ್ಕಾರಗಳು ಕೈಚೆಲ್ಲಿ ಕೂತಿವೆ, ದೇಶದಲ್ಲಿ ಕೋವಿಡ್ ನಿಯಂತ್ರಿಸಿ ಜನತ ಆರ್ಥಿಕತೆ ಉತ್ತಮಪಡಿಸಬೇಕಾದ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಿದೆ, ಲಾಕ್‌ ಡೌನ್‌ ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಕ್ರಮ ಜರುಗಿಸಲಿಲ್ಲ, ಕೇಂದ್ರ ಸರ್ಕಾರದ ಪ್ರಕಟಿಸಿದ ೨೦ ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಹಿಂದಿನ ಬಜೆಟ್ ಘೋಷಣೆಗಳ ಹೊರತು ಬೇರೇನೂ ಅಲ್ಲ, ಅದು ನೀಡಿದ್ದು ಜಿಡಿಪಿಯ ಶೇ ೧ % ರಷ್ಟು ಮಾತ್ರ ಜಗತ್ತಿನ ಅನೇಕ ದೇಶಗಳ ಸರ್ಕಾರಗಳು ಪ್ರಕಟಿಸಿದ ಪರಿಹಾರ ಪ್ಯಾಕೇಜ್‌ ನಲ್ಲಿ ಕಾರ್ಮಿಕರಿಗೆ ವೇತನ ಪ್ಯಾಕೇಜನ್ನು ನೀಡಿದೆ.

ಆದರೆ ನಮ್ಮ ದೇಶದ ಸಣ್ಣ – ಮಧ್ಯಮ ಕೈಗಾರಿಕೆಗಳಿಗೆ ಮೂರು ತಿಂಗಳ ವೇತನ ಪ್ಯಾಕೇಜ್ ಪರಿಹಾರದ ಬೇಡಿಕೆ ಹಾಗೂ ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಿಸಿ ಆರ್ಥಿಕತೆ ಉತ್ತಮ ಪಡಿಸಲು ಎಲ್ಲಾ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲಾ ಕುಟುಂಬಕ್ಕೂ ಆರು ತಿಂಗಳುಗಳವರೆಗೆ ಮಾಸಿಕ ರೂ . ೭೫೦೦ / – ನೇರ ನಗದು ವರ್ಗಾವಣೆ ಮತ್ತು ಸಾರ್ವತ್ರಿಕವಾಗಿ ಮಾಸಿಕ ತಲಾ ೧೦ ಕೆ.ಜಿ, ಪಡಿತರ ನೀಡಬೇಕು ಹಾಗೂ ವಲಸೆ ಕಾರ್ಮಿಕರ ಸುರಕ್ಷತಾ ಪ್ರಮಾಣದ ಬೇಡಿಕೆಗಳನ್ನು ಈಡೇರಿಸಿಲ್ಲ, ಬದಲಾಗಿ ಕಾರ್ಪೋರೇಟ್ ಬಂಡವಾಳದಾರರಿಗೆ ತೆರಿಗೆ ಮನ್ನಾ,ಸಾಲಮನ್ನಾ, ಬಡ್ಡಿರಹಿತ ಸಾಲ, ಇನ್ನಿತರ ಭಾರಿ ರಿಯಾಯತಿಗಳನ್ನು ಪ್ರಕಟಿಸಿ ತಾನು ಬಂಡವಾಳ ಶಾಹಿ ಸ್ನೇಹಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಅಲ್ಲದೇ ಕೇಂದ್ರ ಸರಕಾರವು ಕಾರ್ಮಿಕರಿಗೆ ವೇತನ ವತಿಗೆ ಸಂಬಂಧಿಸಿದಂತೆ ತನ್ನದೇ ಆದ ಆದೇಶಗಳನ್ನು ಮತ್ತು ಸಲಹೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಮಾತ್ರವಲ್ಲ ಲಾಕ್ ಹೌಸ್ ಕಾಲಾವಧಿಯ ವೇತನ ನೀಡಬೇಕು, ಕೆಲಸ ನಿರಾಕರಿಸಬಾರದು ಎಂಬ ತನ್ನ ೨೯-೦೩-೨೦೨೦ರ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲಿ ಸಮರ್ಥವಾಗಿ ಪ್ರತಿಪಾದಿಸಿಕೊಳ್ಳುವ ತನ್ನ ಹಿಂದಿನ ಆದೇಶವನ್ನು ೧೭-೦೫-೨೦೨೦ ರಂದು ಹಿಂಪಡೆದಿದೆ, ಪರಿಣಾಮವಾಗಿ ಕಾರ್ಮಿಕರು ವೇತನವಿಲ್ಲದೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಒಂದೆಡೆಯಿದ್ದರೆ ಇನ್ನೊಂದೆಡೆ ಹೆಚ್ಚು ಅವಧಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಬಹುತೇಕ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ವೇತನ ಕಡಿತ ವೇತನ ಒಪ್ಪಂದ ಜಾರಿ ಇಲ್ಲ ಸೌಲಭ್ಯಗಳ ಕಡಿತ, ಕೆಲಸ ನಿರಾಕರಣೆ,ಲೇ – ಆಫ್ ,ವೀಟೆಂಚಮೆಂಟ್, ಕ್ಲೋಸರ್, ಸರ್ವೆ ಸಾಮಾನ್ಯ ಸಂಗತಿಯಾಗಿದೆ.

