ರಾಜ್ಯದಲ್ಲಿ ಒಂದೇ ದಿನ 918 ಕೇಸ್ ಪತ್ತೆ, ಬೆಂಗಳೂರಿನಲ್ಲಿ 596 ಸೋಂಕು

ಬೆಂಗಳೂರು, ಜೂನ್ 27: ಕರ್ನಾಟಕದಲ್ಲಿ ಇಂದು ಒಂದೇ ದಿನ 918 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,923ಕ್ಕೆ ಏರಿಕೆಯಾಗಿದೆ.

ಈ ಪೈಕಿ ಬೆಂಗಳೂರು ನಗರದಲ್ಲಿ ಒಂದೇ ಕಡೆ 596 ಜನರಿಗೆ ಕೊವಿಡ್ ಸೋಂಕು ದೃಢವಾಗಿದೆ. ಇಲ್ಲಿವರೆಗೂ ಸಿಲಿಕಾನ್ ಸಿಟಿಯಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ಇದೇ ಹೆಚ್ಚು.

ಕಳೆದ 24 ಗಂಟೆಯಲ್ಲಿ 11 ಜನರು ಮೃತರಾಪಟ್ಟಿದ್ದಾರೆ. ಈವರೆಗೂ ಒಟ್ಟು 191 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4441ಕ್ಕೆ ಏರಿಕೆಯಾಗಿದೆ.

ಇಂದು 371 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 7287 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

ಇಂದಿನ ವರದಿಯಲ್ಲಿ ಜಿಲ್ಲೆವಾರು ನೋಡುವುದಾರೇ ಬೆಂಗಳೂರಿನಲ್ಲಿ 596 ಕೇಸ್, ದಕ್ಷಿಣ ಕನ್ನಡದಲ್ಲಿ 49 ಕೇಸ್, ಕಲಬುರಗಿಯಲ್ಲಿ 33 ಕೇಸ್, ಬಳ್ಳಾರಿ ಹಾಗೂ ಗದಗದಲ್ಲಿ ತಲಾ 24 ಕೇಸ್, ಧಾರವಾಡದಲ್ಲಿ 19 ಕೇಸ್, ಬೀದರ್‌ನಲ್ಲಿ 17 ಪ್ರಕರಣ, ಉಡುಪಿ, ಕೋಲಾರ ಹಾಗೂ ಹಾಸನದಲ್ಲಿ ತಲಾ 14 ಕೇಸ್, ಯಾದಗಿರಿ, ಶಿವಮೊಗ್ಗ, ತುಮಕೂರು, ಚಾಮರಾಜನಗರ, ತಲಾ 13 ಪ್ರಕರಣ, ಮೈಸೂರು ಮತ್ತು ಮಂಡ್ಯದಲ್ಲಿ ತಲಾ 12 ಕೇಸ್ ಒಳಗೊಂಡಿದೆ.

 

Share Post

Leave a Reply

Your email address will not be published. Required fields are marked *

error: Content is protected !!