ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ರವರ ಕಛೇರಿ ಬಂದ್! ಸಾರ್ವಜನಿಕರ ಭೇಟಿಗೆ ತಾತ್ಕಾಲಿಕ ನಿರ್ಬಂಧ

ಯಲಹಂಕ : ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್‌.ಆರ್.ವಿಶ್ವನಾಥ್ ರವರ ಸಿಂಗನಾಯಕನಹಳ್ಳಿಯ ಗೃಹ ಕಚೇರಿ ಹಾಗೂ ಯಲಹಂಕ ಉಪನಗರದ ಬಿಜೆಪಿ ಕಚೇರಿಯನ್ನು ಬಂದ್ ಮಾಡಲಾಗಿದೆ ಹಾಗೂ ಸಾರ್ವಜನಿಕರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಕರೋನ ವೈರಸ್ (ಕೋವಿಡ್ – 19) ಸಮುದಾಯದ ಮಟ್ಟದಲ್ಲಿ ಹರಡಲಾರಂಭಿಸಿದೆ, ಆದ್ದರಿಂದಾಗಿ ಗೃಹ ಕಛೇರಿ ಹಾಗೂ ಯಲಹಂಕ ಉಪನಗರದ ಪಕ್ಷದ ಕಛೇರಿಯನ್ನು ಬಂದ್ ಮಾಡಲಾಗಿದೆ. ಆದ ಕಾರಣ ಸಾರ್ವಜನಿಕರು, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕಚೇರಿಗೆ ಭೇಟಿ ನೀಡದೆ ಸಹಕರಿಸಬೇಕೆಂದು ಶಾಸಕರ ಕಛೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ

Share Post

Leave a Reply

Your email address will not be published. Required fields are marked *

error: Content is protected !!