ಹೊರರಾಜ್ಯ ದಿಂದ ಬರುವವರು ಈ ನಿಯಮಗಳನ್ನು ತಿಳಿದುಕೊಳ್ಳಿ: ಡಿಜಿಪಿ

ಬೆಂಗಳೂರು, ಜೂನ್ 3 : ಕೇಂದ್ರ ಸರ್ಕಾರದ ಅನ್‌ಲಾಕ್‌ 1 ಮಾರ್ಗಸೂಚಿಯಂತೆ ಅಂತರರಾಜ್ಯ ಸಂಚಾರಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಆದರೆ, ಕರ್ನಾಟಕಕ್ಕೆ ಬರುವವರಿಗೆ ಕೆಲವು ನಿಬಂಧನೆಗಳನ್ನು ಹಾಕಲಾಗಿದೆ.

ಈ ಕುರಿತು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

* ಕರ್ನಾಟಕಕ್ಕೆ ಬರುವ ಎಲ್ಲ ನಾಗರಿಕರು ಸೇವಾಸಿಂಧು ವೆಬ್‌ಸೈಟ್‌ನಲ್ಲಿ ತಮ್ಮ ಪೂರ್ತಿ ವಿವರ ನೋಂದಣಿ ಮಾಡಿಕೊಳ್ಳಬೇಕು. ಹೆಸರು, ವಿಳಾಸ, ಆಧಾರ್ ನಂಬರ್ ಸಹಿತ ಮಾಹಿತಿ ನೀಡಬೇಕು.

* ಯಾವುದೇ ರಾಜ್ಯದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ರೋಗಲಕ್ಷಣ ಕಂಡುಬಂದಲ್ಲಿ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗುತ್ತೆ. ತಕ್ಷಣವೇ ಕೊರೊನಾ ಪರೀಕ್ಷೆ ಮಾಡಲಾಗುತ್ತೆ. ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ನೆಗಿಟಿವ್ ಬಂದರೆ ಮನೆಗೆ ಕಳುಹಿಸಲಾಗುತ್ತೆ.

* ಮಹಾರಾಷ್ಟ್ರದಿಂದ ಬರುವ ಪ್ರತಿಯೊಬ್ಬರಿಗೆ ಏಳು ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯ. ನಂತರ ಮನೆಯಲ್ಲಿ ಏಳು ದಿನ ಕ್ವಾರಂಟೈನ್ ಆಗಬೇಕು.

* ಉದ್ಯಮಿಗಳು, ವ್ಯವಹಾರದ ದೃಷ್ಟಿಯಿಂದ ಬರುವವರು ಉದ್ದೇಶ ತಿಳಿಸಬೇಕು. ಪ್ರಯಾಣದ ವಿವರ ನೀಡಬೇಕು. ಐಸಿಎಂಆರ್‌ನಿಂದ ನೆಗಿಟಿವ್ ಪ್ರಮಾಣಪತ್ರ ತರಬೇಕು.

ಮಹಾರಾಷ್ಟ್ರದಲ್ಲಿ ಹೆಚ್ಚು ಕೊರೊನಾ ಕೇಸ್ ವರದಿಯಾಗಿದೆ. ಮಹಾರಾಷ್ಟ್ರದಿಂದ ಬಂದ ಬಹುತೇಕರಲ್ಲಿ ಸೋಂಕು ದೃಢಪಟ್ಟಿದೆ. ಪ್ರತಿದಿನ ರಾಜ್ಯದಲ್ಲಿ ದೃಢವಾಗುತ್ತಿರುವ ಸೋಂಕಿತರು ಬಹುತೇಕ ಎಲ್ಲರೂ ಮಹಾರಾಷ್ಟ್ರ ನಂಟು ಹೊಂದಿದ್ದರು.

 

Share Post

Leave a Reply

Your email address will not be published. Required fields are marked *

error: Content is protected !!