ಕಾರ್ಮಿಕರ ಉದ್ಯೋಗ, ವೇತನ ಸಂರಕ್ಷಿಸಲು ರಾಜ್ಯ ಸರ್ಕಾರ ಸಹ ಕ್ರಮವಹಿಸುತ್ತಿಲ್ಲ, ಕಾರ್ಮಿಕ ಇಲಾಖೆ ಕೋವಿಡ್ -೧೯ ನೆ ಹೇಳಿ ಈಗಾಗಲೇ ರಾಜ್ಯದಲ್ಲಿ ಲಾಕ್‌ ಡೌನ್ ಸಮಯದಲ್ಲಿ ದಾಖಲಾಗಿರುವ ಕಾರ್ಮಿಕರ ಸರಿಸುಮಾರು ೪೫೦೦ ದೂರುಗಳು ಸೇರಿದಂತೆ ಇನ್ನಿತರ ದೂರುಗಳ ಆಧಾರದಲ್ಲಿ ಕ್ರಮವಹಿಸಿ ಕಾರ್ಮಿಕರಿಗೆ ಪರಿಹಾರ ನೀಡುವಲ್ಲಿ ಕೆಚೆಲ್ಲಿ ಕೂತಿದೆ.

ಕೇಂದ್ರ ಸರ್ಕಾರ ಕೋವಿಡ್ -೧೯ ಲಾಕ್ಡೌನ್ ಮರೆಯನ್ನು ಬಳಸಿಕೊಂಡು ದೇಶದ ಜನರ ಆಸ್ತಿಯಾದ ಸಾರ್ವಜನಿಕ ಉದ್ದಿಮೆಗಳಲ್ಲಿನ ಹೂಡಿಕೆ ಹಿಂತೆಗೆತ ಮತ್ತು ಖಾಸಗೀಕರಣಗೊಳಿಸಲು ಮುಂದಾಗಿದೆ. ಎಲ್ಲಾ ಕರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಮೂಲಕ ಕಾರ್ಮಿಕರ ಮೇಲೆ ಗುಲಾಮಗಿರಿಯನ್ನು ಹೇರಲು ಹೊರಟಿದೆ, ಜನತೆಗೆ ಆತ್ಮ – ನಿರ್ಭರ್ ಭಾರತ್ ಘೋಷಣೆಯನ್ನು ನೀಡಿ ಜನತೆ ಸಮಾಜ ಮತ್ತು ಸರ್ಕಾರದ ಮೇಲೆ ತಬಲಂಬಿತವಾಗಬಾರದೆಂದು ತಮ್ಮ ಸರ್ಕಾರ ಹೇಳುತ್ತಿದೆ.

ಈ ನೀತಿಗಳ ಪರಿಣಾಮದಿಂದಾಗಿ ನಿರುದ್ಯೋಗಿಗಳು ದೇಶದಲ್ಲಿ ೧೪೫ ಕೋಟಿಗಿಂತ ಹೆಚ್ಚಾಗಿದ್ದಾರೆ. ಜೊತೆಗೆ ದಿನಗೂಲಿಗಳು, ಗುತ್ತಿಗೆಗೆ ಹಂಗಾಮಿ ಕಾರ್ಮಿಕರನ್ನು ಸೇರಿಸಿದರೆ ಇದು ಪ್ರಸ್ತುತ ೨೪ ಕೋಟಿಗಿಂತ ಹೆಚ್ಚಾಗುತ್ತದೆ ಶೇ . ೩೦ % ರಿಂದ ೩೫ % , ಕೈಗಾರಿಕಾ ಘಟಕಗಳು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸುವ ಸ್ಥಿತಿಯಲ್ಲಿರಬಹುದು ಎಂದು ಎಂ.ಎಸ್.ಎಂ ಇ ಗಳು ಸ್ವತಃ ವರದಿ ಮಾಡುತ್ತಿವೆ. ನಿರುದ್ಯೋಗ ದರಿದ್ರ ಈಗಾಗಲೇ ಶೇ . ೨೭ ತಲಪಿದೆ.

