ವೇತನ ಹೆಚ್ಚು ಮಾಡಬೇಕೆಂದು ಆಶಾ ಕಾರ್ಯಕರ್ತೆಯರು ಮನವಿ ಪತ್ರ ಸಲ್ಲಿಸಿದ್ದಾರೆ..!

ಲಿಂಗಸೂಗುರು: ಇಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಾಲೂಕು ಸಮಿತಿಯಿಂದ ರಾಜ್ಯ ಸಮಿತಿಯ ಕರೆಯ ಮೇರೆಗೆ ಇಂದು ಲಿಂಗಸೂಗುರಲ್ಲಿ ಸಹಾಯಕ ಆಯುಕ್ತರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮಾಸಿಕ ವೇತನ ಹನ್ನೆರಡು ಸಾವಿರ ನಿಗದಿ ಮಾಡಬೇಕು, ಕೊರೊನ ತಡೆಗಟ್ಟುವಲ್ಲಿ ತಳಮಟ್ಟದಲ್ಲಿ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಗಳಿಗೆ ಸಮರ್ಪಕ ಸುರಕ್ಷಿತ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಮನವಿ ಪತ್ರ ಸಲ್ಲಿಸಲಾಯಿತು,

ಈ ಸಂದರ್ಭದಲ್ಲಿ ತಾಲೂಕು ಗೌರವ ಅಧ್ಯಕ್ಷರಾದ ಶರಣಪ್ಪ ಉದ್ಬಾಳ್ ಮಾತನಾಡಿ, ಇವತ್ತು ಕಷ್ಟ ಪಟ್ಟು ಕೆಲಸ ಮಾಡುವ ಆಶಾಗಳಿಗೆ ದುಡಿದಷ್ಟು ಸಂಬಳ ನೀಡದೆ ವಂಚನೆ ಮಾಡತ್ತಾದ್ದಿರೆ, ಶಾಫ್ಟ್ ತುಂಬವ ಹೆಸರಿನಲ್ಲಿ ಮಹಾ ಮೋಸ ನೆಡೆದು ಸರಿಯಾಗಿ ಪ್ರೊತ್ಸಾಹಧನ ಸಿಗುತ್ತಿಲ್ಲ, ಈಗ ವಾರಿಯರ್ಸ್‌ ಆಗಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಸುರಕ್ಷಿತ ಸಾಮಗ್ರಿಗಳನ್ನು ಕೊಡದೆ ಇರುವುದು ನಾಚಿಕೆಗೇಡು, ಲಕ್ಷಾಂತರ ಕೋಟಿ  ಪಿ ಕೇರ್ ಹಣ ಹರಿದು ಬಂದರು ಕಷ್ಟ ಪಟ್ಟು ಕೆಲಸ ಮಾಡುವ ಆಶಾಗಳಿಗೆ ಕನಿಷ್ಠ ಮಾಸಿಕ ವೇತನ ಸರ್ಕಾರಗಳ ಬೇಜವಾಬ್ದರಿಯನ್ನು ಖಂಡಿಸಿ, ಆಶಾಗಳ ಕೆಲಸ ಗೌರವಿಸುವುದು ಎಂದರೆ.

ಬರಿ ಶಾಲು ಹೂ ಮಳೆ ಸುರಿಸಿದರೆ ಸಾಕು ಆಗುವುದಿಲ್ಲ, ಅವರ ಕೆಲಸಕ್ಕೆ ಗೌರವಯತ ಬದುಕಿಗಾಗಿ ಮಾಸಿಕ ವೇತನ ನಿಗದಿ ಮಾಡಿ ಅಂತ ಹೋರಾಟ ನಡೆಯುತ್ತದೆ,  ಸರ್ಕಾರ ಜುಲೈ ಹತ್ತನೇ ತಾರೀಖಿನ ಒಳಗಡೆ ಬೇಡಿಕೆ ಈಡೇರಿಸದಿದ್ದರೆ ಎಲ್ಲಾ ರೀತಿಯ ಕೆಲಸಗಳನ್ನು ಸ್ಥಗಿತಗೊಳಿಸಿ ಹೋರಾಟ ತೀವ್ರ ಗೊಳ್ಳವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಶಾ ಸಂಘದ ತಾಲೂಕ ಕಾರ್ಯದರ್ಶಿ ಲವಿನಾ, ಎಐಯುಟಿಯುಸಿ ಕಾರ್ಯಕರ್ತ ಚನ್ನಪ್ಪ ತೆಗ್ಗಿನಮನಿ, ಶಾಂತ, ಮಮತ, ಅಂಬಮ್ಮ ಸುನಾಂದ, ಶೋಭ, ಯಮನಮ್ಮ, ಶೇಲಜಾ, ನಾಗಮ್ಮ, ಗಂಗಮ್ಮ, ಲಲಿತ ಬಸಮ್ಮ, ದೇವಮ್ಮ ಮುಂತದವರು ಭಾಗವಹಿಸಿದ್ದರು.

 

ಬಸಲಿಂಗಪ್ಪ

ದಿ ನ್ಯೂಸ್ 24 ಕನ್ನಡ, ಲಿಂಗಸೂಗುರು

Share Post

Leave a Reply

Your email address will not be published. Required fields are marked *

error: Content is protected !!