ಜೂನ್ 1 ರಿಂದ ದೆಹಲಿ ಮೆಟ್ರೋ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ

ನವದೆಹಲಿ,: ಕೊರೊನಾವೈರಸ್ ಭೀತಿಯಲ್ಲಿ ದೇಶದ ಎಲ್ಲ ಮೆಟ್ರೋ ರೈಲು ಸೇವೆಗಳು ಬಂದ್ ಆಗಿವೆ. ಅನೇಕ ಮಹಾನಗರಗಳಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಮುಗಿದ ಮೇಲೂ ಮೆಟ್ರೋ ರೈಲು ಸಂಚಾರ ಆರಂಭವಾಗುವ ಲಕ್ಷಣಗಳಿಲ್ಲ. ಮನೆಯಲ್ಲೇ ಕ್ವಾರಂಟೈನ್ ಗೆ ಅವಕಾಶ ಕೊಡಿ ಎಂದು ಬೇಡಿಕೊಳ್ತಿದ್ದಾರೆ ಗರ್ಭಿಣಿಯರು  ಆದರೆ, ದೆಹಲಿ ಮೆಟ್ರೋ ರೈಲು ಸೇವೆ ಜೂನ್ 1 ರಿಂದ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ. ಏಕೆಂದರೆ ದೆಹಲಿ ಮೆಟ್ರೋ ಬುಧವಾರ ಪ್ರಕಟಣೆ ಹೊರಡಿಸಿದ್ದು, ಜೂನ್ 1 ರಿಂದ ಮೆಟ್ರೋ ಆವರಣದಲ್ಲಿ ಉಗುಳಿದರೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಐದು ಪಟ್ಟು ಹೆಚ್ಚಳ ಮಾಡಿದೆ. ಹೀಗಾಗಿ ದೆಹಲಿ ಮೆಟ್ರೋ ಜೂನ್ 1 ರಿಂದ ಸಂಚಾರ ಆರಂಭಿಸಲಿದೆ ಎನ್ನಲಾಗುತ್ತಿದೆ. ದೆಹಲಿ ಮೆಟ್ರೋ ಆವರಣದಲ್ಲಿ ಉಗುಳುವುದು ಯಾವಾಗಲೂ ಅಪರಾಧ. ಉಗುಳಿದರೆ ಎರಡು ನೂರು ರುಪಾಯಿ ದಂಡ ವಿಧಿಸಲಾಗುತ್ತಿತ್ತು. ಈ ದಂಡದ ಮೊತ್ತವನ್ನು ಐದು ಪಟ್ಟು ಅಂದರೆ, 1 ಸಾವಿರ ರುಪಾಯಿಗೆ ಹೆಚ್ಚಿಸಲಾಗಿದೆ. ಈ ಮೊದಲು ಲಾಕ್‌ಡೌನ್ 3.0 ಮುಗಿದ ಮೇಲೆ ದೆಹಲಿ ಮೆಟ್ರೋ ರೈಲು ಸಂಚಾರ ಆರಂಭಿಸಲು ಸಿದ್ದತೆ ಮಾಡಿಕೊಂಡಿತ್ತು. ಆದರೆ, ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ.

Share Post

Leave a Reply

error: Content is protected !!