ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲೆ ಎತ್ತಿದ ಲಂಚಾವತಾರ..!

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ ಸಂಪೂರ್ಣ ಲಂಚಾವತಾರದ ಕೇಂದ್ರವಾಗಿ ಪರಿಣಮಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೆರಿಗೆ ಮಾಡಲು ಹಣ ಪಡೆಯಲಾಗುತ್ತಿರುವ ವಿಷಯ ತಿಳಿದರೂ ಕೂಡ ಅಧಿಕಾರಿಗಳ ಜಾಣ ಮೌನವಯಿಸಿರುವುದರಿ0ದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ.

ಹಣ ಕೊಡದೆ ಇದ್ದರೆ ಹೆರಿಗೆ ಮಾಡದೆ ಬೇರೆ ಆಸ್ಪತ್ರೆಗಳಿಗೆ ರವಾನಿಸುವದು ಮತ್ತು ಉತ್ತಮ ಚಿಕಿತ್ಸೆಯ ಭರವಸೆ ನೀಡಿ ಖಾಸಗಿ ಆಸ್ಪತ್ರೆಗೆ ಕಳಿಸಲಾಗುತ್ತಿದೆ ಸಾಮಾನ್ಯ ಹೆರಿಗೆ ಮಾಡಿದರೆ ಮೂರು ಸಾವಿರ ಮತ್ತು ಸೀಜರ್ ಮಾಡಿದರೆ ಏಳು ಸಾವಿರದಷ್ಟು ಹಣ ಪಡೆಯುತ್ತಿದ್ದಾರೆ ಎಂದು ವಿಜಯ ಸೇನೆ ಸಂಘಟನೆಯ ಅಧ್ಯಕ್ಷ ಚಿದಾನಂದ ಶೇಗುಣಶಿ ಗಂಭಿರ ಆರೋಪ ಮಾಡಿದ್ದಾರೆ

ನೂರು ಹಾಸಿಗೆಯ ಮೇಲ್ದರ್ಜೆಗೆ ಏರಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯವೂ ಹತ್ತಾರು ಹೆರಿಗೆ ಆಗುತ್ತಿದ್ದು ಲಂಚಾವತಾರದ  ಬಗ್ಗೆ ತಾಲೂಕು ವೈದ್ಯಾಧಿಕಾರಿ ಆಗಲಿ ಆಸ್ಪತ್ರೆ ವೈದ್ಯಾಧಿಕಾರಿ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹಣ ಪಡೆದಿರುವ ಬಗ್ಗೆ ವಿಚಾರಿಸಿ ಅಂತವರ ಮೇಲೆ ಕ್ರಮ ಜರುಗಿಸಲು ಸುಚಿಸುತ್ತೆನೆ ಎಂದಿದ್ದಾರೆ.

ಒಟ್ಟಾರೆಯಾಗಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಬಡ ರೋಗಿಗಳ ಜೇಬಿಗೆ ಕತ್ತರಿ ಬಿಳದಿರುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ದಿ ನ್ಯೂಸ್ ೨೪ ಕನ್ನಡದ ಆಶಯ.

 

ವಿಲಾಸ ಕಾಂಬಳೆ

ದಿ ನ್ಯೂಸ್ ೨೪ ಕನ್ನಡ, ಅಥಣಿ

Share Post

Leave a Reply

Your email address will not be published. Required fields are marked *

error: Content is protected !!