Friday, August 14, 2020
Home ಜಿಲ್ಲೆ ಬನಹಟ್ಟಿ ಲಕ್ಷ್ಮೀನಗರದಲ್ಲಿ 7 ಕೊರೋನಾ ಪಾಸಿಟಿವ್ ಕೇಸ್ ಪತ್ತೆ

ಇದೀಗ ಬಂದ ಸುದ್ದಿ

ಪ್ರವಾಹ ಸಂತ್ರಸ್ಥರನ್ನು ಕುಡುಕರು ಎಂದ ಶ್ರೀಮಂತ ಪಾಟೀಲ...

ಪ್ರತಿ ಸಲವು ಮಳೆಗಾಲದ ಸಮಯದಲ್ಲಿ ಪ್ರವಾಹ  ಉಂಟಾಗುತ್ತಿದ್ದು ಕೃಷ್ಣಾ ನದಿ ತೀರದ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಥಣಿ ಪಟ್ಟಣದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ...

ರಾಷ್ಟ್ರ ಧ್ವಜದ ತಯಾರಿಕಾ ಘಟಕಕ್ಕೆ ಬಿಸಿ ಮುಟ್ಟಿದ...

ಆಗಸ್ಟ್ 15 ಅಂದ್ರೆ ಇಡೀ ಭಾರತ ದೇಶವೇ ಸಂಭ್ರಮದ ದಿನ ,ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಮೇಲೆ ರಾರಾಜಿಸುವ ನಮ್ಮ ರಾಷ್ಟ್ರ ಧ್ವಜ ಈ ಸಾರಿ ಅಷ್ಟು ಪ್ರಮಾಣದಲ್ಲಿ...

ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ಶೇ.೮೩.೧೧...

ಲಿಂಗಸೂಗೂರು: ತಾಲೂಕಿನ ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ೨೦೧೯-೨೦ನೇ ಸಾಲಿನ ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ.೮೩.೧೧ ರಷ್ಟು ಸಾಧನೆ ಮಾಡಿದೆ. ಕನ್ನಡ ಮಾಧ್ಯಮ ಪ್ರೌ ಢಶಾಲೆಯ ೮೩.೧೧ ರಷ್ಟು ಫಲಿತಾಂಶ...

ಸೈಕಲ್ ನಲ್ಲಿ ಕೊರೊನಾ ಸೋಂಕಿತನ ಶವ ಸಾಗಾಟ

ಕೋವಿಡ್ ಸಂದರ್ಭದಲ್ಲಿ ತುರ್ತು ನೆರವು ನೀಡಲು ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು 1,180 ಹೊಸ ಅತ್ಯಾಧುನಿಕ ಆಯಂಬುಲೆನ್ಸ್‍ಗಳನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಶವನ್ನು ಸೈಕಲ್ ರಿಕ್ಷಾದಲ್ಲಿ...

ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ...

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಡ್ತಿದೆ. ಇದು ಗೊತ್ತಾಗ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ಸಂಜಯ್ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಬನಹಟ್ಟಿ ಲಕ್ಷ್ಮೀನಗರದಲ್ಲಿ 7 ಕೊರೋನಾ ಪಾಸಿಟಿವ್ ಕೇಸ್ ಪತ್ತೆ

ಬಾಗಲಕೋಟೆ: ಬನಹಟ್ಟಿ ಲಕ್ಷ್ಮೀನಗರದಲ್ಲಿ 7 ಕೊರೋನಾ ಪಾಸಿಟಿವ್ ಕೇಸ್ ಪತ್ತೆ ಹಿನ್ನೆಲೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿಲಾಗಿದೆ. ರಬಕವಿ ಬನಹಟ್ಟಿ ತಾಲೂಕಿನ ಜನತೆಯಲ್ಲಿ ಆತಂಕದ ಮನೆಮಾಡಿದೆ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಒಂದೇ ಒಂದು ಕೊರೊನಾ ಕೇಸ್ ಪತ್ತೆ ಆಗಿದ್ದಿಲ್ಲಾ. ಆದರೆ ಮಹಾರಾಷ್ಟ್ರದ ಪುಣಾ ಮತ್ತು ಬಾಂಬೆ ನಗರಗಳಿಂದ ಬಂದಿದ್ದ ವ್ಯಕ್ತಿಗೆ ಹೋಮ್ ಕ್ವಾರಂಟೈನ ಮಾಡಲಾಗಿತ್ತು. ಅದರಲ್ಲಿ  ಒಂದೇ ಕುಟುಂಬದ 7 ಜನರಿಗೆ ಕೊರೊನಾ  ಕೇಸ್ ಪತ್ತೆಯಾಗಿದ್ದೆ.

