‘ಇಂಡಿಯಾ’ ಹೆಸರು ತೆಗೆದು ಹಾಕುವಂತೆ ಕೋರಿದ್ದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದು ಹೀಗೆ…

ಹೊಸದಿಲ್ಲಿ : ದೇಶದ ಹೆಸರು ಕೇವಲಭಾರತ್ಎಂದು ಮಾತ್ರ ಇರಬೇಕು ಹಾಗೂಇಂಡಿಯಾಪದವನ್ನು ತೆಗೆಯಲು ಅನುವಾಗಲು ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆದಿದೆ.

ಸಂದರ್ಭ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎಸ್ ಬೊಬ್ಡೆ, ‘ಸಂವಿಧಾನದಲ್ಲಿ ಇಂಡಿಯಾ ಈಗಾಗಲೇ ಭಾರತ್ ಎಂದೇ ಕರೆಯಲ್ಪಡುವುದರಿಂದ ಸುಪ್ರೀಂ ಕೋರ್ಟ್ಗೆ ಕುರಿತು ಏನೂ ಮಾಡಲು ಸಾಧ್ಯವಿಲ್ಲಎಂದು ಹೇಳಿದರು.

ಸಂವಿಧಾನದ ಒಂದನೇ ವಿಧಿಗೆ ತಿದ್ದುಪಡಿ ತರಬೇಕೆಂದು ದಿಲ್ಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಪಿಐಎಲ್ನಲ್ಲಿ ಕೋರಿದ್ದರಲ್ಲದೆ ಇಂತಹ ಒಂದು ಕ್ರಮವು ದೇಶದ ವಸಾಹತುಶಾಹಿ ನೆನಪನ್ನು ಅಳಿಸಲು ನಾಗರಿಕರಿಗೆ ಸಹಾಯ ಮಾಡುವುದು ಎಂದೂ ವಾದಿಸಿದ್ದರು.

ಭಾರತದ ಹೆಸರಿನ ಆಂಗ್ಲ ಪದವನ್ನು ತೆಗೆದು ಹಾಕುವುದು ಕೇವಲ ಸಾಂಕೇತಿಕ ಎಂದು ಕಂಡರೂ ಅದು ನಮಗೆ ಹಾಗೂ ಭವಿಷ್ಯದ ಜನಾಂಗಗಳಿಗೆ ನಮ್ಮ ರಾಷ್ಟ್ರೀಯತೆಯ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುವುದು ಹಾಗೂ ನಮ್ಮ ಪೂರ್ವಜರು ಕಷ್ಟಪಟ್ಟು ದೊರಕಿಸಿ ಕೊಟ್ಟ ಸ್ವಾತಂತ್ರ್ಯವನ್ನು ಸಮರ್ಥಿಸಿದಂತಾಗುವುದುಎಂದೂ ಅರ್ಜಿದಾರರು ಹೇಳಿದ್ದರು.

Share Post

Leave a Reply

error: Content is protected !!