ಭೂಗತ ಪಾತಕಿ ದಾವೂದ್ ಹಾಗೂ ಆತನ ಪತ್ನಿಗೆ ಕರೋನವೈರಸ್ ಸೊಂಕು

ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿಗೆ ಕರೋನವೈರಸ್‌ ಸೊಂಕು ಇರುವುದು ಧೃಡಪಟ್ಟಿದೆ ಎನ್ನಲಾಗಿದೆ. ಮುಂಬೈನ ಡೊಂಗ್ರಿಯಲ್ಲಿ ಜನಿಸಿದ ದಾವೂದ್ ಇಬ್ರಾಹಿಂ ಕಸ್ಕರ್ ಪ್ರಸ್ತುತ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎನ್ನಲಾಗಿದೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪದಕರಲ್ಲಿ ದಾವೂದ್ ಇಬ್ರಾಹಿಂ ಕೂಡ ಒಬ್ಬನಾಗಿದ್ದಾನೆ, ದಾವೂದ್ 1993 ರ ಬಾಂಬೆ ಸ್ಫೋಟದ ಆರೋಪಿಯಾಗಿದ್ದು, ಆತನ ವಿರುದ್ಧ ಹಲವಾರು ಇಂಟರ್‌ಪೋಲ್ ನೋಟಿಸ್‌ಗಳಿವೆ. ಸದ್ಯ ದಾವೊದು ಪ್ರಸ್ತುತ ಕರಾಚಿಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಇದೇ ವೇಳೆ ಪತ್ನಿ ಮೆಹಜಾಬಿನ್ ಸಹ ಸೊಂಕಿಗೆ ಈಡಾಗಿದ್ದಾರೆ ಎನ್ನಲಾಗಿದೆ. 2003 ರಲ್ಲಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ದಾವೂದ್ ಅವರನ್ನು ಜಾಗತಿಕ ಭಯೋತ್ಪಾದಕನ್ನಾಗಿ ಘೋಶಣೆ ಮಾಡಿದೆ.

 

Share Post

Leave a Reply

error: Content is protected !!