Sunday, June 13, 2021
Homeಜಿಲ್ಲೆಮದುವೆಗೆ ಐವತ್ತು ಜನ ಮಾತ್ರ, ಹೆಚ್ಚು ಜನ ಸೇರುವಂತಿಲ್ಲ: ಕ್ಯಾಪ್ಟನ್ ಡಾ. ರಾಜೇಂದ್ರ

ಇದೀಗ ಬಂದ ಸುದ್ದಿ

ಮದುವೆಗೆ ಐವತ್ತು ಜನ ಮಾತ್ರ, ಹೆಚ್ಚು ಜನ ಸೇರುವಂತಿಲ್ಲ: ಕ್ಯಾಪ್ಟನ್ ಡಾ. ರಾಜೇಂದ್ರ

ಬಾಗಲಕೋಟೆ: ಕ್ವಾರಂಟೈನಲ್ಲಿ ಇದ್ದು ಮತ್ತೊಬ್ಬರಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದು ಒಂದು ದೇಶಸೇವೆ ಮಸ್ಕ್ , ಸಾಮಾಜಿಕ ಅಂತರ ಸ್ಯಾನಿಟೈಸರ್ ಕಡ್ಡಾಯ, ಮದುವೆಗೆ ಐವತ್ತು ಜನ ಮಾತ್ರ ಹೆಚ್ಚು ಜನ ಸೇರುವಂತಿಲ್ಲ ಎಂದ ಶಿಸ್ತಿನ ಕ್ರಮ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ರಾಜೇಂದ್ರ.

ಮಹಾಮಾರಿ ಕೊರೊನಾ ಈ ದೇಶದ ಜನರ ನಿದ್ದೆಗೆಡಿಸಿದೆ ಆದರೆ ಕೊರೋನಕ್ಕೆ ಭಯಪಡುವ ಅಗತ್ಯವಿಲ್ಲ ಸಾಮಾಜಿಕ ಅಂತರ ಮತ್ತು ಮಾಸ್ಕ್ ಸ್ಯಾನಿಟೈಸರ್  ಕಡ್ಡಾಯವಾಗಿ ಸಾರ್ವಜನಿಕರು ಬಳಸಬೇಕು. ಬಾಗಲಕೋಟ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಆಗಿ ಉತ್ತಮ ಕೆಲಸ ಮಾಡಿದ್ದೀರಿ ನಿಮಗೆ ಹೃದಯಪೂರ್ವಕ ಅಭಿನಂದನೆ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಿದರಿ ಸಮುದಾಯ ಭವನದಲ್ಲಿ ರಬಕವಿ ಬನಹಟ್ಟಿ ತಾಲೂಕು ಆಡಳಿತ ಏರ್ಪಡಿಸಿದ್ದ ಕೊರೊನಾ ಕೋವಿಡ್ 19 ಕುರಿತು ಆಶಾ ಕಾರ್ಯಕರ್ತರು ಗ್ರಾಮ ಸೇವಕರು ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.

ಕರ್ನಾಟಕ ರಾಜ್ಯದಲ್ಲಿ ಬೇರೆ ಜಿಲ್ಲೆಗೆ ಹೋಲಿಸಿದರೆ ಕೊರೊನಾ ನಿಯಂತ್ರಣ ಮಾಡುವಲ್ಲಿ ಬಾಗಲಕೋಟೆ ಜಿಲ್ಲೆ ಉತ್ತಮ ಕೆಲಸ ಮಾಡಿದೆ. ಕಾಸರಗೋಡುದಲ್ಲಿ ಕೊರೊನಾ ರಣಕೇಕೆ ಹಾಕಿದಂತಹ ಸಂದರ್ಭದಲ್ಲಿ ಅಲ್ಲಿರುವ ಸುಮಾರು ಜನರು ಬಾಗಲಕೋಟೆ ಜಿಲ್ಲೆ ಆಗಮಿಸಿದರು ಅಂಥ ಸಮಯದಲ್ಲಿ ಗುಳೇದಗುಡ್ಡ ಮತ್ತು ಇಲಕಲಕ್ಕೆ ಬಂದ ಜನರನ್ನು ಕ್ವಾರಂಟೈ  ಮಾಡಿದ್ದು ನಮ್ಮ ಜಿಲ್ಲೆ ಅದೃಷ್ಟವಶ ಯಾರಿಗೂ ಕೊರೊನಾ ಪಾಸಿಟಿವ್ ಬರಲಿಲ್ಲಾ ಎಂದರು.

