ಮುಂಬೈನ ರೆಸ್ಟೋರೆಂಟ್ನ ಒಳಚರಂಡಿಯಲ್ಲಿ 2 ಸಿಬ್ಬಂದಿ ಶವ ಪತ್ತೆ

ಮುಂಬೈ,: ಮುಂಬೈನ ಹೊರವಲಯದಲ್ಲಿರುವ ಬಾರ್‌ ಆಂಡ್ ರೆಸ್ಟೋರೆಂಟ್ ಒಂದರ ಚರಂಡಿಯಲ್ಲಿ ಇಬ್ಬರು ಸಿಬ್ಬಂದಿಯ ಶವ ಪತ್ತೆಯಾಗಿದೆ. ಗುರುವಾರ ರಾತ್ರಿ ಶವ ಪತ್ತೆಯಾಗಿದೆ. ರೆಸ್ಟೋರೆಂಟ್ ಮಾಲೀಕರು ನಮ್ಮ ಇಬ್ಬರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ, ಕರೆ ಮಾಡಿದರೂ ಅವರಿಗೆ ತಲುಪುತ್ತಿಲ್ಲ ಎಂದು ಹೇಳಿದ್ದರು. ಮ್ಯಾನೇಜರ್ ಹರೀಶ್ ಶೆಟ್ಟಿ(42), ವೈಟರ್(58) ಮೃತರು. ರೆಸ್ಟೋರೆಂಟ್ ಒಂದರಲ್ಲಿ ಇಬ್ಬರ ಕೊಲೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿತ್ತು. ಕೊರೊನಾ ಲಾಕ್‌ಡೌನ್‌ನಿಂದಾಗಿ ರೆಸ್ಟೋರೆಂಟ್ ಮುಚ್ಚಿರುವಾಗ ಈ ಇಬ್ಬರು ಸಿಬ್ಬಂದಿ ಹೇಏಗೆ ಕೊಲೆಯಾದರು ಎಂಬ ಕುರಿತು ತನಿಖೆ ಆರಂಭಿಸಿದ್ದಾರೆ. ರೆಸ್ಟೋರೆಂಟ್‌ಗೆ ಪೊಲೀಸರ ತಂಡ ಭೇಟಿ ನೀಡಿದೆ. ಡ್ರೈನೇಜ್ ಟ್ಯಾಂಕ್‌ನಿಂದ ಎರಡು ದೇಹವನ್ನು ಹೊರತೆಗೆಯಲಾಗಿದೆ. ದೇಹದ ಮೇಲೆ ಗಾಯದ ಗುರುತುಗಳಿದ್ದವು. ಮರಣೋತ್ತರ ಪರೀಕ್ಷೆಗಾಗಿ ಎರಡು ದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಲೆಗೆ ಕಾರಣವೇನೆಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

Share Post

Leave a Reply

error: Content is protected !!