ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಧನ ವಿತರಣೆ..!

ಲಿಂಗಸುಗೂರು: ಕೋವಿಡ್-19 ಲಾಕ್‍ ಡೌನ್ ಸಂದರ್ಭದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸ್ಥಳೀಯ ಓಂಕಾಮಧೇನು ಪತ್ತಿನ ಸೌಹಾರ್ದ ಸಹಕಾರಿ ವತಿಯಿಂದ ಪರಿಹಾರ ಧನದ ಚೆಕ್ ವಿತರಣೆ ಮಾಡಲಾಯಿತು.

ಸಹಕಾರಿ ಕಚೇರಿಯಲ್ಲಿ ಸೋಮವಾರ ಆಯ್ದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಚೆಕ್ ವಿತರಿಸಿದ ಸಹಕಾರಿ ಅದ್ಯಕ್ಷ ಪ್ರಮೋದ ಕುಲಕರ್ಣಿ, ಕುಟುಂಬದ ಸ್ವಾಸ್ಥ್ಯವನ್ನೂ ಲೆಕ್ಕಿಸದೇ ಸಮಾಜಕ್ಕೆ ಹಗಲಿರುಳೂ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಅವಿಸ್ಮರಣೀಯ.

ಕಡಿಮೆ ಸಂಬಳದಲ್ಲಿ ಸಂಸಾರವನ್ನು ನಡೆಸಿಕೊಂಡು ಸಮಾಜಕ್ಕಾಗಿ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದ್ದು, ಅವರಿಗೆ ನಮ್ಮಿಂದ ಅಳಿಲು ಸೇವೆಯನ್ನು ಸಲ್ಲಿಸುವ ಮೂಲಕ ಅವರ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆಂದು ಹೇಳಿದರು. ಸಹಕಾರಿ ಇಲಾಖೆ ತಾಲೂಕು ಅಧಿಕಾರಿ ಶೇಖ್ ಹುಸೇನ್, ಸಹಕಾರಿಯ ವ್ಯವಸ್ಥಾಪಕರು, ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಇದ್ದರು.

 

ಬಸಲಿಂಗಪ್ಪ

ದಿ ನ್ಯೂಸ್ 24 ಕನ್ನಡ, ಲಿಂಗಸುಗೂರು

Share Post

Leave a Reply

Your email address will not be published. Required fields are marked *

error: Content is protected !!