ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಗೆ ರಾಜ್ಯಸಭಾ ಟಿಕೆಟ್ ಸಿಗಲು ಯಾರು ಕಾರಣ? : ಬಿಜೆಪಿಯೊಳಗೆ ಅಸಲಿಗೆ ನಡೆಯುತ್ತಿರುವ ಆಟ ಏನು?

ಬೆಂಗಳೂರು.ಜೂ 8 : ರಾಜ್ಯ ಬಿಜೆಪಿಯೊಳಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಂತಹ ಕೆಲವೊಂದು ವಿದ್ಯಮಾನಗಳು ಕಂಡು ಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯಸಭಾ ಸ್ಥಾನಕ್ಕಾಗಿ ಕೆಲವರು ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಬಂಡಾಯವೆದ್ದಿದ್ದರು. ಆ ಬಳಿಕ ಅವರ ಒತ್ತಡದಂತೆಯೇ ರಮೇಶ್ ಕತ್ತಿ, ಪ್ರಭಾಕರ ಕೋರೆ ಹಾಗೂ ಪ್ರಕಾಶ್ ಶೆಟ್ಟಿ ಹೆಸರನ್ನು ನೀಡಲಾಗಿತ್ತು. ಆದರೆ ಇಂದು ಬಿಜೆಪಿ ಹೈಕಮಾಂಡ್ ಬೆಳಗಾವಿ ಬಿಜೆಪಿ ನಗರಾಧ್ಯಕ್ಷ ಅಶೋಕ್ ಗಸ್ತಿ ಮತ್ತು ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಕಡಾಡಿ ಅವರಿಗೆ ನೀಡಲಾಗಿದೆ.

ಸದ್ಯ ರಾಜ್ಯ ಬಿಜೆಪಿ ನಿರ್ಧಾರವನ್ನು ಹೈಕಮಾಂಡ್ ಯಾಕೆ ತಿರಸ್ಕರಿಸಿತು. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕಿಂತಲೂ ಒಬ್ಬ ವ್ಯಕ್ತಿಯ ಮಾತಿಗೆ ಬಿಜೆಪಿ ಹೈಕಮಾಂಡ್ ಹೆಚ್ಚು ಬೆಲೆ ನೀಡಿತೇ? ಎನ್ನುವ ಪ್ರಶ್ನೆಗಳು ಸದ್ಯ ಕೇಳಿ ಬಂದಿದೆ. ಇದಕ್ಕೆ ಪ್ರಮುಖ ಕಾರಣ, ರಾಜ್ಯಸಭಾ ಅಭ್ಯರ್ಥಿ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಲ್.ಸಂತೋಷ್ ಅವರ ಕೈವಾಡವಿದೆ ಎಂದು ಕೆಲವು ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ.

ಬಿಜೆಪಿ ಹೈಕಮಾಂಡ್ ನ ನಿರ್ಧಾರ ಯಡಿಯೂರಪ್ಪ ಅವರು ತೆಗೆದುಕೊಳ್ಳುವ ನಿರ್ಧಾರಗಳ ವಿರುದ್ಧವೇ ಇರುವುದು ಬಹಳಷ್ಟು ಬಾರಿ ರಾಜ್ಯದ ಜನತೆಗೆ ಅನುಮಾನಗಳನ್ನು ಸೃಷ್ಟಿಸಿತ್ತು. ಆದರೆ ಯಡಿಯೂರಪ್ಪನವರನ್ನು ಆಡಳಿತದಲ್ಲಿ ಹಾಗೂ ಪಕ್ಷದ ವಿಚಾರದಲ್ಲಿ ಪದೇ ಪದೇ ಡಿಸ್ಟರ್ಬ್ ಮಾಡುತ್ತಿರುವ ಶಕ್ತಿ ಯಾವುದು? ಎನ್ನುವುದು ಇದೀಗ ಪಕ್ಷದ ಒಳಗೆ ಮತ್ತು ಹೊರಗೆ ದೊಡ್ಡ ಪ್ರಶ್ನೆಯಾಗಿ ಬೆಳೆಯುತ್ತಿದೆ.

ಸದ್ಯದ ಮಾಧ್ಯಮ ವರದಿಗಳ ಪ್ರಕಾರ, ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ಸಿಗಲು ಆರೆಸ್ಸೆಸ್ ಮುಖಂಡ ಬಿ.ಎಲ್.ಸಂತೋಷ್ ಅವರೇ ಕಾರಣರಾಗಿದ್ದಾರೆ. ಈರಣ್ಣ ಕಡಾಡಿ ಅವರು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಆಪ್ತರಾಗಿದ್ದಾರೆ. ಬೆಳಗಾವಿ ಬಿಜೆಪಿಯಲ್ಲಿ ಯಾರು ಪವರ್ ಫುಲ್ ಎಂದು ರೂಪಿಸಲು ಉಮೇಶ್ ಕತ್ತಿ ವಿರುದ್ಧ ಸಮರ ಸಾರಿದಂತೆ ಈ ಘಟನೆ ಕಂಡು ಬಂದಿದೆ. ಬಿಜೆಪಿಯೊಳಗಿನ ನಾಯಕತ್ವ ಪ್ರಬಲತೆಯ ಪೈಪೋಟಿ ರಾಜ್ಯ ಬಿಜೆಪಿಯನ್ನು ದಿನದಿಂದ ದಿನಕ್ಕೆ ದುರ್ಬಲಗೊಳಿಸುತ್ತಿದೆ.

 

Share Post

Leave a Reply

Your email address will not be published. Required fields are marked *

error: Content is protected !!