ಅಸ್ಸಾಂನ ನೈಸರ್ಗಿಕ ತೈಲ ಉತ್ಪಾದನಾ ಘಟಕದಲ್ಲಿ ಅನಿಲ ಸೋರಿಕೆ

ಗುವಾಹಟಿ, ಜೂನ್ 3: ಅಸ್ಸಾಂನ ನೈಸರ್ಗಿಕ ತೈಲ ಉತ್ಪಾದನೆ ಮಾಡುವ ಆಯಿಲ್ ಇಂಡಿಯಾ ಲಿಮಿಟೆಡ್ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು, ಸಿಂಗಾಪುರದ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ.

ಅಸ್ಸಾಂನಲ್ಲಿರುವ ತೈಲ ಬಾವಿಯಿಂದ ಅನಿಲ ಸೋರಿಕೆಯಾಗುತ್ತಿರುವುದು ಸುತ್ತಮುತ್ತಲಿನ ಜನರಲ್ಲಿ ಆತಂಕ ಹೆಚ್ಚಿದೆ.

ಕಳೆದ ಒಂದು ವಾರದ ಹಿಂದಷ್ಟೇ ತೈಲ ಭಾವಿ ಸ್ಫೋಟಗೊಂಡಿತ್ತು ಅದಾದ ಬಳಿಕ ನಿರಂತರವಾಗಿ ಅನಿಲ ಸೋರಿಕೆಯಾಗುತ್ತಿದೆ. ಸುತ್ತಮುತ್ತಲ ಪ್ರದೇಶದಲ್ಲಿರುವ 2500ಕ್ಕೂ ಹೆಚ್ಚು ಕುಟುಂಬವನ್ನು ಸ್ಥಳಾಂತರಿಸಲಾಗಿದೆ.

ಮೇ 27ರಂದು ತೈಲ ಘಟಕದಲ್ಲಿ ಸ್ಫೋಟ ಸಂಭವಿಸಿತ್ತು. ಭಾಗಜನ್ ಆಯಿಲ್ ಫೀಲ್ಡ್‌ನಲ್ಲಿ ಈ ಘಟನೆ ನಡೆದಿತ್ತು.ಸಿಂಗಾಪುರದ ತಜ್ಞರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲಿಸುತ್ತಿದ್ದಾರೆ. ಈ ತೈಲ ಬಾವಿಯನ್ನು ಆಯಿಲ್ ಇಂಡಿಯಾ ಲಿಮಿಟೆಡ್ ನೋಡಿಕೊಳ್ಳುತ್ತಿದೆ. ಅಲ್ಲೇ ಹತ್ತಿದಲ್ಲಿರುವ ನದಿಯಲ್ಲಿ ಡಾಲ್ಫಿನ್ ಒಂದು ಸಾವನ್ನಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಅವರೊಂದಿಗೆ ಮಾತಕತೆ ನಡೆಸಿದ್ದು, ಅವರು ಸಿಂಗಾಪುರದಿಂದ ತಜ್ಞರನ್ನು ಕರೆಸಿದ್ದಾರೆ. ಇದೀಗ ಸ್ಫೋಟಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆಯಾಗುತ್ತಿದೆ.

 

Share Post

Leave a Reply

Your email address will not be published. Required fields are marked *

error: Content is protected !!