೪೦ ಕೋಟಿಗೂ ಹೆಚ್ಚು ಜನರನ್ನು ತೀವ್ರ ಬಡತನಕ್ಕೆ ತಳ್ಳಲಾಗುವುದು ಎಂದು ಐಎಲ್ ಓ ತನ್ನ ವರದಿಯಲ್ಲಿ ತಿಳಿದಿದೆ, ಅಲ್ಲದೇ ಕಾರ್ಪೋರೇಟ್ ಭೂಮಾಲೀಕರ ಲಾಭಿಯ ಪರವಾಗಿ ಕೃಷಿ ಆರ್ಥಿಕತೆಯಲ್ಲಿನ ಆಕ್ರಮಣಕಾರಿ ರಚನಾತ್ಮಕ ಬದಲಾವಣೆಗಳು ಕೃಷಿಕರನ್ನು ಆಳವಾದ ದುಃಖಗಳಿಗೆ ಒಳಪಡಿಸುವುದರ ಜೊತೆಗೆ ಇಡೀ ಜನರಿಗೆ ಆಹಾರ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದೆ. ಕೋಡ್ -೧೯ ರೋಗವನ್ನು ಎದುರಿಸುವ ಕೆಲಸ ಮಾಡುತ್ತಿರುವ ಮುಂಚೂಣಿಕಿ ಯೋಧರಲ್ಲಿರುವ ಆಶಾ ಅಂಗನವಾಡಿ ಇನ್ನಿತರ ಸ್ತ್ರೀರಿ ನೌಕರರು, ಎಂಡಿಎ , ೧೦೮ ಆಂಬುಲೆನ್ಸ್ ಉದ್ಯೋಗಿಗಳು, ಪೌರಕಾರ್ಮಿಕರು, ದಾದಿಯರು ಮತ್ತು ಪೋಲಿಸರು ,ವೈದ್ಯರ ಸುರಕ್ಷತಾ ಸಾಧನಗಳ ಬೇಕೆಗಳನ್ನು ಇದುವರೆಗೂ ಪೂರೈಸಿಲ್ಲ . ಅವರಿಗೆ ಯಾವುದೇ ಪ್ರೋತ್ಸಾಹ ಧನವನ್ನು ಕೇಂದ್ರ ರಾಜ್ಯ ಸರ್ಕಾರಗಳು ನೀಡಿಲ್ಲ…

ಕೆಸಲ ಮಾಡುವ ಅಸಂಘಟಿತ ಕಾರ್ಮಿಕರ ಬದುಕನ್ನು ಸಂರಕ್ಷಿಸಲು ಬೇಕಾದ ಪರಿಹಾರವನ್ನು ನೀಡದೆ ವಂಚಿಸಿವೆ. ಹೊಟ್ಟೆಪಾಡಿಗಾಗಿ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದು ದುಡಿಯುತ್ತಿದ್ದ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಆದಾಯವಿಲ್ಲದೇ ಬೀದಿಪಾಲಗಿದ್ದಾರೆ. ಅವರನ್ನು ತಮ್ಮ ಊರುಗಳಿಗೆ ಕಳುಹಿಸಲು ನಡೆದುಕೊಂಡ ರೀತಿ ಅಮಾನವೀಯವಾಗಿದೆ. ತಮ್ಮ ಹಳ್ಳಿಗೆ ಮರಳಿ ತಲುಪಿದ ನಂತರ ಅಂತರ್ ಜಿಲ್ಲಾ / ರಾಜ್ಯ ಕಾರ್ಮಿಕರಿಗೆ ಕೆಲಸದ ಅಗತ್ಯವಿರುತ್ತದೆ.

