ಬೆಂಗಳೂರಿನಂತಹಾ ಹೈಟೆಕ್ ಸಿಟಿಯಲ್ಲಿ ಆಂಬ್ಯುಲೆನ್ಸ್ ಸಿಕ್ತಿಲ್ಲ ಅಂದ್ರೆ ನಂಬೋಕ್ಕಾಗುತ್ತಾ.?

ಬೆಂಗಳೂರಿನಂತಹಾ ಹೈಟೆಕ್ ಸಿಟಿಯಲ್ಲಿ ಆಂಬ್ಯುಲೆನ್ಸ್ ಸಿಕ್ತಿಲ್ಲ ಅಂದ್ರೆ ನಂಬೋಕ್ಕಾಗುತ್ತಾ,? ಬೇರೆ ದಾರಿಯಿಲ್ಲ, ನಂಬಲೇಬೇಕಾದ ಪರಿಸ್ಥಿತಿ ಬಂದೊದಗಿಬಿಟ್ಟಿದೆ. ರಾಜ್ಯದ ಜನರಿಗೆ ಅನುಕೂಲವಾಗಲೆಂದೇ ಸರ್ಕಾರ 108 ಆಂಬ್ಯುಲೆನ್ಸ್ ಸೇವೆಯನ್ನ ಪ್ರಾರಂಭಿಸಿ ಬಹಳ ವರ್ಷಗಳೇ ಕಳೆದಿವೆ. ಅದ್ರಲ್ಲೂ ಕೊರೊನಾದಂತಹ ಸಂಕಷ್ಟದ ಸಮಯದಲ್ಲಂತೂ ಆಂಬ್ಯುಲೆನ್ಸ್ ಅತ್ಯವಶ್ಯಕತೆ ಬೇಕೆ ಬೇಕು. ಸಾಮಾನ್ಯ ಜನರನ್ನ ಬಿಡಿ ಸ್ವತಃ ಪೊಲೀಸರೇ ಕರೆ ಮಾಡಿದ್ರೂ ಆಂಬ್ಯೂಲೆನ್ಸ್ ಸಿಕ್ತಿಲ್ಲ.

ಬೆಂಗಳೂರು ಫ್ಲೈ ಓವರ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಜ್ವರದಿಂದ ಬಳಲಿ ಮುಂಜಾನೆಯೇ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾನೆ. ಆ ವ್ಯಕ್ತಿಗೆ ಜ್ವರ ಇರುವುದರಿಂದ ಯಾರೊಬ್ಬರೂ ಹತ್ತಿರಕ್ಕೆ ಕೂಡ ಸುಳಿದಿಲ್ಲ. ಆತನನ್ನ ಆಸ್ಪತ್ರೆಗೆ ಸೇರಿಸುವ ಸಲುವಾಗಿ ಮುಂಜಾನೆಯಿಂದ ಆಂಬ್ಯುಲೆನ್ಸ್ ಗೆ  ಎಷ್ಟೇ ಸಲ ಕರೆ ಮಾಡಿದ್ರೂ ಕೂಡ ಒಂದು ಆಂಬ್ಯುಲೆನ್ಸ್ ಬಂದಿಲ್ಲ. ವಿಚಾರ ತಿಳಿದು ಸ್ಥಳಕ್ಕೆ ಬಂದ ಪೀಣ್ಯಾ ಪೊಲೀಸ್ರು ರಸ್ತೆಯಲ್ಲಿ ಬಿದ್ದಿರುವ ವ್ಯಕ್ತಿಗೆ ಅಡ್ಡಲಾಗಿ ಹೊಯ್ಸಳ ಪೊಲೀಸ್ ಕಾರನ್ನ ನಿಲ್ಲಿಸಿ ಆ ವ್ಯಕ್ತಿಗೆ ರಕ್ಷಣೆ ನೀಡಿ ಆಂಬ್ಯುಲೆನ್ಸ್ ಕರೆಸೋದಕ್ಕೆ ಹರಸಾಹಸ ಪಟ್ಟಿದ್ದಾರೆ.

 

ದಿ ನ್ಯೂಸ್ 24 ಕನ್ನಡ, ಬೆಂಗಳೂರು

Share Post

Leave a Reply

error: Content is protected !!