ಸಿಂಧನೂರು ನಗರಸಭೆ ಕಛೇರಿ ಮೇಲೆ ಎಸಿಬಿ ದಾಳಿ..?

ರಾಯಚೂರು: ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಬರುವ ಸಿಂಧನೂರು ನಗರಸಭೆ ಕಛೇರಿ ಮೇಲೆ ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆ ಎಸಿಬಿ ದಾಳಿ ಮಾಡಲಾಗಿದೆ.‌ ಸಾರ್ವಜನಿಕರು ಯಾವುದೇ ಕೆಲಸಕ್ಕೆ ಹೋದರು ಹಣದ ಬೇಡಿಕೆ ಇಡುವಂತಹದ್ದು, ಹಲವು ಸಿಬ್ಬಂದಿಗಳು ಸುಮಾರು ವರ್ಷಗಳಿಂದ ಇಲ್ಲಿಯೆ ಬೀಡು ಬಿಟ್ಟಿದ್ದು ಸಾರ್ವಜನಿಕರ ಮೇಲೆ ಗೂಂಡಾ ವರ್ತನೆ ಮಾಡುತ್ತಿರುವ ಬಗ್ಗೆ, ಅದರಲ್ಲೂ ಫಾರಂ ನಂ 3 ಕೊಡುವಾಗ, ಮೊಟೇಷನ್, ಕಟ್ಟಡ ಕಟ್ಟಲು ಪರವಾನಿಗೆ ಮತ್ತು ಜಿಲ್ಲಾಧಿಕಾರಿಯಿಂದ ಎನ್ ಎ ಆಗಿ , ಆರ್.ಡಿ.ಎ ಯಿಂದ ಅಪ್ರುವಲ್ ಆಗಿ ಬಂದ ಪೈಲ್ ಗಳನ್ನ ಎಸ್ಟಿಮೇಷನ್ ಮಾಡಿ ಅನುಮೋದನೆ ನೀಡದೆ, ಎಸ್ಸಿ/ಎಸ್ಟಿ ಜನರಿಗೆ ಲ್ಯಾಪ್ ಟಾಪ್ ಮತ್ತು ಸೊಲಾರ್ ಸ್ಕೀಂಗಳು, ಅಂಗವಿಕಲರಿಗೆ ವಾಹನಗಳನ್ನ ನೀಡುವ ವಿಚಾರದಲ್ಲಿ ಹಣದ ಬೇಡಿಕೆ ಇಟ್ಟಿದ್ದರು.

ಸ್ವಚ್ಚಭಾರತ ಅಭಿಯಾನದಡಿ ಹಣ ನೀಡಿದವರಿಗೆ ಮಾತ್ರ ಶೌಚಾಲಯ ನೀಡುವುದು, ಹೀಗೆ ಸಾಕಷ್ಟು ಅವ್ಯವಹಾರಗಳು ನಗರಸಭೆಯಲ್ಲಿ ನಡೆಯುತ್ತಿದ್ದು ಇವೆಲ್ಲವುಗಳ ದೂರಿನ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಎಸಿಬಿ ಡಿಎಸ್ಪಿ ಸಂತೋಷ ಬನಹಟ್ಟಿ, ಇನ್ಸಪೆಕ್ಟರ್ ಬಾಳನಗೌಡ ಎಸ್ ಎಂ, ಹನುಮಂತು ಸೇರಿ ೮ ಜನ ಇನ್ಸ್ಪೆಕ್ಟರ್, 40 ಜನ ಸಿಬ್ಬಂದಿಗಳು ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ಬೀದರ್, ದಾರವಾಢ, ಗದಗ ಜಿಲ್ಲೆಯ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ತನಿಖೆ ಮುಂದುವರಿಸಿದ್ದಾರೆ.

ಮಂಜು

ದಿ ನ್ಯೂಸ್ 24 ಕನ್ನಡ, ರಾಯಚೂರು

Share Post

Leave a Reply

Your email address will not be published. Required fields are marked *

error: Content is protected !!