ಥಿಯೇಟರ್ ಅಂಗಳದಲ್ಲಿ ಯುವಸಾಮ್ರಾಟ್ ಚಿಂಜೀವಿ ಸರ್ಜಾ ಇನ್ನು ಜೀವಂತ.

ಬೆಂಗಳೂರು :ಕೊರೊನಾ ಸಮಸ್ಯೆಯಿಂದ ಇಡೀ ಸ್ಯಾಂಡಲ್​ವುಡ್​ ಸ್ತಬ್ದವಾಗಿತ್ತು, ಇದೀಗ ಹಂತಹಂತವಾಗಿ ಚಿತ್ರರಂಗದ ಚಟುವಟಿಗಳು ಆರಂಭವಾಗಿವೆ, ಆದರೆ, ಥಿಯೇಟರ್​ ಗಳ ಬಾಗಿಲು ಮಾತ್ರ ಇನ್ನು ತೆರೆದಿಲ್ಲ, ಥಿಯೇಟರ್​ ಗಳಿಗೆ ಬೀಗ ಹಾಕಿ ಸರಿಯಾಗಿ ನೂರು ದಿನಗಳೇ ಆಗಿವೆ, ಆದ್ರೂ ಥಿಯೇಟರ್​ ಅಂಗಳದಲ್ಲಿ ಯುವಸಾಮ್ರಾಟ್ ಚಿಂಜೀವಿ ಸರ್ಜಾ ಇನ್ನು ಜೀವಂತ.

ಮಾರ್ಚ್​ 12 ರಂದು ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿತ್ತು, ಒಳ್ಳೆ ರೆಸ್ಪಾನ್ಸ್​ನೊಂದಿಗೆ ಭರ್ಜರಿ ಓಪನಿಂಗ್​ ಕೂಡ ಪಡೆದುಕೊಳ್ತು, ಆದರೆ, ಸಿನಿಮಾ ರಿಲೀಸ್​ ಆಗಿ ಎರಡೇ ದಿನಕ್ಕೆ ಚಿತ್ರಮಂದಿರಗಳು ಬಂದ್ ಆಗಿತ್ತು, ಆದರೆ, ಅಂದಿನಿಂದ ಇಂದಿನವರೆಗೂ ಮೇನ್​ ಥಿಯೇಟರ್ ಸಂತೋಷ್​ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಚಿರಂಜೀವಿ ಸರ್ಜಾ ಕಟೌಟ್​ ಮತ್ತು ಬ್ಯಾನರ್​ಗಳು ರಾರಾಜಿಸ್ತಲೇ ಇವೆ.

ಕೊರೊನಾ ಸೋಂಕು ಹತೋಟಿಗೆ ಬಂದು ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ರೆ, ಮೊದಲ ಆದ್ಯತೆ ಶಿವಾರ್ಜುನ ಚಿತ್ರಕ್ಕೆ ಸಿಗಲಿದೆ. ಈ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಲಾಕ್​ಡೌನ್​ ಸಮಯದಲ್ಲಿ ಪ್ರದರ್ಶನ ಕಾಣುತ್ತಿದ್ದ ಸಿನಿಮಾಗಳನ್ನ ಮುಂದುವರೆಸಬೇಕು ಅನ್ನೋ ಚರ್ಚೆ ನಡೆದಿದೆ. ಚಿರಂಜಿವಿ ಸರ್ಜಾ ದೈಹಿಕವಾಗಿ ನಮ್ಮೊಂದಿಗಿಲ್ಲವಾದ್ರೂ ಅವರ ಸಿನಿಮಾಗಳ ಮೂಲಕ ಅವ್ರ ನೆನಪು ಅಜರಾಮರ ಅನ್ನೋದಕ್ಕೆ ಇದು ಕೂಡ ಸಾಕ್ಷಿಯಾಗಿದೆ.

 

ದಿ ನ್ಯೂಸ್ 24 ಕನ್ನಡ, ಬೆಂಗಳೂರು

Share Post

Leave a Reply

error: Content is protected !!