ಹಂಪಿಯಲ್ಲಿ ಲಘು ಭೂಕಂಪ

ನವದೆಹಲಿ,; ಇಂದು ಬೆಳಗ್ಗೆ ಏಕಕಾಲದಲ್ಲಿ ಕರ್ನಾಟಕದ ಹಂಪಿ ಮತ್ತು ಜಾರ್ಖಂಡ್‍ನ ಜೆಮ್‍ಶೆಡ್‍ಪುರದಲ್ಲಿ ಲಘು ಭೂಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಜರ್ಖಂಡ್ ರಾಜ್ಯದ ಜಮ್‍ಶೆಡ್‍ಪುರದಲ್ಲಿ ಬೆಳಿಗ್ಗೆ 6.55ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 4.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇದೇ ಸಮಯದಲ್ಲಿ ಕರ್ನಾಟಕದ ಹಂಪಿಯಲ್ಲೂ ಸೌಮ್ಯ ತೀವ್ರತೆಯ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.0ರಷ್ಟು ಭೂಕಂಪನದ ತೀವ್ರತೆ ಇದೆ ಎಂದು ಹೇಳಿದೆ. ಘಟನೆಯಿಂದ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಹೇಳಲಾಗಿದೆ.

 

Share Post

Leave a Reply

error: Content is protected !!