ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ 1.75 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ :ನರೇಂದ್ರ ಮೋದಿ

ಕೊರೋನಾ ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಬಡ ಜನರ ಪರವಾಗಿ ನಿಂತಿದೆ, ಬಡವರ ಜನ್‌ ಧನ್ ಹಾಗೂ ರೈತರ ಬ್ಯಾಂ‌ಕ್‌ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಅಲ್ಲದೆ, ಕಳೆದ ಮೂರು ತಿಂಗಳಿನಿಂದ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದ್ದು, ನವೆಂಬರ್‌ ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳ ವಿತರಣೆ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅಕ್ಕಿ ಜೊತೆಗೆ ಬೇಳೆಕಾಳುಗಳನ್ನೂ ನೀಡಲಾಗಿದೆ, ಅಲ್ಲದೆ, ಗರೀಬಿ ಕಲ್ಯಾಣ್ ಯೋಜನೆ ಮೂಲಕ ಉಚಿತ ಪಡಿತರ ನೀಡುವ ಯೋಜನೆಯನ್ನು ಮುಂದಿನ ನವೆಂಬರ್‌ ವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಸಹ ಬಡಜನ ಆಹಾರಕ್ಕಾಗಿ ಪರಿತಪಿಸುವ ಸ್ಥಿತಿ ಉದ್ಭವಿಸುವುದಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ.

ಇದೇ ವೇಳೆ ಲಾಕ್​ ಡೌನ್​ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಮತ್ತೆ ಲಾಕ್​ ಡೌನ್​ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ತಿಳಿಸಿದರು, ನಾವೆಲ್ಲರೂ ಲಾಕ್ ​ಡೌನ್​ ನಿಯಮ ಪಾಲಿಸಿದ್ದೇವೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್​ ಬಳಸಿದ್ದೇವೆ, ಆದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗ್ರತೆ ತುಂಬಾ ಅವಶ್ಯಕವಾಗಿದೆ, ಕಂಟೈನ್ಮೆಂಟ್​ ಝೋನ್​ಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ಎಂದು ಕರೆ ನೀಡಿದರು.

 

ದಿ ನ್ಯೂಸ್ 24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!