ಕೊರೊನಾ ಶಂಕೆ ಹಿನ್ನಲೆ ಮುಗಳಿ ಗ್ರಾಮ ಸೀಲ್ ಡೌನ್…

ಸಕಲೇಶಪುರ : ವೃದ್ಧೆಯೊಬ್ಬರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಮುಂಜಾಗೃತಾವಾಗಿ ಮುಗಳಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ತಾಲ್ಲೂಕಿನ ಬೆಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಗಳಿ ಗ್ರಾಮದ 70 ವರ್ಷದ ವೃದ್ದೆಯೊಬ್ಬರಿಗೆ ಕೊವಿಂದ್ 19 ರೋಗ ಲಕ್ಷಣ ಕಂಡು ಬಂದಿದೆ ಹಾಗಾಗಿ ತಾಲ್ಲೂಕು ಆಡಳಿತ ಗ್ರಾಮದ ಮೂರು ಅಡ್ಡ ರಸ್ತೆಗಳನ್ನು ಬ್ಯಾರಿಕೇಡ್ ಗಳಿಂದ ಬಂದ್ ಮಾಡಲಾಗಿದೆ.

ಗ್ರಾಮದಲ್ಲಿ ಕಂಟೈನ್ಮೆಂಟ್ ಹಾಗೂ ಬಫರ್ ಜೋನ್ ಗಳಾಗಿ ವಿಂಗಡಣೆ ಮಾಡಿ ಕಂಟೈನ್ಮೆಂಟ್  ಜೋನಿನ 100 ಮೀಟರ್ ದೂರದವರೆಗೂ ವಿಸ್ತರಿಸಿ ಜನರು ಬ್ಯಾರಿಕೇಡ್ ಹಾಕಿರುವ ಬಳಿ ಬಂದು ಅಗತ್ಯ ವಸ್ತುಗಳನ್ನು ಕೊಂಡುಕೊಂಡು ಹೋಗಬಹುವುದು ಹಾಗೆ ಬಫರ್ ಜೋನ್ ನ್ನು 200 ಮೀಟರ್ ಗೆ ವಿಸ್ತರಿಸಿ ಇಲ್ಲಿ ಯಾವುದೇ ಸಾರ್ವಜನಿಕರ ಓಡಾಟ ನಿಷೇದಿಸಲಾಗಿದೆ. ಅತ್ಯಗತ್ಯ ವಸ್ತುಗಳು ತುರ್ತು ಸೇವೆಗೆ ಮಾತ್ರ ಅವಕಾಶವಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ. ಬಫರ್ ಜೋನಿನಲ್ಲಿರುವ ಜನರು ಒಳಗೆ ಬರುವಂತಿಲ್ಲ ಹಾಗೂ ಹೊರಗೂ ಹೋಗದಂತೆ ತಡೆಯಾಲಾಗುತ್ತದೆ ಎಂದು ಮಾಹಿತಿ ನೀಡಿದರು.

ವೃದ್ಧೆಗೆ ಕೊರೋನಾ ಪಾಸಿಟಿವ್ ಇನ್ನೂ ಅಧಿಕೃತವಾಗಿ ಜಿಲ್ಲಾಡಾಳಿತ ವರದಿ ನೀಡಿಲ್ಲ ಆದರೂ ವೈರಸ್ ಹರಡದಂತೆ ಮುನ್ನೆಚ್ಚರಿಕೆಯಿಂದ ಕ್ರಮ ಕೈಗೊಳ್ಳಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಮಹೇಶ್ ತಿಳಿಸಿದರು. ಸ್ಥಳಕ್ಕೆ ಡಿವೈಎಸ್ಪಿ ಬಿ ಆರ್ ಗೋಪಿ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನೆಡೆಸಿದರು. ಈ ವೇಳೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಿ ಆರ್ ಹರೀಶ್, ವೃತ್ತ ನಿರೀಕ್ಷಕ ಗಿರೀಶ್, ಪಿ ಎಸ್ ಐ ರಾಘವೇಂದ್ರ ಉಪ ತಹಸೀಲ್ದಾರ್ ನಾಗರಾಜ್, ಬೆಳಗೋಡು ಹೋಬಳಿ ಕಂದಾಯ ನಿರೀಕ್ಷಕ ಜನಾರ್ಧನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಲ್ಲಾಸ್ ಇದ್ದರು.

 

ಪ್ರದೀಪ್

ದಿ ನ್ಯೂಸ್ 24 ಕನ್ನಡ, ಸಕಲೇಶಪುರ

Share Post

Leave a Reply

Your email address will not be published. Required fields are marked *

error: Content is protected !!