ಮದುವೆ ಸಮಾರಂಭದಲ್ಲಿ ಕೇವಲ ಐವತ್ತು ಜನ ಮಾತ್ರ ಇರಬೇಕು ಒಂದು ವೇಳೆ ಐವತ್ತಕ್ಕಿಂತ ಹೆಚ್ಚು ಜನರು ಆ ಮದುವೆಯಲ್ಲಿ ಪಾಲ್ಗೊಂಡಿದ್ದರೆ ತಕ್ಷಣವೇ ಅಲ್ಲಿಗೆ ಹೋಗಿ ಮದುವೆ ನಿಲ್ಲಿಸಿ ಮದುವೆಗೆ ನಾವು ಕೇವಲ ಐವತ್ತು ಜನರಿಗೆ ಸೇರಿಸಲು ನಿಮಗೆ ಅನುಮತಿಯನ್ನು ನೀಡಿದ್ದೇವೆ ಹೊರತು ಇಷ್ಟೆಲ್ಲ ಜನರನ್ನ ಸೇರಿಸಲಿಕ್ಕೆ ಅಲ್ಲಾ. ಸರ್ಕಾರದ  ಆದೇಶವನ್ನು ಉಲ್ಲಂಘಿಸಿದರೆ ಅಂತವರ ಮೇಲೆ ಮುಲಾಜಿಲ್ಲದೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೆಂದು ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ ಡಾ ರಾಜೇಂದ್ರ ಹೇಳಿದರು.

ಹಿಂದೆ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದೀರಿ. ತಜ್ಞರು ಹೇಳುವ ಪ್ರಕಾರ ಕೊರೊನಾ ಸೋಂಕು ಸಂಖ್ಯೆ ಹೆಚ್ಚಾಗಬಹುದು ಇನ್ನೂ ಎರಡು ತಿಂಗಳು ಗ್ರಾಮ ಮಟ್ಟದಲ್ಲಿ ಮತ್ತು ನಗರ ಮಟ್ಟದಲ್ಲಿ ಎಲ್ಲರೂ ಸಂಘಟಿತರಾಗಿ  ಕೊರೊನಾ ಸೋಂಕು ಹರಡದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿದೆ ಎಂದರು.

ಕೊರೋನಾ ಪಾಸಿಟಿವ್ ಬಂದ ಏರಿಯಾದಲ್ಲಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿ ಅಲ್ಲಿರುವ ಜನರು ಮತ್ತು ಹೊರಗಿನ ಜನರು ಎಲ್ಲೂ ಹೋಗದ ಹಾಗೆ ಮತ್ತು ಬರದ ಹಾಗೆ ನೋಡಿಕೊಳ್ಳಬೇಕು. ಹೋಮ್ ಕ್ವಾರಂಟೈನ್ ಮತ್ತು ಕ್ವಾರಂಟೈನಲ್ಲಿ ನಲ್ಲಿರುವ ಜನರ ಮೇಲೆ ನಿಗಾ ಇಡಿ ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣುತಪ್ಪಿಸಿ ಅಡ್ಡಾಡಿದರೆ ಅಂತವರ ಮೇಲೆ  ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸೋಂಕು ಹರಡದ ಹಾಗೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಮತ್ತು ಬೇರೆ ರಾಜ್ಯಗಳಿಂದ ಬಂದಂತಹ ವ್ಯಕ್ತಿಗಳು ಕ್ವಾರಂಟೈನಲ್ಲಿ ಇರತಕ್ಕದ್ದು ನೀವು ಅಲ್ಲಿ ಇದ್ದು ಮತ್ತೊಬ್ಬರಿಗೆ ಸೋಂಕು ಹತ್ತದಂತೆ ನೋಡಿಕೊಳ್ಳುವುದು ಒಂದು ದೇಶಸೇವೆ ಎಂದರು.