ಬನಹಟ್ಟಿ  ನಗರದಲ್ಲಿ ಸೊಂಕಿತರ ಸಂಖ್ಯೆ ಬರದೆ ಇರುವದರಿಂದ ನಗರದ ಜನತೆ ನಿರಾಳವಾಗಿದ್ದರು. ಆದರೆ 7 ಜನರಿಗೆ  ಕೊರೋನಾ ಸೊಂಕು ತಗುಲಿದ ವರದಿಯಿಂದಾಗಿ ರಬಕವಿ ಬನಹಟ್ಟಿ ತಾಲೂಕಿನ ಜನತೆಯಲ್ಲಿ ಮತ್ತೆ ಆತಂಕ ಮೂಡಿಸಿದೆ. ನಿಷೇಧಿತ ಪ್ರದೇಶ: ಬನಹಟ್ಟಿಯ ಲಕ್ಷ್ಮೀನಗರದಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದ ಹಿನ್ನಲೆಯಲ್ಲಿ  ಅಧಿಕಾರಿಗಳು ನಿಷೇಧಿತ ಪ್ರದೇಶಗಳನ್ನಾಗಿ ಮಾಡಿ, ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಸೊಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಸಾರ್ವಜನಿಕರು ರಸ್ತೆಯಲ್ಲಿ  ಬರದಂತೆ ಸಂಪೂರ್ಣ ನಿಷೇಧ ಮಾಡಲಾಗಿದೆ, ಬಾಗಲಕೋಟೆ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಅತಿ ಹೆಚ್ಚಾಗಿ ಬೇರೆ ರಾಜ್ಯದಿಂದ ಬಂದವರಿಗೆ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ ಮತ್ತು ಬೇರೆ ರಾಜ್ಯದಿಂದ ಮತ್ತು ಬೇರೆ ಜಿಲ್ಲೆಗಳಿಂದ ಬಂದವರನ್ನು ನಾವು ಕ್ವಾರಂಟೈನ್‌ಲ್ಲಿ ಇಟ್ಟಿದ್ದೇವೆ ಅಂಥವರಿಗೆ ಮಾತ್ರ ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದಿದ್ದಾರೆ.

ಸೀಲ್ ಡೌನ್  ಕಂಟೇನ್ಮೆಂಟ್  ಗಳನ್ನು ಹೊರತುಪಡಿಸಿ ಇನ್ನೆಲ್ಲಕಡೆ ಲಾಕ್ ಡೌನ್ ಸಡಿಲಿಕೆ ನೀಡಿದ್ದೇವೆ, ಅದನ್ನೇ ದುರುಪಯೋಗ ಪಡಿಸಿಕೊಂಡರೆ ಅಂಥವರು ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಇನ್ನೂ ಬೇರೆ ರಾಜ್ಯಗಳಿಂದ ಬಾಗಲಕೋಟೆ ಜಿಲ್ಲೆಗೆ ಸುಮಾರು ಜನ ಬರುವ ನಿರೀಕ್ಷೆ ಇದೆ ಅಂತವರನ್ನು  ಕ್ವಾರಂಟೈನ್‌ಲ್ಲಿ ಇಡುತ್ತೇವೆ ಎಂದಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಬರುವ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಒಂದು ವೇಳೆ ಮಾಸ್ಕ ಹಾಕದೆ ಇದ್ದರೆ  ಅಂತವರಿಗೆ ಎರಡು ನೂರು ರೂಪಾಯಿ ದಂಡವನ್ನು ಹಾಕಲು ನಗರಸಭೆಗೆ ಸೂಚಿಸಿದ್ದೇವೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ಕೆ ರಾಜೇಂದ್ರ ಹೇಳಿದರು.

ಇದೇ ಸಂದರ್ಭದಲ್ಲಿ  ಜಮಖಂಡಿ ಅಸಿಸ್ಟೆಂಟ್ ಕಮಿಷನರ ಡಾ. ಸಿದ್ದು ಹುಲ್ಲೋಳಿ, ಜಮಖಂಡಿಯ ಡಿವೈಎಸ್ಪಿ ಆರ್ ಕೆ ಪಾಟೀಲ, ರಬಕವಿ ಬನಹಟ್ಟಿ ತಹಸೀಲ್ದಾರ ಪ್ರಶಾಂತ ಜನಗೊಂಡ, ಬನಹಟ್ಟಿ ಸಿಪಿಐ ಕರುನೇಶಗೌಡ ಜೆ, ಬನಹಟ್ಟಿ ಪಿಎಸ್ಐ ರವಿಕುಮಾರ ಧರ್ಮಟ್ಟಿ, ಉಪತಹಶೀಲ್ದಾರ್ ಎಸ್ ಬಿ ಕಾಂಬ್ಳೆ, ಕಂದಾಯ ನಿರೀಕ್ಷಕರು ಬಸವರಾಜ ತಾಳಿಕೋಟಿ, ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತರು ಶ್ರೀನಿವಾಸ ಜಾದವ, ಬಾಗಲಕೋಟ ಜಿಲ್ಲಾ ಆರೋಗ್ಯ ಅಧಿಕಾರಿ ಅನಂತ ದೇಸಾಯಿ ಸೇರಿದಂತೆ ಮುಂತಾದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ

ದಿ ನ್ಯೂಸ್ 24 ಕನ್ನಡ, ಬಾಗಲಕೋಟೆ

TRENDING