ಪೆಟ್ರೋಲ್, ಡಿಸೇಲ್ ನಿರಂತರ ದರ ಏರಿಕೆ; ಕಾಂಗ್ರೆಸ್‌ ಕಾರ್ಯಕರ್ತರಿಂದ ಬೈಕ್‌ ಶವಯಾತ್ರೆ ನಡೆಸಿ ಪ್ರತಿಭಟನೆ

ಬೆಂಗಳೂರು (ಜೂನ್ 27); ಕಳೆದ 21 ದಿನಗಳಿಂದ ಪೆಟ್ರೋಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇದನ್ನು ಖಂಡಿಸಿರುವ NSUI ಇಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಶವದಂತೆ ಬೈಕ್ ಹೊತ್ತು ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಿದೆ.

NSUI ರಾಜ್ಯಾಧ್ಯಕ್ಷ ಮಂಜುನಾಥ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಶವದಂತೆ ಬೈಕ್ ಹೊತ್ತು ಮೆರವಣಿಗೆ ಮಾಡಲಾಯಿತು. ನಂತರ ಆ ಬೈಕ್ ಗೆ ಶವದಂತೆ ಸಂಸ್ಕಾರ ಮಾಡಿ ಕೊನೆಗೆ ಬೆಂಕಿ ಹಚ್ಚಿ ಬೈಕನ್ನು ಸುಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ.

‌ ಬಳಿಕ ಮಾತನಾಡಿರುವ ಮಂಜುನಾಥ್, “ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡುತ್ತಿದೆ. ಮೊದಲೇ ಕೊರೋನಾ ದಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಏರಿಕೆ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡುತ್ತಿದೆ” ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಕಳೆದ 21 ದಿನಗಳಿಂದ ಪೆಟ್ರೋಲ್ ಬೆಲೆಯನ್ನು ಸತತವಾಗಿ ಎರಿಸುತ್ತಲೇ ಇದೆ. ಇಂದೂ ಸಹ ಪೆಟ್ರೋಲ್‌ ಗೆ 25 ಪೈಸೆ ಮತ್ತು ಡೀಸೆಲ್‌ಗೆ 21 ಪೈಸೆಯನ್ನು ಏರಿಸಲಾಗಿದೆ. ಅಲ್ಲದೆ, ಕಳೆದ 21 ದಿನಗಳಲ್ಲಿ 1 ಲೀಟರ್‌ ಪೆಟ್ರೋಲ್ ಗೆ 9.12ರೂ. ಹಾಗೂ ಡೀಸೆಲ್‌ಗೆ 11.01 ರೂ. ಏರಿಕೆ ಮಾಡಲಾಗಿದೆ.

ಪರಿಣಾಮ ಭಾರತದ ತೈಲೋದ್ಯಮ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 80 ರಿಂದ 90ರ ಗಡಿಗೆ ಬಂದು ನಿಂತಿದೆ. ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ಅತ್ಯಂತ ಪಾತಾಳಕ್ಕೆ ಕುಸಿದಿರುವ ಸಮಯದಲ್ಲೂ ಸಹ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಏರಿಸುತ್ತಿರುವುದು ಸಾಮಾನ್ಯವಾಗಿ ಜನರ ಆಕ್ರೋಶ ಕಾರಣವಾಗಿದೆ.

 

Share Post

Leave a Reply

Your email address will not be published. Required fields are marked *

error: Content is protected !!