ನಿಮ್ಮ ನಿಮ್ಮ ಗ್ರಾಮಗಳಲ್ಲಿ ಯಾರಾದ್ರೂ ಸಹಜ ಸಾವನ್ನಪ್ಪಿದ್ದಾರೆ ಅಂಥವರ ಅಂತ್ಯಕ್ರಿಯೆಯಲ್ಲಿ ಕೇವಲ ಇಪ್ಪತ್ತು ಜನ ಮಾತ್ರ ಇರಬೇಕು ಮತ್ತು ತಾಲೂಕು ಆಡಳಿತಕ್ಕೆ ಮಾಹಿತಿ ಸಲ್ಲಿಸತಕ್ಕದ್ದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಯಾರು ಹಾಕುವುದಿಲ್ಲವೇ ಅವರಿಗೆ ಎರಡು ನೂರು ರೂಪಾಯಿ ದಂಡ ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಮಖಂಡಿ ಅಸಿಸ್ಟೆಂಟ್ ಕಮಿಷನರ್ ಡಾ. ಸಿದ್ದು ಹುಲ್ಲೋಳಿ ಮಾತನಾಡಿ 30 ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ನಮ್ಮ ಬಾಗಲಕೋಟ ಜಿಲ್ಲೆ 27 ಸ್ಥಾನ ಪಡೆದುಕೊಂಡಿದೆ ಅಷ್ಟು ಅಚ್ಚುಕಟ್ಟಾಗಿ ಕೊರೊನಾ  ವಾರಿಯರ್ಸ್ ಆಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಬೇರೆ ರಾಜ್ಯ ಮತ್ತು ವಿದೇಶದಿಂದ ಬಂದವರನ್ನ ಕ್ವಾರಂಟೈನ ಮಾಡಬೇಕು ಮತ್ತು ಬೇರೆ ರಾಜ್ಯಕ್ಕೆ ಹೋಗಬೇಕಾದರೆ ಈ ಸಿಂಧುತ್ವ ಅಡಿಯಲ್ಲಿ ಅರ್ಜಿಹಾಕಿ ಕಡ್ಡಾಯವಾಗಿ  ಜಿಲ್ಲಾಧಿಕಾರಿ ಕಡೆಯಿಂದ ಪಾಸ್ ಪಡೆದಿರಬೇಕು ಅಂತವರನ್ನು ನಮ್ಮ ಆಶಾ ಕಾರ್ಯಕರ್ತರು ಪತ್ತೆ ಹಚ್ಚುವ ಕೆಲಸ ಮಾಡಬೇಕೆಂದರು.

ಇದೇ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಆರೋಗ್ಯಧಿಕಾರಿ ಅನಂತ ದೇಸಾಯಿ, ಜಮಖಂಡಿ ಡಿವೈಎಸ್ಪಿ ಆರ್ ಕೆ ಪಾಟೀಲ, ಬನಹಟ್ಟಿ ಸಿಪಿಐ ಜೆ  ಕರುಣೇಶಗೌಡ, ಉದಯ ಬಿರಾದಾರ, ರಬಕವಿ ಬನಹಟ್ಟಿ ನಗರಸಭೆ ಪೌರಾಯುಕ್ತರು ಶ್ರೀನಿವಾಸ ಜಾದವ, ಮಾಲಿಂಗಪುರ ಪುರಸಭೆ ಮುಖ್ಯಅಧಿಕಾರಿ ಬಾಬುರಾವ ಕಮತಗಿ, ಜಮಖಂಡಿ ಆರೋಗ್ಯ ಅಧಿಕಾರಿ ಗಲಗಲಿ, ರಬಕವಿ ಬನಹಟ್ಟಿ ತಹಸಿಲ್ದಾರ ಪ್ರಶಾಂತ ಜನಗೊಂಡ, ಗ್ರೇ 2 ತಹಸೀಲ್ದಾರ ಎಸ್ ಬಿ ಕಾಂಬಳೆ,ಕಂದಾಯ ನಿರೀಕ್ಷಕರು ಬಸವರಾಜ ತಾಳಿಕೋಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು  ಆಶಾ ಕಾರ್ಯಕರ್ತರ ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ

ದಿ ನ್ಯೂಸ್ 24 ಕನ್ನಡ, ಬಾಗಲಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img