ಇಲ್ಲಿದೆ ವಿವಿಧ ರಾಜ್ಯಗಳ ‘ಕೊರೊನಾ’ ಸೋಂಕಿತರ ಪಟ್ಟಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಭಾರತದಲ್ಲಿ ಅಬ್ಬರಿಸುತ್ತಿದ್ದು, ಈವರೆಗೆ 16,796 ಮಂದಿ ಮೃತಪಟ್ಟಿದ್ದಾರೆ. ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈಗ ಒಟ್ಟು ಸೋಂಕಿತರ ಸಂಖ್ಯೆ 5,62,198 ಕ್ಕೆ ತಲುಪಿದೆ.

ಸೋಂಕು ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕೆಲ ರಾಜ್ಯಗಳ ವಿವರ ಇಂತಿದೆ. ಮಹಾರಾಷ್ಟ್ರದಲ್ಲಿ 1,69,883 ಮಂದಿ ಸೋಂಕು ಪೀಡಿತರಿದ್ದು, ಈವರೆಗೆ 7,610 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 83,077 ಮಂದಿ ಸೋಂಕು ಪೀಡಿತರಿದ್ದು, 2,623 ಮಂದಿ ಮೃತಪಟ್ಟಿದ್ದಾರೆ.

ತಮಿಳುನಾಡಿನಲ್ಲಿ 86,224 ಮಂದಿ ಸೋಂಕಿತರಿದ್ದು, 1,141 ಮಂದಿ ಮೃತಪಟ್ಟಿದ್ದಾರೆ. ಗುಜರಾತ್ ನಲ್ಲಿ 32,023 ಮಂದಿ ಸೋಂಕಿತರಿದ್ದು, ಈವರೆಗೆ 1,828 ಮಂದಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ 22,147 ಮಂದಿ ಸೋಂಕಿತರಿದ್ದು, 660 ಮಂದಿ ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,907 ತಲುಪಿದ್ದು, 653 ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 17,392 ಆಗಿದ್ದು 402 ಮಂದಿ ಮೃತಪಟ್ಟಿದ್ದಾರೆ. ಹರಿಯಾಣದಲ್ಲಿ ಸೋಂಕಿತರ ಸಂಖ್ಯೆ 13,952 ಆಗಿದ್ದರೆ ಮೃತಪಟ್ಟವರ ಸಂಖ್ಯೆ 223. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 14,295 ತಲುಪಿದ್ದು, ಈವರೆಗೆ 226 ಮಂದಿ ಮೃತಪಟ್ಟಿದ್ದಾರೆ.

 

Share Post

Leave a Reply

Your email address will not be published. Required fields are marked *

error: Content is protected !!