ಅದಕ್ಕಾಗಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು ೨೦೦ ದಿನಗಳಿಗೆ ಹೆಚ್ಚಿಸಿ ವಲಸೆ ಕಾರ್ಮಿಕರು ಸೇರಿದಂತೆ ನಗರದ ಬಡವರಿಗೆ ವಿಸ್ತರಿಸಬೇಕಾಗಿದೆ. ಅವರಿಗೆ ಅಗತ್ಯ ಆರೋಗ್ಯ ರಕ್ಷಣೆ ಮತ್ತು ಆಹಾರ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರಗಳು ಮುಂದಾಗುತ್ತಿಲ್ಲ, ಈ ಹಿನ್ನಲೆಯಲ್ಲಿ ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ ಜನತೆಗೆ ಪರಿಹಾರಕ್ಕಾಗಿ ಕೇಂದ್ರದ ಎಲ್ಲಾ ಕಾರ್ಮಿಕ ಸಂಘಟನೆಗಳು ಸ್ವತಂತ್ರ ಒಕ್ಕೂಟಗಳು ಮತ್ತು ಸಂಘಗಳು ಸೇರಿ ಜಂಟಿಯಾಗಿ ೨೦೨೦ ಜುಲೈ ೩ ರಂದು ದೈಹಿಕ ಅಂತರ ಮತ್ತು ಇನ್ನಿತರ ಮುನ್ನೆಚ್ಚರಿಕೆಗಳನ್ನು ಕಾಪಾಡಿಕೊಂಡು ದೇಶವ್ಯಾಪಿ ಪ್ರತಿಭಟನೆಯನ್ನು ನಡೆಸಿ ಕೆಳಕಂಡ ಬೇಡಿಕೆಗಳ ತ್ವರಿತ ಈಡೇರಿಕೆಗೆ ಒತ್ತಾಯಿಸಿ ಮಾನ್ಯ ಸಹಾಯಕ ಆಯುಕ್ತರ ಲಿಂಗಸೂಗೂರು ಇವರ ಮುಖಾಂತರ ಮಾನ್ಯ ಪ್ರಧಾನಮಂತ್ರಿಯವರಿಗೆ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮನವಿ ಸಲ್ಲಿಸಿದರು. ಈಸಂದರ್ಭದಲ್ಲಿ ಮಹ್ಮದ್ ಹನೀಫ್,ಬಾಬಾಜಾನಿ,ಮಹಾದೇವಿ,ನಾಗರತ್ನ ಇತರರು ಇದ್ದರು.

ಬಸಲಿಂಗಪ್ಪ

ದಿ ನ್ಯೂಸ್ 24 ಕನ್ನಡ,ಲಿಂಗಸೂಗೂರು

TRENDING

ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ...

ಉಡುಪಿ ನಗರದ ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತನನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ಸ್ ಮಾಲೀಕ ರಾಬರ್ಟ್ ಫುರ್ಟಾಡೊ(53) ಎಂದು ಗುರುತಿಸಿರುವುದಾಗಿ ಪೊಲೀಸರು...

4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ನಟ...

ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್, ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಈ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ...

ರಾಜ್ಯದ ಪ್ರವಾಹ ಮಾಹಿತಿ ಪಡೆದ ಪ್ರಧಾನಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದಿಂದ ಉಂಟಾದ ನಷ್ಟಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಹಿತಿ ಪಡೆದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಸಚಿವ ಗೃಹ ಸಚಿವ...

ಆಸ್ಪತ್ರೆಯಿಂದ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಡಿಸ್ ಚಾರ್ಜ್

ಕಳೆದ 10 ದಿನಗಳಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ,ಎಸ್‌.ಯಡಿಯೂರಪ್ಪನವರು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ. ನಿನ್ನೆ ಯಡಿಯೂರಪ್ಪನವರಿಗೆ...

ರಾಜ್ಯದ ಅತಿವೃಷ್ಠಿ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ...

ರಾಜ್ಯದ ಅತಿವೃಷ್ಠಿ ಹಾನಿಯ ಬಗ್ಗೆ ರಾಜ್ಯದ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಧೈರ್ಯವಾಗಿ ವಿವರಿಸಿ ಹೆಚ್ಚಿನ ಪರಿಹಾರ ಪಡೆದುಕೊಳ್ಳಲು ಮತ್ತು ಕಳೆದ ವರ್ಷದ ಹಾನಿಯ ಪರಿಹಾರದ ಬಾಕಿಯನ್ನು...